ಅಂಕಣ 

ವನ ಮಾರ್ಪಳ್ಳಿ … ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಒಂದು ಗ್ರಾಮ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಗಡಿಯ ಊರು. ಇಲ್ಲಿಂದ ಭಿಕ್ಷಾ ಪಾದಯಾತ್ರೆ ಮತ್ತು ಶ್ರಮದಾನ ಆರಂಭ ಇದೇ ನವೆಂಬರ್ ಒಂದರಿಂದ….. ಈ ಪಯಣದಲ್ಲಿ ಬಹುಮುಖ್ಯವಾಗಿ ಎರಡು ಅಂಶಗಳಿಗೆ ಗಮನ ಕೊಡುವ ಉದ್ದೇಶ ಹೊಂದಲಾಗಿದೆ. ರೈತರು, ಮಹಿಳೆಯರು, ಯುವಕರು, ಕೂಲಿ ಕಾರ್ಮಿಕರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು. ಅವರ ಸಾಮರ್ಥ್ಯ ಮತ್ತು ಅವರು ಸಾಮಾಜಿಕವಾಗಿ ಯಾವ ರೀತಿ ಜವಾಬ್ದಾರಿ ನಿರ್ವಹಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದು. ಎರಡನೆಯದು,ಅಧಿಕಾರಿಗಳು,ರಾಜಕಾರಣಿಗಳು,ಧಾರ್ಮಿಕ ಮುಖಂಡರು ಮತ್ತುಮಾಧ್ಯಮಗಳು ಹೇಗೆ ತಮ್ಮ ಜವಾಬ್ದಾರಿ ಮರೆತು ಸಮಾಜದ ಅಧೋಗತಿಗೆ ಕಾರಣವಾಗುತ್ತಿದ್ದಾರೆ ಎಂಬುದನ್ನು ಸಹ ಅವರುಗಳಿಗೆ ಎಚ್ಚರಿಸುವ ಪ್ರಯತ್ನ ಮಾಡಲಾಗುವುದು.ಇದು ಸಾಧ್ಯವಾಗಬೇಕಾದರೆ ಮೊದಲು ನಾವು ನಮ್ಮ ಮನಸ್ಸನ್ನು ವಿಶಾಲಗೊಳಿಸುವ ಸಮಗ್ರ ಚಿಂತನಾ ಶೈಲಿಯನ್ನು ರೂಪಿಸಿಕೊಳ್ಳಬೇಕು. ಒಮ್ಮೆ ನಾವು ಈ ನಿಟ್ಟಿನಲ್ಲಿ ಯೋಚಿಸಲು ಪ್ರಾರಂಭಿಸಿದರೆ ಕನಿಷ್ಠ ನಮ್ಮಲ್ಲಿ ಸಾಮುದಾಯಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಅದರಿಂದಾಗಿ ಸಹಜವಾಗಿ ನಮ್ಮಲ್ಲಿ ಒಳ್ಳೆಯತನ…

Read More
ಅಂಕಣ 

ಊಹೆಗೂ ಮೀರಿದ ಮಾನವ ಇತಿಹಾಸ…..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ…… ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು. ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು ಪರಿಶೀಲಿಸಿ ಅದಕ್ಕೆ ಬೆಲೆ ಕಟ್ಟುತ್ತಾರೆ. ಮನುಷ್ಯರಲ್ಲೂ ಗಂಡು ಹೆಣ್ಣು ಇಬ್ಬರನ್ನೂ ಇದೇ ರೀತಿ ಪರಿಶೀಲಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಿ ಗುಂಪುಗಳಾಗಿ ವ್ಯಾಪಾರ ಮಾಡಿ ಸಾಗಿಸಲಾಗುತ್ತಿತ್ತು.ಬಲಿಷ್ಠವಾದ ದೇಹದವರನ್ನು ಭೇಟೆಯಾಡಿ, ಆಯುಧಗಳಿಂದ ಗಾಯ ಮಾಡಿ ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗುತ್ತಿತ್ತು. ಹೀಗೆ ಬಂಧಿಸಿದ ನೂರಾರು ಜನರನ್ನು ವ್ಯಾಪಾರಿಗಳು ಖರೀದಿಸಿ ನಡೆಸಿಕೊಂಡು ಅಥವಾ ಹಡಗಿನಲ್ಲಿ ಕುರಿಗಳಂತೆ ತುಂಬಿ…

Read More
ಅಂಕಣ 

ಅಯ್ಯೋ, ಯಾವುದೀ ಪ್ರವಾಹವು……

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಪ್ರವಾಹ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ? ಇಲ್ಲ, ಬಹುಶಃ ವಿಶ್ವದ ಯಾವುದೇ ದೇಶ ಮತ್ತು ಮಾನವ ಕುಲ ಇನ್ನೂವರೆಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಭೂಕಂಪ, ಸುನಾಮಿ, ಚಂಡಮಾರುತ, ಕಾಳ್ಗಿಚ್ಚು ಎಲ್ಲವೂ ಯಾವುದೇ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅದು ತನ್ನ ಕೆಲಸ ಪೂರೈಸಿದ ನಂತರ ತಾನೇ ಕಡಿಮೆಯಾಗುತ್ತದೆ. ಭಾರತದ ದೇಶದಲ್ಲಿ ಪ್ರಕೃತಿಯ ಜೊತೆ ಮನುಷ್ಯ ಮತ್ತು ಸರ್ಕಾರಗಳ ಆಸೆ ಬುರುಕತನ ಸೇರಿ ಇನ್ನೂ ಹೆಚ್ಚುವರಿಯಾಗಿ ಕೆಲವು ಪ್ರಾಕೃತಿಕ ವಿಕೋಪಗಳು ಸೇರುತ್ತವೆ. ಅದು ರಣಭೀಕರ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೆಲವು ಸ್ಥಳಗಳು ಭೂಪಟದಿಂದಲೇ ನಾಶವಾಗಿಬಿಡುತ್ತದೆ. ಜನರ ಬದುಕು ಗಂಜಿ ಕೇಂದ್ರಕ್ಕೆ ಅಥವಾ ಅನಾಥ ಪರಿಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು ? ದೈವೇಚ್ಚೆ, ವಿಧಿಯಾಟ,…

Read More
ಅಂಕಣ 

ಬರವಣಿಗೆ…..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಯಾವಾಗ ಬರಹ ಒಂದು ಕ್ರಮಬದ್ಧತೆಯನ್ನು ಪಡೆಯಿತೋ ನಂತರದಲ್ಲಿ ವಿವಿಧ ಭಾಷೆಗಳು ಬೆಳವಣಿಗೆ ಹೊಂದಿದವು. ಅಕ್ಷರ ಸಂಶೋಧನೆಗು ಮೊದಲು ಭಾಷೆಗಳು ಅಸ್ತಿತ್ವದಲ್ಲಿದ್ದವು. ಆದರೆ ಲಿಪಿ ಇರಲಿಲ್ಲ. ಲಿಪಿಯ ಉಗಮದ ನಂತರ ಭಾಷೆಗಳು ಮಹತ್ವ ಪಡೆದುಕೊಂಡವು. ಲ್ಯಾಟಿನ್, ಪ್ರಾಕೃತ, ಪಾಲಿ, ಸ್ಪಾನಿಷ್, ಚೀನೀ, ಅರಬ್ಬೀ, ಪರ್ಷಿಯನ್, ಸಂಸ್ಕೃತ ಭಾಷೆಗಳು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ನನಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿ ಮತ್ತು ಆಳವಾಗಿ ತಿಳಿದಿಲ್ಲ. ಸಾಮಾನ್ಯ ಜ್ಞಾನ ಮಾತ್ರ ಇದೆ. ಖಚಿತವಾಗಿ ತಿಳಿದ ಭಾಷಾ ತಜ್ಞರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಬಹುದು. ಇತಿಹಾಸ ಏನೇ ಇರಲಿ ಬರವಣಿಗೆ ಎಂಬುದು ಮಾನವ ನಾಗರಿಕತೆಯ ಎಲ್ಲವನ್ನೂ ಅಡಗಿಸಿಕೊಂಡು…

Read More