ಸುದ್ದಿ 

ಒಡಿಸ್ಸಾ ಗೆ ತೆರಳಿದ್ದ ವ್ಯಕ್ತಿ ನಾಪತ್ತೆ: ಸ್ನೇಹಿತ ಕಾಣೆಯಾಗಿರುವ ಬಗ್ಗೆ ದೂರು ದಾಖಲಾತಿ.

Taluknewsmedia.com

ಬೆಂಗಳೂರು ನಗರದಲ್ಲಿ ಒಡಿಸ್ಸಾ ರಾಜ್ಯದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅವರ ಸ್ನೇಹಿತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ದಿನಾಂಕ 26/06/2025 ರಂದು ಬೆಳಿಗ್ಗೆ 10:00 ಗಂಟೆಗೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ತಮ್ಮ ಸ್ನೇಹಿತ ಖಾನು ಚರಣ ಪ್ರಧಾನ್ ಅವರು ದಿನಾಂಕ 20/06/2025 ರಂದು ತಮ್ಮ ಮನೆಗೆ ಬಂದಿದ್ದು, ಬಳಿಕ 21/06/2025 ರಂದು ಬೆಳಗ್ಗೆ 6:00 ಗಂಟೆಗೆ “ನಾನು ನನ್ನ ಸ್ವಂತ ಊರಾದ ಒಡಿಸ್ಸಾಕೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಕೇಶ್ ಜನ್ಯ ರವರು ಅವರ ಸ್ನೇಹಿತನನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಬಿಟ್ಟಿದ್ದಾರೆ. ಆದರೆ ಅದಾದ ನಂತರ ಖಾನು ಚರಣ ಪ್ರಧಾನ್ ಅವರು ತಮ್ಮ ಊರಾದ ಒಡಿಸ್ಸಾ ರಾಜ್ಯದ ಮನೆಗೆ ತಲುಪದೇ, ಕಳೆದುಹೋಗಿದ್ದಾರೆ.

ಸಂಬಂಧಿತ ಕುಟುಂಬಸ್ಥರು ಹಾಗೂ ಸ್ನೇಹಿತರು ಅವರಿಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಅವನ ಪತ್ತೆಗಾಗಿ ತನಿಖೆ ಪ್ರಾರಂಭಿಸಲಾಗಿದೆ.
ಸಾರ್ವಜನಿಕರಿಂದ ವಿನಂತಿ – ಯಾರಿಗಾದರೂ ಖಾನು ಚರಣ ಪ್ರಧಾನ್ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Related posts