ಆನೇಕಲ್: ಜಮೀನಿನ ದಾರಿಗೆ ಅಡ್ಡಕಟ್ಟು – ಸಂಬಂಧಿಕರಿಂದ ಬೈಗುಳ, ಬೆದರಿಕೆ ಆರೋಪ
ಆನೇಕಲ್ ಟೌನ್ನ ತಿಮ್ಮರಾಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಜಮೀನಿನ ದಾರಿಗೆ ಸಂಬಂಧಿಸಿದಂತೆ ನಡೆದ ಗಲಾಟೆಯ ಕುರಿತು ಭರತ್ ಬಿನ್ ಬಾಸ್ಕರ್ ಎಂಬುವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸಂಬಂಧಿಕರಿಂದ ಬೈಗುಳ, ಅಡ್ಡಕಟ್ಟು ಮತ್ತು ಪ್ರಾಣ ಬೆದರಿಕೆ ಆರೋಪಿಸಿದ್ದಾರೆ.
ಭರತ್ ಬಿನ್ ಭಾಸ್ಕರ ರವರ ಪ್ರಕಾರ, ಆನೇಕಲ್ ಗ್ರಾಮಾಂತರದ ಸರ್ವೆ ನಂ 148/2ರಲ್ಲಿ 0.08 ಗುಂಟೆ ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆದಿದೆ. ಈ ಜಾಗದಲ್ಲಿ ತಮಗೂ ಬಾಗಾಂಶವಿದ್ದು, ತಮ್ಮ ಮನೆಗೆ ಹೋಗುವ ದಾರಿ ಈ ಜಮೀನಿನಲ್ಲಿಯೇ ಇರುವುದಾಗಿ ಅವರು ತಿಳಿಸಿದ್ದಾರೆ.
ಆದರೆ, ಸಂಬಂಧಿಕರಾದ ಶ್ರೀದರ್, ಅವರ ಪತ್ನಿ ಕಾರ್ತಿಕ್ ವೇಣಿ, ಶ್ರೀನಾಥ್ ಪತ್ನಿ ವಿಜಯ ಮತ್ತು ಪ್ರಸಾದ್ ಪತ್ನಿ ಕವಿತಾ ಸೇರಿ, ಈ ದಾರಿಗೆ ಜೆ.ಸಿ.ಬಿ ಯಂತ್ರದ ಮೂಲಕ ಅಡ್ಡಕಟ್ಟು ಹಾಕಿದ್ದು, ದಾರಿ ತಡೆದಿದ್ದಾರೆ. ಮೇಲೆಮೇಲಾಗಿ, ದಾರಿ ಕೇಳಿದ ಕಾರಣಕ್ಕೆ ದುಷ್ಪ್ರಯೋಗಪೂರಿತ ಭಾಷೆಯಲ್ಲಿ ಬೈದು,
ಭರತ್ ರವರ ತಾಯಿಯವರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭರತ್ ಅವರು ನೀಡಿದ ದೂರಿನಲ್ಲಿ, ಆರೋಪಿಗಳು ಕೆಲಸಗಾರರನ್ನು ಕರೆಸಿಕೊಂಡು ಬೆದರಿಕೆ ಹಾಕಿದ್ದಾರೆಂದು ಕೂಡಾ ಅವರು ಆರೋಪಿಸಿದ್ದಾರೆ. ಸಂಬಂಧಿತ ಪ್ರಕರಣ ಆನೇಕಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಂಗ ಕ್ರಮದ ಮಧ್ಯೆ ಜಮೀನಿನ ಮಾಲೀಕತ್ವ ಸಂಬಂಧಿತ ಗೊಂದಲ ಇದೀಗ ಹೋರಾಟದ ಹಾದಿಗೆ ತಿರುಗಿದಂತಾಗಿದೆ.
ಪೋಲೀಸರು ದೂರು ಸ್ವೀಕರಿಸಿ, ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

