ಸುದ್ದಿ 

ದಲಿತ ಸಾಹಿತ್ಯ ಪರಿಷತ್ ನಾಗಮಂಗಲ ತಾಲ್ಲೂಕು ಘಟಕದ ನೂತನ ಕಾರ್ಯಕಾರಿಣಿ ರಚನೆ.

Taluknewsmedia.com

ನಾಗಮಂಗಲ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ ಸಭೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲಾ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲ್ಲೂಕು ಘಟಕದ ನೂತನ ಕಾರ್ಯಕಾರಿಣಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಗದ್ದೇಭೂವನಹಳ್ಳಿ ದೇವರಾಜ್, ಉಪಾಧ್ಯಕ್ಷರಾಗಿ ಕ್ಯಾತನಹಳ್ಳಿ ಮಂಜು ಮತ್ತು ಬೆಟ್ಟದ ಮಲ್ಲೇನಹಳ್ಳಿ ರಮೇಶ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸಾಮಕಹಳ್ಳಿ ಜವರಯ್ಯ ಮತ್ತು ಸಿಬಿ ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದರಾಜು, ಸಹಕಾರ್ಯದರ್ಶಿಯಾಗಿ ಸುರೇಶ್ ಆರಣಿ, ಖಜಾಂಚಿಯಾಗಿ ಕದಬಹಳ್ಳಿ ನಿಂಗಯ್ಯ ನೇಮಕವಾಗಿದ್ದಾರೆ.ಕಾನೂನು ಸಲಹೆಗಾರರಾಗಿ ವಕೀಲ ಮಹದೇವ್, ಪತ್ರಿಕಾ ಕಾರ್ಯದರ್ಶಿಯಾಗಿ ವಿಜಯಾನಂದ, ನಿರ್ದೇಶಕರಾಗಿ ದೇವೀರಮ್ಮ, ನಲ್ಕುಂದಿ ನಾಗರಾಜು ಮತ್ತು ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಕ್ರಮಗಳು, ಚಟುವಟಿಕೆಗಳು ಹಾಗೂ ದಲಿತ ಸಮುದಾಯದ ಸಾಮಾಜಿಕ ಬಲವರ್ಧನೆಯ ಕುರಿತು ಮಹತ್ವದ ಚರ್ಚೆ ನಡೆಯಿತು.

– ವರದಿ ಧನುಷ್ ಎ ಗೌಡ

ಕಾಚೇನಹಳ್ಳಿ, ತಾಲೂಕ್ ನ್ಯೂಸ್

Related posts