ಕೋಡಿಮಠದ ಸ್ವಾಮಿಗಳ ಭವಿಷ್ಯವಾಣಿ…..
Taluknewsmedia.comಕೋಡಿಮಠದ ಸ್ವಾಮಿಗಳ ಭವಿಷ್ಯವಾಣಿ….. ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40/50 ವರ್ಷಗಳಿಂದ ಅವರ ಭವಿಷ್ಯ ವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ, ರಾಜಕೀಯ ಮತ್ತು ಕೆಲವು ದುರಂತ ಘಟನೆಗಳ ಬಗ್ಗೆ ಅವರು ನುಡಿದ ಭವಿಷ್ಯಗಳು ಸಾಮಾನ್ಯವಾಗಿ ನಿಜವಾಗುತ್ತದೆ….. ಹಾಗಾದರೆ ಸ್ವಾಮೀಜಿಗಳ ಭವಿಷ್ಯ ನಿಜವೇ, ಅವರಿಗೆ ಆ ಶಕ್ತಿ ಇದೆಯೇ ಅಥವಾ ಅದೊಂದು ಅನುಭವದ ಮಾತುಗಳೇ, ಆಳ ಅಧ್ಯಯನದ ಚಿಂತನೆಯೇ, ದೂರ ದೃಷ್ಟಿಯೇ ಅಥವಾ ಅವರೊಳಗಿನ, ಪ್ರತಿಭೆಯೇ, ಅವರು ವಿಶೇಷ ಸಾಮರ್ಥ್ಯವೇ,ವೈಚಾರಿಕತೆಯೇ, ವೈಜ್ಞಾನಿಕವೇ, ಮೂಡನಂಬಿಕೆಯೇ ಹೀಗೆ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಉದ್ಭವವಾಗುತ್ತದೆ….. ಪ್ರಾಕೃತಿಕವಾಗಿ, ಸಹಜವಾಗಿ ಹೇಳುವುದಾದರೆ ಭವಿಷ್ಯವನ್ನು ಊಹಿಸಿ ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ. ವಿಜ್ಞಾನವು ಕೂಡ ಆ ವಿಷಯದಲ್ಲಿ ಸಂಪೂರ್ಣ ಸತ್ಯ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಭವಿಷ್ಯದ ಘಟನೆಗಳು ಎಲ್ಲಾ…
ಮುಂದೆ ಓದಿ..
