ಜಮೀನಿಗೆ ಅಕ್ರಮ ಪ್ರವೇಶ, ಹಲ್ಲೆ – ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲು
Taluknewsmedia.comಬೆಂಗಳೂರು, ಜುಲೈ 29:ಸರ್ಜಾಪುರ ಹೋಬಳಿ, ಹಲಹಳ್ಳಿ ಗ್ರಾಮದಲ್ಲಿ ಜಮೀನಿನ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳವು ಹಲ್ಲೆಗೆ reason ಆಗಿ, ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳಕಿಗೆ ಬಂದಿದೆ. ಬಾಬು ಅವರ ಹೇಳಿಕೆಯಂತೆ, ಅವರು ಸರ್ವೆ ನಂ.71 ರಲ್ಲಿ ಇರುವ 29 ಗುಂಟೆ ಜಮೀನನ್ನು ದಿನಾಂಕ 03/06/2024 ರಂದು ಕುಸುಮಾ ಆರ್ ಶೆಟ್ಟಿ ಎಂಬುವವರಿಂದ ಖರೀದಿಸಿದ್ದರು. ಈ ಜಮೀನಿಗೆ ಭೂ ಪರಿವರ್ತನೆಯನ್ನೂ ಮಾನ ಜಿಲ್ಲಾಧಿಕಾರಿಗಳಿಂದ 24/05/2024 ರಂದು ಪಡೆದು, ಸುತ್ತಲೂ ಕಾಂಪೌಂಡ್ ಗೋಡೆಯನ್ನೂ ಕಟ್ಟಿಸಿದ್ದಾಗಿ ತಿಳಿಸಿದ್ದಾರೆ. ಆದರೆ ದಿನಾಂಕ 26/07/2025 ರಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಬಾಬು ಅವರ ಅಣ್ಣನ ಮಗ ವಿನೋದ್ ಅವರಿಂದ ಫೋನ್ ಕರೆ ಬಂದಿದ್ದು, “ಯಾರೋ 5-6 ಜನರು ಜಮೀನಿಗೆ ಬಂದು ಕಾಂಪೌಂಡ್ ಗೋಡೆಯನ್ನು ಒಡೆಯುತ್ತಿದ್ದಾರೆ” ಎಂಬ ಮಾಹಿತಿ ನೀಡಿದ್ದಾನೆ. ಬಾಬು ಅವರು ಸ್ಥಳಕ್ಕೆ ತಕ್ಷಣ ತೆರಳಿದಾಗ, ಗೌರಮ್ಮ, ಆಕೆಯ…
ಮುಂದೆ ಓದಿ..
