ಸುದ್ದಿ 

ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

Taluknewsmedia.com

ಬೆಂಗಳೂರು, ಜುಲೈ 3: 2025

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮನೆಯ ಬಾಗಿಲು ಮೀರಿ ಅಪರಿಚಿತ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿರುವ ಘಟನೆ ವರದಿಯಾಗಿದೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಅವರು ತಮ್ಮ ಕುಟುಂಬ ಸಮೇತ ಬೆಂಗಳೂರಿನ ವಿದ್ಯಾರಣ್ಯಪುರ ಪೋಸ್ಟ್ ವ್ಯಾಪ್ತಿಯ 3ನೇ ಮುಖ್ಯ ರಸ್ತೆ, ಮನೆ ಸಂಖ್ಯೆ 405 ರಲ್ಲಿ ವಾಸವಾಗಿದ್ದಾರೆ. ಅವರ ಭಾವಂದಿರಾದ ಸುಬ್ರಮಣ್ಯ ಭಟ್ ಅವರು ದಿನಾಂಕ 24 ಜೂನ್ 2025 ರಂದು ತಂದೆಯ ವಿಧಿವಶವಾದ ಕಾರಣದಿಂದ ಊರಿಗೆ ತೆರಳಿದ್ದು, ಮನೆಯ ಬೀಗವನ್ನು ದೂರುದಾರರ ಬಳಿ ಇಟ್ಟು ಹೋಗಿದ್ದರು.

ದಿನಾಂಕ 29 ಜೂನ್ 2025 ರಂದು ದೂರುದಾರರು ಭಾವನವರ ಮನೆಯನ್ನು ನೋಡಲು ಹೋಗಿದಾಗ, ಮನೆ ಬಾಗಿಲು ತೆರೆದಿರುವುದನ್ನು ಕಂಡು ಶಂಕಿತ ಸ್ಥಿತಿಯಲ್ಲಿದ್ದರು. ಒಳಗೆ ಪ್ರವೇಶಿಸಿ ಪರಿಶೀಲನೆ ಮಾಡಿದಾಗ, ಅಪರಿಚಿತ ದುಷ್ಕರ್ಮಿಗಳು ಮನೆ ಬಾಗಿಲು ಯಾವುದೇ ಆಯುಧದಿಂದ ಒಡೆದು ಒಳಗೆ ಪ್ರವೇಶಿಸಿ, ಕೆಳ ಮತ್ತು ಮೇಲ್ಮಹಡಿಗಳಲ್ಲಿರುವ ಎಲ್ಲ ರೂಮಿನ ಕಬೋರ್ಡುಗಳನ್ನು ತೆರೆದು ಒಳಗೆ ಇಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂಬುದು ಬಹಿರಂಗವಾಗಿದೆ.

ದೋಚಲಾದ ವಸ್ತುಗಳ ವಿವರ ಈ ಕೆಳಗಿನಂತಿದೆ:

ಚಿನ್ನದ ಬಳೆಗಳು – 24 ಗ್ರಾಂ

ಚಿನ್ನದ ಉಂಗುರಗಳು – 16 ಗ್ರಾಂ

ಚಿನ್ನದ ಚೈನ್ – 27 ಗ್ರಾಂ

ಮತ್ತೊಂದು ಚೈನ್ – 16 ಗ್ರಾಂ

ಡೈಮಂಡ್ ಉಂಗುರ – 5 ಗ್ರಾಂ

ಬಿಳಿ ಹರಳಿನ ಚಿನ್ನದ ಉಂಗುರ – 5 ಗ್ರಾಂ

ಚಿನ್ನದ ಜುಮಕಿ – 16 ಗ್ರಾಂ

ಚಿನ್ನದ ಕಿವಿಯೋಲೆ 3 ಜೋಡಿ – 16 ಗ್ರಾಂ

ಬೆಳ್ಳಿಯ ಸ್ಯಾಂಡಿಂಗ್ ಲ್ಯಾಂಪ್ – 2

ಬೆಳ್ಳಿಯ ಕೀ ಬಂಚ್ ಮತ್ತು ಕರ್ನಾಟಕ ಬ್ಯಾಂಕ್ ಲಾಕರ್ ಕೀ

ಈ ಕುರಿತು ದೂರು ಪಡೆದ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳ್ಳತನ ಮಾಡಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಬೆರಳಚ್ಚು ತಜ್ಞರ ನೆರವು ಸೇರಿದಂತೆ ಅನೇಕ ತನಿಖಾ ಕ್ರಮಗಳನ್ನು ಕೈಗೊಂಡಿದ್ದಾರೆ.

Related posts