ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಅಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮ
ಹೊಣಕೆರೆ ಹೋಬಳಿ ವ್ಯಾಪ್ತಿಯ ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಪೊಲೀಸ್ ಇಲಾಖೆಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ಪಿಎಸ್ಐ ಅವರು ಸಿಪಿಸಿ ಪ್ರದೀಪ್, ಸಿಪಿಸಿ ಪ್ರಕಾಶ್ ಹಾಗೂ ಚಾಲಕ ಚೇತನ ಅವರೊಂದಿಗೆ ಗಂಗಸಮುದ್ರಕ್ಕೆ ತೆರಳಿದರು. ಮಾರ್ಗಮಧ್ಯೆ ಇಬ್ಬರು ಪಂಚಾಯತ್ ಸದಸ್ಯರನ್ನು ಕೂಡ ಕರೆದುಕೊಂಡು ತೆರಳಿದ ಪೊಲೀಸರು ಬಾಬು ಪ್ರಾವಿಜನ್ ಸ್ಟೋರ್ ಬಳಿ ದಾಳಿ ನಡೆಸಿದರು.
ದಾಳಿಯ ವೇಳೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಮಂದಿ ಮದ್ಯಪಾನ ಮಾಡುತ್ತಿರುವುದನ್ನು ಕಂಡು, ಆ ವ್ಯಕ್ತಿಗಳು ಸ್ಥಳದಿಂದ ಓಡಿ ಹೋಗಿದರು. ನಂತರ ಅಂಗಡಿಯಲ್ಲಿ ಹಾಜರಿದ್ದ ಮಾಲೀಕ ಲೋಕೇಶ್ ಜಿ.ಡಿ (28) ಅವರನ್ನು ವಿಚಾರಿಸಲಾಯಿತು. ಅವರು ಮದ್ಯಪಾನಕ್ಕೆ ಸ್ಥಳ ನೀಡಿದ್ದನ್ನು ಒಪ್ಪಿಕೊಂಡು, ಮದ್ಯಪಾನ ಮಾಡಿದವರು ಯಾರು ಎಂಬುದು ಅವರಿಗೆ ತಿಳಿಯದು ಎಂದು ತಿಳಿಸಿದರು.
ಪೋಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿನ ಪ್ಲಾಸ್ಟಿಕ್ ಕವರ್ನಲ್ಲಿ Original Choice ಬ್ರಾಂಡ್ನ 90 ಎಂ.ಎಲ್ ಮದ್ಯದ ಐದು ಪೌಚುಗಳು (ಒಟ್ಟು 450 ಎಂ.ಎಲ್, ಮೌಲ್ಯ ₹250), ನಾಲ್ಕು ಪ್ಲಾಸ್ಟಿಕ್ ಲೋಟಗಳು ಹಾಗೂ ಒಂದು ಪ್ಲಾಸ್ಟಿಕ್ ಕವರ್ ಪತ್ತೆಯಾಗಿ, ಅವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡರು.
ಮೇಲ್ಕಂಡ ವಸ್ತುಗಳನ್ನು ಬಿಳಿ ಬಟ್ಟೆ ಚೀಲದಲ್ಲಿ ಸೀಲಿಟ್ಟು, ಸೈನ್ ಒಳಗೊಂಡ ಚೀಟಿ ಅಂಟಿಸಿ ಸಧ್ಯದ ಮಹಜರ್ ಪ್ರಕ್ರಿಯೆ ನಡೆಸಲಾಯಿತು. ನಂತರ ಆರೋಪಿಯನ್ನು ಮತ್ತು ವಶಪಡಿಸಿದ ವಸ್ತುಗಳನ್ನು ಠಾಣೆಗೆ ಕರೆತಂದು, ಪೊಲೀಸ್ ವರದಿ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಹಾಜರಾತು ಮಾಡಲಾಗಿದೆ.
ವರದಿ :
ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್

