ಬಿಜೆನಗರ ರೈಲ್ವೇ ಸ್ಟೇಷನ್ ಹತ್ತಿರ ಗಾಂಜಾ ಸೇದುತ್ತಿದ್ದ ಯುವಕನ ಬಂಧನ..
ಬಿಜೆನಗರ ರೈಲ್ವೇ ಸ್ಟೇಷನ್ ಹತ್ತಿರ ಗಾಂಜಾ ಸೇದುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಇಲಾಖೆ ಸ್ಕೂಟರ್ (ನಂ: ಕೆಎ02ಜಿ3606) ನಲ್ಲಿ ಪೆಟ್ರೋಲ್ ಮಾಡುತ್ತಿದ್ದ ಅಧಿಕಾರಿಗೆ ರೈಲ್ವೇ ಸ್ಟೇಷನ್ ಹತ್ತಿರ ಮರದ ಕೆಳಗೆ ಒಬ್ಬ ಯುವಕ ಅಮಲಿನಲ್ಲಿರುವಂತೆ ಕಾಣಿಸಿಕೊಂಡಿದ್ದನು. ಅವನನ್ನು ನೋಡಿ ಹತ್ತಿರ ಹೋಗುತ್ತಿದ್ದಂತೆಯೇ ಆತ ಓಡಿಹೋಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದರು.
ಆತನನ್ನು ವಿಚಾರಿಸಿದಾಗ ಅವನು ಪೇಪರ್ ಅನ್ನು ಕೊಳವೆ (ಸಿಗರೆಟ್) ರೀತಿಯಲ್ಲಿ ಮಾಡಿಕೊಂಡು ಅದರೊಳಗೆ ಗಾಂಜಾ ತುಂಬಿ ಸೇದುತ್ತಿದ್ದೆನೆಂದು ಒಪ್ಪಿಕೊಂಡಿದ್ದಾನೆ. ತನಿಖೆಯಲ್ಲಿ ಆತನ ಹೆಸರು ನವೀನ್ ಎನ್. ಬಿನ್ ನರಸಿಂಹಮೂರ್ತಿ (24 ವರ್ಷ) ಎಂದು ತಿಳಿದುಬಂದಿದ್ದು, ಆತ ಬೆಳ್ಳೂರು ಟೌನ್, ಕೊಟ್ಟಣಗೇರಿ ಬೀದಿ, ನಾಗಮಂಗಲ ತಾಲೂಕು ನಿವಾಸಿ ಎನ್ನಲಾಗಿದೆ.
ನಂತರ ಸದರಿ ವ್ಯಕ್ತಿಯನ್ನು ಎ.ಸಿ.ಗಿರಿ ಆಸ್ಪತ್ರೆ, ಬಿಜೆನಗರದ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಲಾಯಿತು. ವೈದ್ಯಕೀಯ ಪರೀಕ್ಷೆಯ ಬಳಿಕ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ವೈದ್ಯರು ನೀಡಿದ ವರದಿಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ :
ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್.

