ಸುದ್ದಿ 

ಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ

Taluknewsmedia.com

Taluknewsmedia.comಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣಬೆಂಗಳೂರು 22 ಆಗಸ್ಟ್ 2025ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ ವರದಿಯಾಗಿದೆ. 27 ವರ್ಷದ ಅಹಾರ್.ಟಿ ಬಿನ್ ಥಹಾ ವಿ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಯಶವಂತಪುರದಲ್ಲಿರುವ ಬೆಲೆಕ್ ಇಂಡಿಯಾ ಲಿಮಿಟೆಡ್‌ನಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 19.08.2025ರ ಮಧ್ಯರಾತ್ರಿ ಸುಮಾರು 2.20ಕ್ಕೆ ತಮ್ಮ ಹೊಂಡಾ ದ್ವಿಚಕ್ರ ವಾಹನ (ನಂಬರು: KL-23-P-6201) ಅನ್ನು ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬೆಳಿಗ್ಗೆ ಸುಮಾರು 7.30ಕ್ಕೆ ನೋಡಿದಾಗ ವಾಹನ ಕಾಣಿಸದೆ ಹೋದ ಕಾರಣ, ಅನಾಮಿಕರು ಸುಮಾರು ₹40,000 ಮೌಲ್ಯದ ಸ್ಕೂಟರ್‌ನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪಿರ್ಯಾದುದಾರರು ತಮ್ಮ ಕೆಲಸದ ನಿರತೆಯಿಂದ ತಡವಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ಗಾಂಜಾ ಮಾರಾಟಗಾರ ಬಂಧನ

Taluknewsmedia.com

Taluknewsmedia.com ಬೆಂಗಳೂರು:22 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪಿಎಸ್‌ಐ ಇಬ್ರಾಹಿಂ ಅವರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಖಾಲಿ ಜಾಗದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. 20 ಆಗಸ್ಟ್ 2025 ರಂದು ಸಂಜೆ 6 ಗಂಟೆಯ ಸುಮಾರಿಗೆ ನಡೆದ ದಾಳಿಯಲ್ಲಿ, ಮರೂನ್ ಶರ್ಟ್ ಧರಿಸಿದ್ದ ಕಿರಣ್ @ ಕಿರಣ್ ಬೇಡಿ (25) ಎಂಬ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದರು. ಆರೋಪಿಯಿಂದ 821 ಗ್ರಾಂ ಗಾಂಜಾ, 8 ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ₹500 ಮುಖಬೆಲೆಯ ನೋಟು ವಶಪಡಿಸಿಕೊಳ್ಳಲಾಗಿದೆ. ಕಿರಣ್ ವಿಶಾಖಪಟ್ಟಣಂನಿಂದ ಗಾಂಜಾ ತಂದು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವನು ಪ್ರತಿ ಪ್ಯಾಕೆಟ್ ಅನ್ನು ₹500ಕ್ಕೆ ಮಾರಾಟ ಮಾಡುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹಾಗೂ ವಶಪಡಿಸಿದ ಮಾಲುಗಳನ್ನು ಠಾಣೆಗೆ ಕರೆತರಲಾಗಿದ್ದು, ಮುಂದಿನ ಕಾನೂನು…

ಮುಂದೆ ಓದಿ..
ಸುದ್ದಿ 

ಯುವತಿ ಕಾಣೆಯಾಗಿರುವ ಘಟನೆ – ಯಲಹಂಕದಲ್ಲಿ ಪೋಷಕರ ಮನವಿ

Taluknewsmedia.com

Taluknewsmedia.com ಬೆಂಗಳೂರು: 22 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರ ಮಾಹಿತಿಯ ಪ್ರಕಾರ, ಲಕ್ಷ್ಮಿಪತಿ ಅವರು ತಮ್ಮ ಕುಟುಂಬದೊಂದಿಗೆ ಯಲಹಂಕದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಮಗಳೊಂದಿಗೆ ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕೆಲ ಮಾತುಕತೆ ನಡೆದಿತ್ತು. ದಿನಾಂಕ 13.08.2025 ರಂದು ಲಕ್ಷ್ಮಿಪತಿ ಅವರು ತಮ್ಮ ಊರಾದ ಮಾಲಗಡಿ ತೆರಳಿದ್ದರು. ಅವರ ಪತ್ನಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋದರು. ಆ ಸಮಯದಲ್ಲಿ ಮಗಳು ಮತ್ತು ಮಗ ಮನೆಯಲ್ಲೇ ಇದ್ದರು. ಮಧ್ಯಾಹ್ನ ಸುಮಾರು 12:30 ಗಂಟೆಗೆ, ಮಗಳು “ಹೊರಗಡೆ ಕೆಲಸವಿದೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ನಂತರ ವಾಪಾಸಾಗಲಿಲ್ಲ. ಸಂಜೆ 6 ಗಂಟೆಗೆ ಮನೆಗೆ ಬಂದ ಪೋಷಕರು ಮಗಳು ಮನೆಗೆ ವಾಪಾಸಾಗಿಲ್ಲವೆಂದು ಗಮನಿಸಿದರು. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕದ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಎಂ.ಡಿ.ಎಂ.ಎ ವಶ – ಮನೆಮಾಲಕಿಗೆ ಪ್ರಕರಣ ದಾಖಲಾತಿ

Taluknewsmedia.com

Taluknewsmedia.comಬೆಂಗಳೂರು, 21 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸ್ತೆಗಿರಿ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳಿಂದ ಭಾರಿ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರಣ್ಯಪುರ ಅಂಚೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬ್ರಿಟ್ ಮತ್ತು ಕೋಡು ಎಂಬ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಇವರ ಬಳಿಯಿಂದ 700 ಗ್ರಾಂ ತೂಕದ, ಸುಮಾರು 70 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ (ಎಕ್ಸ್ಟಸಿ) ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧವಾಗಿ NDPS ಕಾಯ್ದೆ 1985ರ ಸೆಕ್ಷನ್‌ಗಳು 8(c), 21, 22(c) ಹಾಗೂ Foreigners Act 1946ರ ಸೆಕ್ಷನ್ 14 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆಯನ್ನು ನೀಡಿದ ಮನೆಮಾಲಕಿ ಜಯಶ್ರೀ ಅಲಿಯಾಸ್ ಜಯಮ್ಮ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅವರು FRRO ಅಧಿಕಾರಿಗಳಿಂದ ಪಡೆದ ಸಿ-ಫಾರ್ಮ್ ಮಾಹಿತಿಯನ್ನು ಸ್ಥಳೀಯ…

ಮುಂದೆ ಓದಿ..
ಸುದ್ದಿ 

ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ – ವಾಹನ ಚಾಲಕ ವಿರುದ್ಧ ಕ್ರಮ

Taluknewsmedia.com

Taluknewsmedia.com ಬೆಂಗಳೂರು, 21 ಆಗಸ್ಟ್ 2025ನಗರದ ಮೇಜರ್ ಸಂದಿಹ ಉನ್ನಿಕೃಷ್ಣನ್ ಮುಖ್ಯರಸ್ತೆಯ ಮ್ಯಾಕ್‌ಡೊನಾಲ್ಡ್ ಸ್ಟೋರ್ ಮುಂಭಾಗದಲ್ಲಿ “ನೋ ಪಾರ್ಕಿಂಗ್” ಬೋರ್ಡ್ ಕೆಳಗೆ ಸರಕು ವಾಹನವನ್ನು ನಿಲ್ಲಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಸಂಜೆ ಸುಮಾರು 5.58ರ ಹೊತ್ತಿಗೆ ಕೋಬ್ರಾ ಗಸ್ತು ಕರ್ತವ್ಯದಲ್ಲಿದ್ದಯಲಹಂಕ ಸಂಚಾರಿ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದುದನ್ನು ಗಮನಿಸಿ, ಟಾಟಾ ಇಂಟ್ರಾ ಗುಡ್ ವಾಹನ (ಕೆಎ-53-ವೈ-9734) ಅನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು. ವಾಹನ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ, ಆತನು ನಾಗರಾಜು ಎಂ (29), ಮಗ ಮುನಿಸ್ವಾಮಿ, ನಿವಾಸಿ – 560049 ಎಂದು ಪತ್ತೆಯಾಯಿತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಪೀಕ್ ಅವರ್ಸ್ ವೇಳೆ ಲಾರಿ ಓಡಿಸಿದ ಚಾಲಕನ ವಿರುದ್ಧ ಕ್ರಮ

Taluknewsmedia.com

Taluknewsmedia.comಬೆಂಗಳೂರು: 21 ಆಗಸ್ಟ್ 2025ನಗರದೊಳಗಿನ ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವನ್ನು ಉಲ್ಲಂಘಿಸಿ ಲಾರಿ ಓಡಿಸಿದ ಪ್ರಕರಣದಲ್ಲಿಯಲಹಂಕ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿಯ ಪ್ರಕಾರ, 19-08-2025 ಬೆಳಿಗ್ಗೆ ಸುಮಾರು 9 ಗಂಟೆಗೆ, ವಿದ್ಯಾಶಿಲ್ಪ ಕ್ರಾಸ್ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು, ನಿಷೇಧಿತ ಸಮಯದಲ್ಲಿ (ಬೆಳಿಗ್ಗೆ 4.00ರಿಂದ 9.00ರವರೆಗೆ) E-52-0-3816 ನಂಬರಿನ ಟಿಪ್ಪರ್ ಲಾರಿ ನಗರದಲ್ಲಿ ಸಂಚರಿಸುತ್ತಿದ್ದನ್ನು ಪತ್ತೆಹಚ್ಚಿದರು. ಚಾಲಕನು ಮುನಿರಾಜು (25), ಶಾನುಭೋಗನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಮೂಲದವನು ಎಂದು ಗುರುತಿಸಲಾಗಿದೆ. ಈತನನ್ನು ಲಾರಿಯೊಂದಿಗೆಯಲಹಂಕ ಸಂಚಾರಿ ಠಾಣೆಗೆ ಕರೆತರಲಾಗಿದ್ದು, ನಗರ ಪೊಲೀಸ್ ಆಯುಕ್ತರ ಅಧಿಸೂಚನೆ (119/()/2014, ದಿನಾಂಕ 16-12-2014) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಪ್ರಕರಣಗಳಲ್ಲಿ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ವಿದ್ಯಾರ್ಥಿನಿ ಮನೆಯಿಂದ ಲ್ಯಾಪ್‌ಟಾಪ್, ಐಫೋನ್ ಕಳವು

Taluknewsmedia.com

Taluknewsmedia.com ಬೆಂಗಳೂರು: 21 ಆಗಸ್ಟ್ 2025ಯಲಹಂಕದ ಕಟ್ಟಿಗೆನಹಳ್ಳಿಯ ಯುವತಿಯೊಬ್ಬಳ ಮನೆಯಲ್ಲಿ ನುಗ್ಗಿ ದುಷ್ಕರ್ಮಿಗಳು ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪೀಡಿತೆಯ ಮನೆಯಲ್ಲಿ 18/08/2025 ರಂದು ಬೆಳಗ್ಗೆ ಸುಮಾರು 7:35ರಿಂದ 7:50ರ ವೇಳೆಯಲ್ಲಿ ಕಳವು ನಡೆದಿದೆ. ಆಕೆಯ ಸ್ನೇಹಿತೆಯೊಬ್ಬಳು ಹಿಂದಿನ ರಾತ್ರಿ ಮನೆಗೆ ಬಂದು ತಂಗಿದ್ದಳು. ಬೆಳಗ್ಗೆ ಆಕೆ ವಾಶ್‌ರೂಮ್‌ಗೆ ಹೋಗಿದ್ದಾಗ, ಸ್ನೇಹಿತೆಯ ಸ್ನೇಹಿತೆ ಬಾಗಿಲು ಹಾಕದೆ ಹೊರಗೆ ಹೋಗಿರುವುದನ್ನು ರೂಮ್‌ಮೇಟ್ ಗಮನಿಸಿದ್ದಾಳೆ. ಈ ನಡುವೆ ಅಪರಿಚಿತರು ಮನೆಗೆ ನುಗ್ಗಿ, ಆಪಲ್ ಮ್ಯಾಕ್‌ಬುಕ್ ಏರ್ M3 (ಮಾದರಿ A3113, ಸೀರಿಯಲ್ ಸಂಖ್ಯೆ: L2PW60DJQM, ಮೌಲ್ಯ ₹2.40 ಲಕ್ಷ) ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ (IMEI: 352348743348606, 352348743120567) ಕಳವು ಮಾಡಿದ್ದಾರೆ. ಕಳವು ನಂತರ ಪೀಡಿತೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು: 21ಆಗಸ್ಟ್ 2025ಯಲಹಂಕ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ರೀಟಾ ಎಸ್ ಅವರು ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಯಲಹಂಕದಲ್ಲಿ ವಾಸವಾಗಿದ್ದು, ದಿನಾಂಕ 18-08-2025 ರಾತ್ರಿ ಸುಮಾರು 9 ಗಂಟೆಗೆ ತಮ್ಮ ಗಂಡನವರು ಸ್ಕೂಟರ್ ಅನ್ನು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ನಂತರ 19-08-2025 ಬೆಳಿಗ್ಗೆ 7:30 ಗಂಟೆಗೆ ಪರಿಶೀಲಿಸಿದಾಗ, ವಾಹನ ಅಲ್ಲಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಪೀಡಿತರು ಸುತ್ತಮುತ್ತ ಹುಡುಕಿದರೂ ಸ್ಕೂಟರ್ ಪತ್ತೆಯಾಗದ ಕಾರಣ, ಯಾರೋ ಅಜ್ಞಾತ ಕಳ್ಳರು ತಮ್ಮ ರೂ. 86,000 ಮೌಲ್ಯದ ಸ್ಕೂಟರ್ ಕಳವು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳತನವಾದ ವಾಹನ ಪತ್ತೆ ಹಾಗೂ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ

ಮುಂದೆ ಓದಿ..
ಸುದ್ದಿ 

24 ವರ್ಷದ ಮಹಿಳೆ ಕಾಣೆಯಾದ ಪ್ರಕರಣ: ಪೊಲೀಸರು ತನಿಖೆ ಆರಂಭಿಸಿದ್ದಾರೆ

Taluknewsmedia.com

Taluknewsmedia.com ಬೆಂಗಳೂರು: 21ಆಗಸ್ಟ್ 2025ಹೆಸರಘಟ್ಟ ಗ್ರಾಮಾಂತರದಲ್ಲಿ 24 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 20 ಆಗಸ್ಟ್ 2025 ರಂದು ಮಧ್ಯಾಹ್ನ 12:10ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ಹಾಜರಾದ ಲಕ್ಷಣ ಬಿನ್ ಲೇಟ್ ನಾಗಪ್ಪ ಅವರು, ತಮ್ಮ ಸೊಸೆ ಸುಮಾ (24 ವರ್ಷ) ದಿನಾಂಕ 19 ಆಗಸ್ಟ್ 2025, ಬೆಳಿಗ್ಗೆ 11:30ಕ್ಕೆ ತನ್ನ ಮೂರು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು, ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಪಿರ್ಯಾದಿದಾರರ ಪ್ರಕಾರ, ಸುಮಾ ಇತ್ತೀಚಿನ ದಿನಗಳಲ್ಲಿ ಮನೆಯಿಂದ 3-4 ಬಾರಿ ಹೊರಟು ಹೋಗಿ ಬಳಿಕ ಮರಳಿ ಬಂದಿರುವುದು ಕಂಡುಬಂದಿತ್ತು. ಆದರೆ ಈ ಬಾರಿ ಇನ್ನೂ ಹಿಂದಿರುಗದ ಕಾರಣ ಕುಟುಂಬದವರು ಆತಂಕಗೊಂಡಿದ್ದಾರೆ. ಕಾಣೆಯಾದ ಮಹಿಳೆಯ ವಿವರಗಳು: ಹೆಸರು: ಸುಮಾ ವಯಸ್ಸು: 24 ವರ್ಷ ಎತ್ತರ: ಸುಮಾರು 4.5 ಅಡಿ ಇತರ ಗುರುತು ಚಿಹ್ನೆಗಳು: ಕುಟುಂಬದಿಂದ…

ಮುಂದೆ ಓದಿ..
ಸುದ್ದಿ 

ಗಂಗರಾಜು ಕಾಣೆಯಾದ ಪ್ರಕರಣ –ರಾಜನಕುಂಟೆ ಪೊಲೀಸರು ತನಿಖೆ ಪ್ರಾರಂಭಿಸಿದರು

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ:21 ಆಗಸ್ಟ್ 2025ಚಾಲಕರಾಗಿ ಕೆಲಸ ಮಾಡುತ್ತಿದ್ದ ಗಂಗರಾಜು (33) ಎಂಬ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಗರಾಜು ಆಗಸ್ಟ್ 15, 2025 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಹೋದವರು. ನಂತರ ಅವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಬಂಧುಗಳು ಹಲವೆಡೆ ಹುಡುಕಿದರೂ ಪತ್ತೆಯಾಗದೆ, ಪತ್ನಿ ರಾಜನಕುಂಟೆ ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡಿದ್ದಾರೆ. ಪತ್ನಿಯ ಹೇಳಿಕೆಯ ಪ್ರಕಾರ, ಗಂಗರಾಜು ಸಾದೇನಹಳ್ಳಿ ಗ್ರಾಮದ ಅನಿತಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಯಿಂದ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಾಣೆಯಾದ ಗಂಗರಾಜು ಅವರ ಗುರುತು ವಿವರಗಳು: ವಯಸ್ಸು: 33 ವರ್ಷ ಎತ್ತರ: 5.9 ಅಡಿ ಬಣ್ಣ: ಎಣ್ಣೆಗೆಂಪು ದೇಹದ ಬಗೆ: ದೃಢಕಾಯ ಮುಖ: ಗುಂಡು ಮುಖ, ಗಡ್ಡ ಮತ್ತು ಮೀಸೆ ಭಾಷೆಗಳು: ಕನ್ನಡ,…

ಮುಂದೆ ಓದಿ..