ಕ್ಯಾಂಟರ್ ಡ್ರೈವರ್‌ಗೆ ಹಲ್ಲೆ ಮತ್ತು ಕೊಲೆ ಬೆದರಿಕೆ: ಅನೇಕಲ್ ಟೌನ್‌ನಲ್ಲಿ ಎರಡು ಮಂದಿ ಯುವಕರಿಂದ ಹಲ್ಲೆ, ಗಲಾಟೆ
ಆನೇಕಲ್, ಆಗಸ್ಟ್ 5:
ಆನೇಕಲ್ ಟೌನ್ ಪ್ರದೇಶದಲ್ಲಿ ದಿನದ ಬೆಳಗಿನ ಜಾವ ಕ್ಯಾಂಟರ್ ವಾಹನ ಚಾಲಕನಿಗೆ ಎರಡು ಮಂದಿ ಯುವಕರು ಹಲ್ಲೆ ಮಾಡಿ, ಹಣಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಶ್ರೀ ವೇಣುಮೂರ್ತಿ ಬಿನ್ ಗಂಗಾಧರಯ್ಯ ರವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಪೆಪ್ಪಿ ಕಂಪನಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 3-08-2025ರಂದು ಮಧ್ಯಾಹ್ನ 3:30ರ ಸುಮಾರಿಗೆ ಅವರು ತಮ್ಮ ವಾಹನ (ಕೆಎ-51 ಎಚ್-6641)ದಲ್ಲಿ ಬೆಂಗಳೂರು ಮಾರತಳ್ಳಿಯಿಂದ ಆನೇಕಲ್ ಬಳಿಯ ಮಹೇಂದ್ರ ಗೋಡೌನ್ ಕಡೆಗೆ ಫುಡ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದರು.
ಅವರು ಆನೇಕಲ ಟೌನ್‌ನ ಶಿವಾಜಿ ವೃತ್ತದ ಬಳಿ ಬರುವ ವೇಳೆ, ಒಂದು ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ಯುವಕರು ಕ್ಯಾಂಟರ್ ಗಾಡಿಗೆ ಅಡ್ಡವಾಗಿ ನಿಲ್ಲಿಸಿ, “ಬೋಳಿ ಮಗನೇ, ಸೂಳೆ ಮಗನೇ” ಎಂಬ ಹಿನ್ನಾಯಿಕ ಶಬ್ದಗಳಿಂದ ನಿಂದನೆ ಮಾಡಿದರು. ನಂತರ ಅವರು ವೇಣುಮೂರ್ತಿಯ ಮುಖಕ್ಕೆ ಕೈಗಳಿಂದ ಹೊಡೆದು, “ನೀನು ನಮ್ಮ ಗಾಡಿಗೆ ಚೇಸ್ ಮಾಡಿಕೊಂಡು ಬಂದಿದ್ದರಿಂದ ಗಾಡಿ ಡ್ಯಾಮೇಜ್ ಆಗಿದೆ” ಎಂಬ ಸುಳ್ಳು ಆರೋಪದ ಆಧಾರದ ಮೇಲೆ ಹಣಕ್ಕೆ ಬೇಡಿಕೆ ಹಾಕಿದರು.
ಹಣ ನೀಡಲು ನಿರಾಕರಿಸಿದ ವೇಳೆ, ಆ ಇಬ್ಬರು ಯುವಕರು “ನೀನು ಕೊಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಲೆ ಮಾಡುತ್ತೇವೆ” ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಇಬ್ಬರು ಆಸಾಮಿಗಳಲ್ಲಿ ಒಬ್ಬನು ಹಸಿರು ಬಣ್ಣದ ಶರ್ಟ್ ಧರಿಸಿದ್ದರೆ, ಇನ್ನೊಬ್ಬನು ಕಪ್ಪು ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸಿದ್ದಾನೆ. ಇಬ್ಬರೂ ಸುಮಾರು 19 ರಿಂದ 20 ವರ್ಷದವರಾಗಿದ್ದಾರೆಂದು ತಿಳಿಸಿದ್ದಾರೆ.
ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

