ಸುದ್ದಿ 

ವಾಕ್‌ಗಿಳಿದ ಮಹಿಳೆಗೆ ಆರ್.ಪಿ ರಸ್ತೆಯಲ್ಲಿ ದಾಳಿ ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಕಸಿದು ದುಷ್ಕರ್ಮಿಗಳು ಪರಾರಿ

Taluknewsmedia.com

ಬೆಂಗಳೂರು, ಜುಲೈ 3 2025

ನಗರದ ಆರ್.ಪಿ. ರಸ್ತೆಯಲ್ಲಿ ಬೆಳಿಗ್ಗೆ ವಾಕ್‌ಗಾಗಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಹಣವನ್ನು ಕಸಿದುಕೊಂಡು ಪರಾರಿಯಾದ ಘಟನೆ ಸಂಭವಿಸಿದೆ.

ಸೂರ್ಯನಾರಾಯಣ ಅವರು ತಮ್ಮ ಮನೆಬಿಟ್ಟು ಬೆಳಿಗ್ಗೆ ಸುಮಾರು 5:30ಕ್ಕೆ ವಾಕ್ ಮಾಡಲು ಹೊರಟಿದ್ದರು. ಬೆಳಗ್ಗೆ 6:00 ಗಂಟೆಯ ವೇಳೆಗೆ ಅವರು ಶ್ರೀ ಸಾಯಿ ಬೋಟಕ್ ಅಂಗಡಿಯ ಎದುರು, ಗೋವಿಂದಂ ಕೆಪೇ ಪಕ್ಕದಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ತಡೆದಿದ್ದಾರೆ.

ಅವರು ಮಹಿಳೆಯ ಕೈಯಲ್ಲಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬಲವಂತವಾಗಿ ಕಿತ್ತುಕೊಂಡು, ಜೇಬಿನಲ್ಲಿದ್ದ ಶ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು ₹150 ನಗದು ಹಣವನ್ನು ಸಹ ಎಳೆದುಕೊಂಡು ಪರಾರಿಯಾದರು. ನಂತರ ಅವರ ನಡುವೆ ಒಬ್ಬನು ಆಟೋ ಮೂಲಕ ಸ್ಥಳಕ್ಕೆ ಬಂದು ಎಲ್ಲಾ ಸೇರಿಕೊಂಡು ಪರಾರಿಯಾದರು ಎಂದು ತಿಳಿದು ಬಂದಿದೆ.

ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಂಪೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

Related posts