ವಾಟ್ಸಾಪ್ ಹ್ಯಾಕ್ ಮಾಡಿ ಸ್ನೇಹಿತರಿಂದ ಲಕ್ಷಾಂತರ ಹಣ ವಂಚನೆ ಶ್ರಿಲೀಕ್ಷ ಸ್ ಅವರಿಂದ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು
ಬೆಂಗಳೂರು, ಜುಲೈ 3:2025 :ಜಕ್ಕೂರು ಪ್ರದೇಶದ ಖಾಸಗಿ ಶಾಲೆಯ ಒಬ್ಬ ಶ್ರೀಲೆಕ್ಷ ಸ್ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಹ್ಯಾಕರ್ ದುಷ್ಕರ್ಮಿಗಳು ಅವನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಶ್ರಿಲೀಕ್ಷ ಸ್ ಅವರು ದಿನಾಂಕ 25/06/2025 ರಂದು ವಾಟ್ಸಾಪ್ ಮೂಲಕ ಕೃತಕ ಸಂದೇಶಗಳು ಹರಡಲ್ಪಟ್ಟಿರುವುದನ್ನು ಗಮನಿಸಿದರು. ಹ್ಯಾಕರ್‌ಗಳು ಶ್ರಿಲೀಕ್ಷ ಸ್ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ, “ತುರ್ತು ಪರಿಸ್ಥಿತಿ” ಎಂಬ ನೆಪದಲ್ಲಿ ₹45,000 ಹಾಗೂ ₹25,000 ರಂತೆ ಎರಡೂ ಬಾರಿ ಹಣವನ್ನು ಶ್ರಿಲೀಕ್ಷ ಸ್ ಸ್ನೇಹಿತರಾದ ಕೆ.ಎಸ್. ಚಂದ್ರಶೇಖರ್ ಮತ್ತು ಮತ್ತೊಬ್ಬ ಸಂಬಂಧಿಕರಿಂದ ಪಡೆದುಕೊಂಡಿದ್ದಾರೆ.
ಘಟನೆ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಶ್ರಿಲೀಕ್ಷ ಸ್ ಅವರು ತಕ್ಷಣವೇ ತನ್ನ ವಾಟ್ಸಾಪ್ ಖಾತೆ ಪರಿಶೀಲಿಸಿ, ಅದು ಹ್ಯಾಕ್ ಆಗಿರುವುದನ್ನು ದೃಢಪಡಿಸಿದ್ದಾರೆ. ಕೂಡಲೇ ಅವರು ಸೈಬರ್ ಕ್ರೈಮ್ ವಿಭಾಗ ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಬಂಧಪಟ್ಟ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಹ್ಯಾಕರ್‌ಗಳು 9228030153, 8528283185 ಇಂತಹ ನಂಬರ್‌ಗಳಿಂದ ಸಂಪರ್ಕಿಸಿ ವಂಚನೆಯಲ್ಲು ತೊಡಗಿದ್ದಂತೆ ಪತ್ತೆಯಾಗಿದೆ. ಸಂಪಿಗೆಹಳ್ಳಿ ಪೊಲೀಸರು ಇದೀಗ ದೂರವಾಣಿ ನಂಬರ್‌ಗಳ ಮಾಲೀಕರ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸಂಪಿ ಹಳ್ಳಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ – “ಯಾರಾದರೂ ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಹಣ ಕೇಳಿದರೆ, ತಕ್ಷಣವಾಗಿಯೇ ಕರೆ ಮಾಡಿ ದೃಢಪಡಿಸಿಕೊಳ್ಳಬೇಕು. ನಿರೀಕ್ಷಿತ ಹಣ ವರ್ಗಾವಣೆ ಮಾಡುವ ಮುನ್ನ ನಿಖರ ಪರಿಶೀಲನೆ ಮಾಡಬೇಕು” ಎಂದು ತಿಳಿಸಿದ್ದಾರೆ.


