ಸುದ್ದಿ 

ಕಡಿವಾಳ: ಆಟೋನಲ್ಲಿದ್ದ ವಿದ್ಯಾರ್ಥಿಯಿಂದ ಮೊಬೈಲ್ ದೋಚಿದ ಅಪರಿಚಿತ

Taluknewsmedia.com

ಬೆಂಗಳೂರು, ಜುಲೈ 3 2025

ನಗರದ ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬರಿಂದ ದುಷ್ಕರ್ಮಿ ಒಬ್ಬನು ಮೊಬೈಲ್ ಫೋನ್ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಲೋಹಿತ್ ರವರು ದೂರು ನೀಡಿರುವ ಪ್ರಕಾರ ಅಟ್ರಿಯಾ ಯೂನಿವರ್ಸಿಟಿಯ ದ್ವಿತೀಯ ಸೆಮಿಸ್ಟರ್ ಎಸ್‌ಡಿಎಸ್ ಇಂಜಿನಿಯರಿಂಗ್ ವಿದ್ಯಾರ್ಥಿಯು, ತನ್ನ ತಂದೆಯವರು ಆಟೋ ಚಾಲಕರಾಗಿದ್ದು, ರಜಾದಿನ ಹಾಗೂ ವಿಕೇಂಡ್‌ಗಳಲ್ಲಿ ತಂದೆಯ ಆಟೋವನ್ನೇ ಡ್ರೈವ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಘಟನೆ ದಿನಾಂಕ 29-06-2025 ರಂದು ರಾತ್ರಿ ಸುಮಾರು 11:30ಕ್ಕೆ ನಡೆದಿದ್ದು, ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿರಲಾಗಿದ್ದ ಸಂದರ್ಭ, ಒಂದು ಕಪ್ಪು ಜಾಕೆಟ್ ಹಾಗೂ ಹೆಲ್ಮೆಟ್ ಧರಿಸಿದ ಅಪರಿಚಿತನು ಬಂದು ಟೂ-ವೀಲರ್‌ನಿಂದ ಇಳಿದು, ಏವೋ ಟಿ3-ಎಕ್ಸ್ ಬ್ರಾಂಡ್ ಮೊಬೈಲ್ ಫೋನ್ ಅನ್ನು ತನ್ನಿಂದ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ.

ಈ ಕುರಿತು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts