ಸುದ್ದಿ 

ಪ್ರಾಣಿಗಳಿಗೂ ‘ಆಧಾರ್’ ಗುರುತು?

Taluknewsmedia.com

ಪ್ರಾಣಿಗಳಿಗೂ ‘ಆಧಾರ್’ ಗುರುತು?

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಮಾರ್ಟ್ ಟ್ಯಾಗಿಂಗ್ ವ್ಯವಸ್ಥೆ ಜಾರಿಗೆ ಯೋಚನೆ

ಹುಬ್ಬಳ್ಳಿ–ಧಾರವಾಡ: ಮನುಷ್ಯರಿಗೆ ನೀಡುವ ಆಧಾರ್ ಕಾರ್ಡ್ ಮಾದರಿಯಲ್ಲೇ ಈಗ ಜಾನುವಾರು ಹಾಗೂ ಬೀದಿ ನಾಯಿಗಳಿಗೆ ಗುರುತು ಸಂಖ್ಯೆ ನೀಡುವ ಯೋಜನೆ ಮಹಾನಗರ ಪಾಲಿಕೆಯಲ್ಲಿ ಚರ್ಚೆಗೆ ಬಂದಿದೆ. ‘ಸ್ಮಾರ್ಟ್ ಪ್ಲಾಕ್’ ಎಂಬ ವಿಶೇಷ ಅಪ್ಲಿಕೇಶನ್‌ ಮೂಲಕ ಪ್ರಾಣಿಗಳ ಮಾಹಿತಿಯನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ, ಕಿವಿಗೆ ಸ್ಕ್ಯಾನರ್‌ ಹೊಂದಿರುವ ಟ್ಯಾಗ್ ಅಳವಡಿಸುವ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಕುರಿತು ಪಾಲಿಕೆ ತೀವ್ರವಾದ ಚಿಂತನೆ ನಡೆಸುತ್ತಿದೆ.

ಯೋಜನೆಯ ಮುಖ್ಯ ಅಂಶಗಳು..
ಪ್ರಾಣಿಗಳ ಕಿವಿಗೆ ಸ್ಕ್ಯಾನರ್ ಹೊಂದಿರುವ ಟ್ಯಾಗ್ ಅಳವಡಿಕೆ ಟ್ಯಾಗ್ ಸ್ಕ್ಯಾನ್ ಮಾಡಿದರೆ ಮಾಲೀಕರ ವಿವರದಿಂದ ಹಿಡಿದು ಪ್ರಾಣಿಯ ಆರೋಗ್ಯ ಮಾಹಿತಿ ವರೆಗೆ ಲಭ್ಯ. ಕಳ್ಳತನ ತಡೆ, ಆರೋಗ್ಯ ನಿರೀಕ್ಷಣೆ ಹಾಗೂ ಪ್ರಾಣಿಗಳ ಸುರಕ್ಷತೆಗಾಗಿ ಉಪಯುಕ್ತ

ಐಐಟಿ ಧಾರವಾಡದಲ್ಲಿ ಅಭಿವೃದ್ದಿಯಾದ ತಂತ್ರಜ್ಞಾನ..

ಈ ಟ್ಯಾಗಿಂಗ್‌ ತಂತ್ರಜ್ಞಾನವನ್ನು ಐಐಟಿ ಧಾರವಾಡದ ಇಂಕ್ಯೂಬೇಷನ್ ಸೆಂಟರ್‌ನಲ್ಲಿ ಎಡಿಐಎಸ್ ಟೆಕ್ನಾಲಜಿ ಸಂಸ್ಥೆಯ ಪ್ರಸಾದ್ ಮತ್ತು ಸುಚಿತ್ ಅಭಿವೃದ್ಧಿಪಡಿಸಿದ್ದಾರೆ.
ಮಾನವ ಆಧಾರ್‌ಗಾಗಿ ಫಿಂಗರ್‌ಪ್ರಿಂಟ್ ಬಳಸುವಂತೆಯೇ, ಜಾನುವಾರು ಮತ್ತು ನಾಯಿ ಮುಂತಾದ ಪ್ರಾಣಿಗಳ ಮೂಗಿನ ಪ್ಯಾಟರ್ನ್, ಬಾಯಿ ವಿನ್ಯಾಸ, ಬಣ್ಣ ಮತ್ತು ಕಲರ್ ಪ್ಯಾಟರ್ನ್ ಬಳಸಿ ಪ್ರಾಣಿಯ ಗುರುತು ಸಂಗ್ರಹಿಸಲಾಗುತ್ತದೆ.

ಪ್ರತಿ ಪ್ರಾಣಿಗೂ ನೋಂದಣಿ ಸಂಖ್ಯೆ ಸ್ಕ್ಯಾನ್ ಮಾಡಬಹುದಾದ ಕೋಡ್ ಮಾಲೀಕರ ಹೆಸರು, ವಿಳಾಸ, ಮೊಬೈಲ್ ನಂಬರ್ ತಳಿ, ವಯಸ್ಸು, ಲಿಂಗ, ಬಣ್ಣ ವಿಮೆ ಹಾಗೂ ಆರೋಗ್ಯ ಮಾಹಿತಿ
ಎಲ್ಲವೂ ಅಪ್ಲಿಕೇಶನ್‌ನಲ್ಲಿ ದಾಖಲಾಗುತ್ತದೆ.

ಪಾಲಿಕೆಯ ಪ್ರಕಾರ, ಈ ವ್ಯವಸ್ಥೆ ಜಾರಿಯಾದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ:

ಬೀದಿ ದನ-ಹಸುಗಳ ಮಾಲೀಕರ ಪತ್ತೆ ಸುಲಭ.
ವಿದ್ಯುತ್‌ ಶಾಕ್ ಅಥವಾ ಅಪಘಾತದಲ್ಲಿ ಸಾಯುವ ಜಾನುವಾರುಗಳ ಯಥಾರ್ಥ ಮಾಲೀಕರ ಮಾಹಿತಿ ದೊರೆಯುವುದು. ಬೀದಿ ನಾಯಿಗಳ ನಸಬುತಡೆ ಶಸ್ತ್ರಚಿಕಿತ್ಸೆ (ABC) ಸುಗಮ. ಬಿಡಾಡಿ ದನಗಳನ್ನು ಚಲಾಯಿಸುವ ದುರುಳರನ್ನು ಪತ್ತೆ ಮಾಡುವುದು ಸುಲಭ.. ಆರೋಗ್ಯ ಮಾನಿಟರಿಂಗ್, ಲೈವ್ ಲೊಕೇಶನ್, ಮಾರುಕಟ್ಟೆ ಮೌಲ್ಯ ಅಂದಾಜು ಸಾಧ್ಯ

ಸೌದಿ ಅರೇಬಿಯಾದ ಪರಿಸರ ಸಚಿವಾಲಯ ಈಗಾಗಲೇ ಈ ಆ್ಯಪ್ ಬಳಸುತ್ತಿದ್ದು, ಟ್ಯಾಗ್ ಜೊತೆಗೆ ಚಿಪ್ ಅಳವಡಿಸಿ ಪ್ರಾಣಿಗಳ ಆರೋಗ್ಯದ ಏರುಪೇರನ್ನು ನೇರವಾಗಿ ಸರ್ಕಾರ ಮತ್ತು ಮಾಲೀಕರಿಗೆ ತಿಳಿಸುತ್ತಿದೆ. ಕರ್ನಾಟಕದಲ್ಲಿಯೂ ಕೆಲ ಹಾಲುಗಾರರು ಈ ತಂತ್ರಜ್ಞಾನ ಬಳಸುತ್ತಿದ್ದು, ಅದನ್ನು ನಗರ ಮಟ್ಟದಲ್ಲಿ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಹು-ಧಾ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ,
“ಜಾನುವಾರು ಗುರುತಿಸಲು ಇದು ಬಹಳ ಮುಖ್ಯ ವ್ಯವಸ್ಥೆಯಾಗಬಹುದು. ಬೀದಿ ದನ-ಹಸುಗಳ ನಿಯಂತ್ರಣ, ನಾಯಿಗಳ ABC ಕಾರ್ಯಕ್ರಮಕ್ಕೆ ಸಹ ಬೆಂಬಲ ಸಿಗುತ್ತದೆ. ಇದರ ಪರಿಣಾಮಕಾರಿತ್ವ ಕುರಿತು ತಜ್ಞರೊಂದಿಗೆ ಮತ್ತಷ್ಟು ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

Related posts