ಮೊಬೈಲ್ ಟವರ್ ಸಾಧನಗಳ ಕಳ್ಳತನ: GTL ಕಂಪನಿಗೆ ₹9.45 ಲಕ್ಷ ನಷ್ಟ!
ಬೆಂಗಳೂರು ನಗರದ ಬಸ್ಕರ್‌ಟೌನ್ ಹಾಗೂ ಸಂಜೀವಿನಿನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ಟವರ್ ಉಪಕರಣಗಳ ಕಳ್ಳತನದಿಂದ ಚಕಿತಗೊಂಡಿರುವ GTL Infrastructure Ltd ಕಂಪನಿ, ಈ ಬಗ್ಗೆ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದೆ. FIR ಅಂಶಗಳು ಇದೀಗ ಲಭ್ಯವಾಗಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಿಸ್ಟರ್ ಅಫ್ಜಾ ಪಾಷಾ: ದೂರು ನೀಡಿದವರು, ಬೆಂಗಳೂರು ಬಸ್ಕರ್‌ಟೌನ್‌ನ ನಿವಾಸಿ ಮತ್ತು GTL ಕಂಪನಿಯಲ್ಲಿ ಸಾಧೀನ ಅಧಿಕಾರಿ (Acquisition Officer) ಆಗಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ
GTL ಕಂಪನಿಯು ಸಂಜೀವಿನಿನಗರದ 11ನೇ ಕ್ರಾಸ್, ಮನೆ ಸಂಖ್ಯೆ 2159, ಎಂ. ಚಂದ್ರಪ್ಪ ಮತ್ತು ಮಂಜುಳರ ಸ್ವತ್ತಿನಲ್ಲಿ ಮೊಬೈಲ್ ಟವರ್ ಸ್ಥಾಪನೆಗಾಗಿ 10-01-2025 ರಿಂದ 31-01-2025ರ ವರೆಗೆ ಒಪ್ಪಂದ ಮಾಡಿಕೊಂಡಿತ್ತು.
ಕಂಪನಿಯ ಟೆಕ್ನಿಷಿಯನ್‌ಗಳು ತಪಾಸಣೆಗೆ ಸ್ಥಳಕ್ಕೆ ತೆರಳಿದಾಗ, ಟವರ್, ಶೆಲ್ಟರ್, ಡೀಸೆಲ್ ಜನರೇಟರ್ ಹಾಗೂ ಇತರೆ ಉಪಕರಣಗಳು ಸಂಪೂರ್ಣವಾಗಿ ಮಾಯವಾಗಿದ್ದವು.
ಈ ಸಾಧನಗಳ ಒಟ್ಟೂ ಮೌಲ್ಯವು ₹9,45,546 ಎಂದು ಲೆಕ್ಕಿಸಲಾಗಿದೆ.
ಅಪರಿಚಿತ ವ್ಯಕ್ತಿಗಳ ಕೈಚಳಕ?
ಮಿಸ್ಟರ್ ಅಫ್ಜಾ ಪಾಷಾ ಈ ಸಾಧನಗಳನ್ನು ಕಂಪನಿಯ ಇಪ್ಪಿಗೆ ಇಲ್ಲದೆ ಯಾರೋ ಅಪರಿಚಿತ ವ್ಯಕ್ತಿಗಳು ತೆಗೆದುಕೊಂಡು ಹೋಗಿರುವ ಶಂಕೆ ಇದೆ. ಇದರಿಂದ ಸಂಸ್ಥೆಗೆ ಭಾರೀ ಆರ್ಥಿಕ ನಷ್ಟವಾಗಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ, ಸ್ಥಳೀಯ ಸಾಕ್ಷ್ಯಗಳು ಮತ್ತು ತಜ್ಞರ ನೆರವಿನಿಂದ ತನಿಖೆ ನಡೆಯುತ್ತಿದೆ.

