ಕಾಲೇಜುಹೋಗಿದ ಹುಡುಗ್ತಿ ನಾಪತ್ತೆ: ಮಂಜುಳ ಅವರಿಂದ ಪೊಲೀಸರಿಗೆ ದೂರು
ಬೆಂಗಳೂರು, ಜುಲೈ 3 2025:
ತಿರುಮೇನಹಳ್ಳಿಯ ಕರ್ನಾಟಕ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯಾದ 19 ವರ್ಷದ ಕು. ಲಿಖಿತಾ ಎಂ, ಜೂನ್ 25ರಂದು ಬೆಳಗ್ಗೆ 8:30ರ ಸುಮಾರಿಗೆ “ಕಾಲೇಜಿಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ಅದಾದ ಬಳಿಕ ಮನೆಗೆ ವಾಪಸಾಗಿಲ್ಲ.
ಲಿಖಿತಾ ತಾಯಿ ನೀಡಿರುವ ದೂರಿನಂತೆ, ಅವರು ಮೂವರು ಮಕ್ಕಳೊಂದಿಗೆ ವಾಸವಿದ್ದು, ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಮಗಳು ದಿನವೂ ಕಾಲೇಜು ಹೋಗುತ್ತಿದ್ದಳು. ಆದರೆ ಈ ಬಾರಿ ಸಂಜೆಯಾದರೂ ವಾಪಸ್ ಬರದೆ ಕಾಣೆಯಾಗಿರುವ ಹಿನ್ನೆಲೆ, ಮನೆಯವರು ಎಲ್ಲ ಕಡೆ ಹುಡುಕಿ ವಿಚಾರಿಸಿದರೂ, ಯಾವ ರೀತಿಯ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಲಿಖಿತಾ ಎಂ ವಿವರಣೆ:
ವಯಸ್ಸು: 19
ಎತ್ತರ: 5 ಅಡಿ 2 ಇಂಚು
ಮೈಬಣ್ಣ: ಗೋಧಿ
ಮುಖ: ಕೋಲು ಮುಖ, ಸಾಧಾರಣ ಮೈಕಟ್ಟು
ಕೂದಲು: ಕಪ್ಪು
ಪೋಷಾಕು: ಗ್ರೇ ಶರ್ಟ್ ಮತ್ತು ಪ್ಯಾಂಟ್
ಭಾಷಾ ಜ್ಞಾನ: ಕನ್ನಡ, ತೆಲುಗು, ಇಂಗ್ಲಿಷ್
ಅವರಿಗೆ ಯಾವುದೇ ವಿಶೇಷ ಗುರುತುಗಳಿಲ್ಲ. ಈ ಕುರಿತು ಮಾಹಿತಿ ಇದ್ದರೆ ನಿಕಟದ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕೆಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.


