ಸುದ್ದಿ 

ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್

Taluknewsmedia.com

ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ್ದ ಘಟನೆ 6 ತಿಂಗಳ ಬಳಿಕ ಎಫ್ಎಸ್ಎಲ್ ವರದಿ ಮೂಲಕ ಬಹಿರಂಗವಾಗಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ತೆರಳಿದ್ದ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.

ಮಾಹಿತಿಯ ಪ್ರಕಾರ, ಡಾ. ಮಹೇಂದ್ರ ಮತ್ತು ಡಾ. ಕೃತಿಕಾ ರೆಡ್ಡಿ ಇಬ್ಬರೂ 2024ರ ಮೇ 26ರಂದು ಕುಟುಂಬ ಒಪ್ಪಂದದ ಮೂಲಕ ಮದುವೆಯಾಗಿದ್ದರು. ಡಾ. ಕೃತಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡೆರ್ಮೆಟಾಲಜಿಸ್ಟ್ ಆಗಿದ್ದರೆ, ಡಾ. ಮಹೇಂದ್ರ ಜನರಲ್ ಸರ್ಜನ್ ಆಗಿದ್ದರು. ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಲೋ ಶುಗರ್ ಸಮಸ್ಯೆಗಳಿದ್ದವು. ಆದರೆ ಕುಟುಂಬಸ್ಥರು ಈ ಅಸೌಖ್ಯವನ್ನು ಗಮನಿಸದೆ ಮದುವೆ ಮಾಡಿದ್ದಾರೆಂಬುದು ಆರೋಪವಾಗಿದೆ.

ಮದುವೆಯ ನಂತರ, ಕೃತಿಕಾಗೆ ನಿತ್ಯ ವಾಂತಿ ಮತ್ತು ಇತರ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ಗುರಿಯಾಗಿಸಿಕೊಂಡು, ಹನ್ನೊಂದು ತಿಂಗಳ ನಂತರ, ಮಹೇಂದ್ರ ರೆಡ್ಡಿ ಪ್ಲಾನ್ ಮಾಡಿದ್ದು, ಪತ್ನಿಯನ್ನು ಮನೆ ಮಲಗಿದ್ದಾಗ ಐವಿ ಇಂಜೆಕ್ಷನ್ ಮೂಲಕ ನೀಡಿದ ಮೆಡಿಸಿನ್ ಮೂಲಕ ಕೊಲೆ ಮಾಡಿದ್ದಾರೆ. ಈ ಇಂಜೆಕ್ಷನ್ ಕ್ರಮವನ್ನು ಎರಡು ದಿನ ನಿರಂತರವಾಗಿ ಮುಂದುವರೆಸಲಾಗಿತ್ತು.

2025ರ ಏಪ್ರಿಲ್ 23 ರಂದು, ಕೃತಿಕಾಗೆ ಮೂರ್ಚೆ ಬಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವ ಮೊದಲು ವೈದ್ಯರು ಮೃತ ಎಂದು ಘೋಷಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕುಟುಂಬಸ್ಥರಿಂದ ದೂರು ಪಡೆಯಲು ಮುಂದಾಗಿದ್ದರು, ಆದರೆ ಕುಟುಂಬಸ್ಥರು ಹಿಂದೇಟು ಹಾಕಿದ್ದರು. ನಂತರ ಮರಣೋತ್ತರ ಪರೀಕ್ಷೆ ಮತ್ತು ದೇಹದ ಸ್ಯಾಂಪಲ್ ಎಫ್ಎಸ್ಎಲ್‌ಗೆ ಕಳುಹಿಸಲಾಗಿತ್ತು.

ಇತ್ತೀಚೆಗೆ ಬಂದ ಎಫ್ಎಸ್ಎಲ್ ವರದಿ ಪ್ರಕಾರ, ದೇಹದಲ್ಲಿ ಅನಸ್ತೇಶಿಯಾ ಅಂಶಗಳು ಕಂಡುಬಂದಿದ್ದು, ಈ ಅಂಶಗಳು ಸಾವಿಗೆ ಕಾರಣವೆಂದು ನಿರ್ಧರಿಸಲಾಗಿದೆ. ವರದಿ ಆಧರಿಸಿ ಕೇಸ್ ದಾಖಲಾಗಿದೆ. 6 ತಿಂಗಳ ಬಳಿಕ ಯುಡಿಆರ್ ಆಗಿದ್ದ ಪ್ರಕರಣವನ್ನು ಈಗ ಕೊಲೆ ಪ್ರಕರಣವಾಗಿ ವರದಿ ಮಾಡಲಾಗಿದೆ. ಮಹೇಂದ್ರ ರೆಡ್ಡಿಯನ್ನು ಮಣಿಪಾಲದಿಂದ ಬೆಂಗಳೂರಿಗೆ ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related posts