ಯಲಹಂಕದ ಮನೆಗೆ ಬಾಡಿಗೆ ನೀಡಿದ ವ್ಯಕ್ತಿ ಮೇಲೆ ವಿದೇಶಿ ಮಹಿಳೆಯರ ಅಕ್ರಮ ವಾಸದ ಆರೋಪ – ಲಕ್ಷ್ಮೀಕಾಂತ ಬಂಧನ
ಬೆಂಗಳೂರು, ಜುಲೈ 10, 2025:
ನಗರದ ಯಲಹಂಕ ಬಳಿಯ ಕಟ್ಟಿಗೇನಹಳ್ಳಿಯಲ್ಲಿ ವಿದೇಶಿ ಮಹಿಳೆಯರು ಅಕ್ರಮವಾಗಿ ವಾಸವಿದ್ದ ಪ್ರಕರಣವೊಂದರಲ್ಲಿ ಮನೆಯ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಕಟ್ಟಿ ಗೇನಹಳ್ಳಿಯ ಶ್ರೀ ಸಾಯಿ ಲೇಔಟ್‌ನ ಸ್ವಲಾಕ್ಸ್ ರೆಸಿಡೆನ್ಸಿಯ 3ನೇ ಮಹಡಿಯಲ್ಲಿ ವಾಸವಿದ್ದ ಮೂರು ಉಗಾಂಡ ಮೂಲದ ಮಹಿಳೆಯರು — Jalia Naluboga, Hellen Nabukenya ಮತ್ತು Namuli Christine — ಅಕ್ರಮ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ಪತ್ತೆಯಾಗಿತ್ತು.
ಅಕ್ರಮ ವಾಸಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ಮನೆಯ ಮಾಲೀಕರಿಗಾಗಿ ಯಲಹಂಕ ಪೊಲೀಸರು ತನಿಖೆ ಆರಂಭಿಸಿದರು. ನಂತರ, ತನಿಖೆಯಲ್ಲಿನ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಯನ್ನು ಲಕ್ಷ್ಮೀಕಾಂತ ಕದಿರಿ (ವಯಸ್ಸು 30), ರಾಚೀನಹಳ್ಳಿಯ ರೆಜೆನ್ನಿ ಪಿನಾಕಲ್ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಅವರನ್ನು ಯಲಹಂಕ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.
ಆರೋಪಿಯು ಯಾವುದೇ ಪ್ರಕಾರದ C-Form ಅಥವಾ ವಿದೇಶಿ ನಿವಾಸಿಗಳ ಮಾಹಿತಿಯನ್ನು ಸ್ಥಳೀಯ ಯಲಹಂಕ ಪೊಲೀಸ್ ಠಾಣೆ ಅಥವಾ ಫಾರ್‍ನರ್ಸ್ ರಿಜಿಸ್ಟ್ರೇಷನ್ ಕಚೇರಿಗೆ ನೀಡದೇ, ಸುಮಾರು ಐದು ತಿಂಗಳ ಕಾಲ ಆ ವಿದೇಶಿಯರಿಗೆ ಮನೆ ಬಾಡಿಗೆ ನೀಡಿದ್ದನ್ನು ಪೊಲೀಸರ ತನಿಖೆ ದೃಢಪಡಿಸಿದೆ. ಈ ಮೂಲಕ ಅವರು ವಿದೇಶಿ ಕಾಯದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ.
ಈ ಕುರಿತು ಪಿಎಸ್‍ಐ-7 ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ತನಿಖೆಯಲ್ಲಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

