ಸುದ್ದಿ 

ಅಜಾಗರೂಕ ಬೈಕ್ ಚಾಲಕನಿಂದ ಅಪಘಾತ: ಯುವಕನ ಕಾಲು ಮೂಳೆ ಮುರಿದ ಘಟನೆ

Taluknewsmedia.com

ಆನೇಕಲ್, ಜುಲೈ 8:
ತಿಲಕ್ ಸರ್ಕಲ್ ಕಡೆಯಿಂದ ಅತಿವೇಗದಲ್ಲಿ ಓಡಿಸಿಕೊಂಡು ಬಂದ ಯಮಹಾ ಆರ್15 ಬೈಕ್ ಚಾಲಕನ ಅಜಾಗರೂಕ ಚಾಲನೆಯಿಂದ ಸರ್ಜಾಪುರ ನಿವಾಸಿ ಪ್ರಕಾಶ್ ಎಂಬ ಯುವಕನಿಗೆ ಭಾರೀ ಅಪಘಾತ ಸಂಭವಿಸಿದ ಘಟನೆ ದಿನಾಂಕ 02-07-2025 ರಂದು ಸಂಜೆ ನಡೆದಿದೆ.

ಅಪಘಾತದ ವೇಳೆ ಪ್ರಕಾಶ್ ತನ್ನ ತಮ್ಮ ಕೌಶಾಲ್‍ನನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದು, ಅವರು ಓಡಿಸಿಕೊಂಡಿದ್ದ ಕೆಎ 59 ಜೆ 6380 ನಂಬರ್‌ನ ಟಿವಿಎಸ್ ಎಕ್ಸ್‌ಎಲ್ ಮೊಪೇಡ್‌ ಅನ್ನು ಸ್ಟ್ರೀಟ್ ಲ್ಯಾಂಡ್ ಬೇಕರಿ ಹತ್ತಿರ ರಸ್ತೆ ದಾಟುವಾಗ, ತಿಲಕ್ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಂದುಕೊಂಡ ಕೆಎ 51 ಜೆಎ 4338 ನಂಬರ್‌ನ ಯಮಹಾ ಬೈಕ್‌ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮವಾಗಿ ಪ್ರಕಾಶ್ ತೀವ್ರವಾಗಿ ಗಾಯಗೊಂಡಿದ್ದು, ತಲೆಗೆ, ಕೈಗಳಿಗೆ ಗಾಯಗಳಾಗಿದ್ದು, ಬಲಕಾಲಿನ ಮೂಳೆ ಮುರಿದಿದೆ. ಸ್ಥಳೀಯರು ಕೂಡಲೇ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಕುರಿತು ಪ್ರಕಾಶ್ ಅವರ ತಾಯಿ ಶ್ರೀಮತಿ ಜಗದಾಂಬ ಅವರು 04-07-2025 ರಂದು ಸಂಜೆ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಘಾತಕ್ಕೆ ಕಾರಣನಾದ ಬೈಕ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಚಿಕಿತ್ಸೆ ಹಾಗೂ ಆಪತ್ಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೂರು ಸಲ್ಲಿಸಲು ವಿಳಂಬವಾಯಿತು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.

Related posts