ಸುದ್ದಿ 

ಬೈಕ್ ಡಿಕ್ಕಿ ಅಪಘಾತ: ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲು – ಬಸವೆಗೌಡ ರಿಗೆ ಗಂಭೀರ ಗಾಯ

Taluknewsmedia.com

ಮಂಡ್ಯ-ನಾಗಮಂಗಲ ರಸ್ತೆಯ ಕರಡಹಳ್ಳಿ ಗೇಟ್ ಹತ್ತಿರ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರಾದ ಬಸವೇಗೌಡರಿಗೆ ತಲೆ, ಎದೆ, ಬಲಗಾಲು ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ನಿವಾಸಿ ಕುಮಾರಸ್ವಾಮಿ ಎಸ್ ಅವರು ನೀಡಿದ ದೂರಿನ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ಅವರು ಅಂಗಡಿಯ ಬಳಿಯಲ್ಲಿ ಸಹಗ್ರಾಮಸ್ಥ ಮಹೇಶ್ ಅವರೊಂದಿಗೆ ನಿಂತುಕೊಂಡು ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ ಮಂಡ್ಯ ಕಡೆಯಿಂದ ಬಸವೇಗೌಡರು ಪ್ಯಾಷನ್ ಪ್ರೋ ಬೈಕ್ (ನಂ. ಕೆಎ-54 F-9070) ಮೇಲೆ ನಿಯಮಾನುಸಾರ ರಸ್ತೆಯ ಎಡಭಾಗದಲ್ಲಿ ಬಂದು ಬಲದಿಕ್ಕಿಗೆ ತಿರುಗುತ್ತಿದ್ದಾಗ, ಮತ್ತೊಂದು ಬೈಕ್ (ಹೀರೋ ಹೊಂಡಾ ಸ್ಟೇಡರ್, ನಂ. ಕೆಎ-16 ET-1522) ಅತೀವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದಿದೆ.

ಈ ಡಿಕ್ಕಿಯಿಂದ ಇಬ್ಬರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಅಪಘಾತದ ತಕ್ಷಣ ಅಲ್ಲಿಯ ಜನರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು. ಕುಮಾರಸ್ವಾಮಿ ಎಸ್ ಅವರ ಪ್ರಕಾರ, ಅವರು ತಾವೇ ಅಂಬುಲಾನ್ಸ್ ಮೂಲಕ ಗಾಯಾಳುಗಳನ್ನು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಬಸವೇಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಮಾಡಿದ ಬೈಕ್ ಚಾಲಕನನ್ನು “ಬಾಬು, ಸೋರಗುಂಟೆ ಗ್ರಾಮ, ಶಿರಾ ತಾಲೂಕು” ಎಂದು ಗುರುತಿಸಲಾಗಿದ್ದು, ಅವನಿಗೂ ತಲೆಗೆ ಮತ್ತು ಎಡಕಣ್ಣಿನ ಹತ್ತಿರ ಪೆಟ್ಟಾಗಿದ್ದಿದೆ. ಅಪಘಾತ ಸ್ಥಳಕ್ಕೆ ತಲುಪಿದ ಪೊಲೀಸರು ಎರಡೂ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಗೆ ತಡವಾಗಿ ಹಾಜರಾಗಿ ಕುಮಾರಸ್ವಾಮಿ ಅವರು ನೀಡಿದ ದೂರಿನ ಆಧಾರವಾಗಿ, ವಾಹನ ಚಾಲಕ ಬಾಬು ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ :

ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್

Related posts