ಸುದ್ದಿ 

ರೂಪೇನ ಅಗ್ರಹಾರದ ಯುವತಿ ನಾಪತ್ತೆ

Taluknewsmedia.com

ಬೆಂಗಳೂರು, ಆ.09— ನಗರದ ರೂಪೇನ ಅಗ್ರಹಾರ ಪ್ರದೇಶದ 25 ವರ್ಷದ ಯುವತಿ ಸುಶ್ಮಿತಾ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಶ್ರೀನಿವಾಸ್ ಬಿನ್ ವೆಂಕಟರಮಣಪ್ಪ (ತರಕಾರಿ ವ್ಯಾಪಾರಿ) ಅವರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಸುಶ್ಮಿತಾ ಪ್ರತಿದಿನ ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆ ತೆರಳಿ ರಾತ್ರಿ 8 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದಳು. ಆಗಸ್ಟ್ 7 ರಂದು ಬೆಳಿಗ್ಗೆ “ಕೆಲಸಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟ ಸುಶ್ಮಿತಾ, ರಾತ್ರಿ ಮನೆಗೆ ವಾಪಸ್ಸಾಗಲಿಲ್ಲ.

ಕುಟುಂಬಸ್ಥರು ಅವಳ ಮೊಬೈಲ್ ನಂಬರುಗಳಿಗೆ (7904224909, 8884864909) ಕರೆ ಮಾಡಿದರೂ, ಫೋನ್ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರು, ಸ್ನೇಹಿತರು ಹಾಗೂ ಕೆಲಸ ಮಾಡುವ ಕಚೇರಿಯಲ್ಲಿ ವಿಚಾರಿಸಿದಾಗಲೂ ಅವಳ ಬಗ್ಗೆ ಯಾವುದೇ ಮಾಹಿತಿ ದೊರಕಲಿಲ್ಲ.

ಎಲ್ಲೆಡೆ ಹುಡುಕಾಟ ನಡೆಸಿದರೂ ಸುಳಿವು ಸಿಗದೆ ಹೋದ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ.

Related posts