ಪುಟಪಾತ್ ಹಾಗೂ ರಸ್ತೆ ಮೇಲೆ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ಅಡಚಣೆ: ಅಭಿರಾಮ್ ಗ್ಯಾರೇಜ್ ಮಾಲೀಕನ ವಿರುದ್ಧ ಕ್ರಮಕ್ಕೆ ಒತ್ತಾಯ
Taluknewsmedia.comಬೆಂಗಳೂರು, ಜೂನ್ 29, 2025:ನಗರದ ರೈತರ ಸಂತೆಯ ಬಸ್ ನಿಲ್ದಾಣ ಮತ್ತು ಕೋಗಿಲು ಕ್ರಾಸ್ ಮಾರ್ಗದ ಮಧ್ಯದಲ್ಲಿ ಇರುವ ಅಭಿರಾಮ್ ಕಾರ್ ಗ್ಯಾರೇಜ್ ಮಾಲೀಕರು ಸಾರ್ವಜನಿಕ ಸ್ಥಳದ ದುರ್ಬಳಕೆ ಮಾಡುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಸಂಜೆ 6:40ರ ವೇಳೆಗೆ, ಗ್ಯಾರೇಜ್ ಮುಂಭಾಗದಲ್ಲಿರುವ ಪುಟಪಾತ್ (ಪಾದಚಾರಿ ಮಾರ್ಗ) ಮತ್ತು ಸಾರ್ವಜನಿಕ ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿ ರಿಪೇರಿ ಮಾಡುವುದರಿಂದ, ಸಾರ್ವಜನಿಕರ ಓಡಾಟ ಮತ್ತು ವಾಹನ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗುತ್ತಿದೆ. ಯಲಹಂಕ ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುವಂತೆ, “ಈ ಬಗ್ಗೆ ಮಾಲೀಕರಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿ, ನೋಟಿಸ್‌ಗಳೂ ಜಾರಿಗೆ ತಂದಿದ್ದೇವೆ. ಆದರೂ ಅವರು ಕ್ರಮ ಕೈಗೊಳ್ಳದೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವುದು ದುರಂತಕರವಾಗಿದೆ” ಎಂದರು. ಸ್ಥಳೀಯರು ಈ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗ್ಯಾರೇಜ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದೆ.
ಮುಂದೆ ಓದಿ..