ಸ್ವತ್ತಿನ ವಿವಾದ: ಜಮೀನಿಗೆ ಬೋರ್ಡ್ ಹಾಕಿ ಬೆದರಿಕೆ
ಬೆಂಗಳೂರು, ಜುಲೈ 19:2025
ಸ್ವಂತ ಜಮೀನಿನಲ್ಲಿ ಮನೆ ಕಟ್ಟಲು ಹೋಗಿದ್ದ ವ್ಯಕ್ತಿಗೆ ಸ್ಥಳೀಯರು ಬೆದರಿಕೆ ಹಾಕಿದ ಘಟನೆ ನಡೆದಿದೆ. ಗೋವಿಂದರಾಜು ತಮ್ಮ ಪತ್ನಿಯಿಂದ 2023ರ ಮೇ 29ರಂದು 50×80 ಅಡಿ ಗಾತ್ರದ ನಿವೇಶನವನ್ನು ಹಕ್ಕು ಬಿಡುಗಡೆ ಮೂಲಕ ಪಡೆದಿದ್ದರು.
ಆದರೆ 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂದು ಬೋರ್ಡ್ ಹಾಕಿದ್ದರು. ದಿನಾಂಕ 21/04/2025 ರಂದು ದೂರುದಾರರು ಸ್ಥಳಕ್ಕೆ ಹೋದಾಗ, ಹರೀಶ್ ಕುಮಾರ್, ರವಿ ಮತ್ತು ನಾರಾಯಣ ಎಂಬ ಮೂವರು ಆರೋಪಿಗಳು ಬಂದು ಜಗಳವಾಡಿ, “ಇಲ್ಲಿಗೆ ಬರಬೇಡಿ, ಬೋರ್ಡ್ ತೆಗೆಯಿರಿ” ಎಂದು ಹೇಳಿ, ದೂರು ನೀಡಿದರೆ ಜೀವ ಬೆದರಿಕೆ ಹಾಕಿದರು.
ಮತ್ತೆ 10/05/2025 ರಂದು ಅವರು ಸ್ಥಳಕ್ಕೆ ಹೋದಾಗ ಮತ್ತೆ ಬೆದರಿಕೆ ನೀಡಿ, ಜಮೀನನ್ನು ಮಾರಲು ಪ್ರಯತ್ನಿಸಿದಾಗ ಖರೀದಿದಾರರಿಗೂ “ಪ್ರಕರಣ ಇದೆ, ಕೊಳ್ಳಬೇಡಿ” ಎಂದು ಹೇಳಿ ಹಣಕ್ಕೂ ಒತ್ತಡ ಹಾಕಿದರು.
ಈ ಹಿನ್ನೆಲೆಯಲ್ಲಿ ಗೋವಿಂದರಾಜು ಅವರು ನ್ಯಾಯಾಲಯದ ಮೂಲಕ ಎಫ್‌ಐಆರ್ ದಾಖಲಿಸಿದ್ದಾರೆ. ಚಿಕ್ಕಜಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

