ಸುದ್ದಿ 

7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ…

Taluknewsmedia.com

Taluknewsmedia.com7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ ನೆನ್ನೆ ದಿನ ಮುರುಗೋಟ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ನೊಂದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆ ದೂರು ಪ್ರಕಾರ, ಒಬ್ಬ ವ್ಯಕ್ತಿ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ ಮತ್ತೊಬ್ಬ ವ್ಯಕ್ತಿ ಆರೋಪಿಗೆ ಸಹಾಯ ಮಾಡಿದ ಆರೋಪವೂ ದಾಖಲಾಗಿದೆ. ದೂರು ಬಂದ ತಕ್ಷಣ ಇಬ್ಬರು ಆರೋಪಿಗಳನ್ನೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೊಂದ ಬಾಲಕಿಯ ವಿಚಾರಣೆಗಾಗಿ ಮಹಿಳಾ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗಿದ್ದು, ಅವರ ಎದುರು ಬಾಲಕಿ ತನ್ನ ಹೇಳಿಕೆ ನೀಡಿದ್ದಾಳೆ. ಆರೋಪಿಗಳಾದ ಮಣಿಕಂಠ ಮತ್ತು ಈರಣ್ಣ ಈಗಾಗಲೇ ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ತಡವಾದ ದೂರು ಕುರಿತು SP ಹೇಳಿಕೆ:.. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬಾಲಕಿಯರು ಶಾಕ್‌ಗೆ ಒಳಗಾಗುವ ಕಾರಣ ಮೊದಲಿಗೆ ವಿಷಯವನ್ನು ಹೇಳುವುದಿಲ್ಲ. ಹೇಳಿದ ಮೇಲೂ,…

ಮುಂದೆ ಓದಿ..
ರಾಜಕೀಯ ಸುದ್ದಿ 

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ

Taluknewsmedia.com

Taluknewsmedia.comಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ ಸತಿ ಅನಸೂಯ ದೇವಿಯವರ ಪೂಜೆ ಹಾಗೂ ಸಂಕೀರ್ತನ ಯಾತ್ರೆ ಆರಂಭವಾಗುತ್ತಿದೆ. ಈ ಸಂಕೀರ್ತನಾ ಯಾತ್ರೆಗೆ ಮುನ್ನ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ, ಖ್ಯಾತ ವೈದ್ಯೆಯಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಲಿದ್ದಾರೆ. ನಮ್ಮ ಬೇಡಿಕೆಗಳು ಹಳೆಯದೇ. “ದತ್ತಪೀಠ ಬೇರೆ, ಬಾಬಾ ಬುಡನ್ ದರ್ಗಾ ಬೇರೆ” ಎನ್ನುವುದನ್ನು ಕಂದಾಯ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ದಾಖಲೆಗಳ ಹಿನ್ನಲೆಯಲ್ಲಿ ಹಿಂದೂಗಳಿಗೆ ನ್ಯಾಯ ದೊರಕಬೇಕು. ಈಗ ಅರ್ಧ ನ್ಯಾಯ ಸಿಕ್ಕಿದೆ; ಪೂರ್ಣ ನ್ಯಾಯ ಸಿಗಬೇಕು. ಆ ಪೂರ್ಣ ನ್ಯಾಯ ಸಿಗುವವರೆಗೂ ಭಕ್ತಿ ಹಾಗೂ ಶಕ್ತಿಯ ಈ ಆಂದೋಲನವನ್ನು ಮುಂದುವರಿಸುವುದು ಅನಿವಾರ್ಯ. ದತ್ತಾತ್ರೇಯರೂ, ಸತಿ ಅನಸೂಯ ದೇವಿಯೂ ಕೂಡ ನಮ್ಮ ಈ ಆಶಯವನ್ನು ಆಶೀರ್ವದಿಸುತ್ತಿದ್ದಾರೆ. ಅವರ ಭಕ್ತರೂ ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಾರೆ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಅವಕಾಶ…

ಮುಂದೆ ಓದಿ..
ಸುದ್ದಿ 

ರಾಮೇಶ್ವರಂ ಕಫೆ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ಎಫ್‌ಐಆರ್!

Taluknewsmedia.com

Taluknewsmedia.comರಾಮೇಶ್ವರಂ ಕಫೆ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ಎಫ್‌ಐಆರ್! ಜನಪ್ರಿಯ ರಾಮೇಶ್ವರಂ ಕಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾವ್ ಹಾಗೂ ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ಬೆಂಗಳೂರಿನ ಪೊಲೀಸರು ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಿಲ್ಡರ್ ನೀಡಿದ ದೂರಿನ ಆಧಾರದ ಮೇಲೆ, ಅಪಾಯಕಾರಿ ಆಹಾರ ಮಾರಾಟ, ತಪ್ಪು ಮಾಹಿತಿ ನೀಡಿಕೆ, ಕ್ರಿಮಿನಲ್ ಪಿತೂರಿ ಹಾಗೂ ಇತರ ದೋಷಗಳು ಆರೋಪಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಪೊಂಗಲ್‌ನಲ್ಲಿ ಹುಳು:… ಜುಲೈ 24ರಂದು ಟರ್ಮಿನಲ್ 1ನಲ್ಲಿ ಇರುವ ಕೆಫೆಯ ಔಟ್‌ಲೆಟ್‌ನಲ್ಲಿ ಪೊಂಗಲ್ ಖರೀದಿಸಿದ ಮಾರತ್‌ಹಳ್ಳಿ ನಿವಾಸಿ ನಿಖಿಲ್ ಎನ್ ಅವರು, ಆಹಾರದಲ್ಲಿ ಹುಳು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿ ಆಹಾರ ಬದಲಾಯಿಸಲು ಸಮ್ಮತಿಸಿದರೂ, ವಿಮಾನ ಹತ್ತುವ ತುರ್ತು ಕಾರಣದಿಂದ ನಿಖಿಲ್…

ಮುಂದೆ ಓದಿ..
ಸುದ್ದಿ 

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ

Taluknewsmedia.com

Taluknewsmedia.comಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ ಹಾಸನ ಹೊರವಲಯದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಯುವಕನ ಮೇಲೆ ನಡೆದ ಹಲ್ಲೆ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭರತ್ ಎಂಬ ಯುವಕನಿಗೆ ಯುವಕರೊಬ್ಬರ ಗುಂಪೇ ಬಟ್ಟೆ ಬಿಚ್ಚಿಸಿ, ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಹಲ್ಲೆಯ ಹಿಂದೆ ಯುವತಿ ವಿಷಯ ಹಾಗೂ ಹಣಕಾಸು ಸಂಬಂಧಿತ ಗಲಾಟೆ ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ. ಭರತ್ ಬೇಡಿಕೆ ಮಾಡಿದರೂ ಕೂಡ, ಆರೋಪಿತರು ಕಾತರಿಸದೇ ಹಲ್ಲೆ ಮುಂದುವರಿಸಿದ್ದರೆಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಇದರಿಂದ ಕಿಡಿಗೇಡಿಗಳ ಅಸಭ್ಯ ಮತ್ತು ಅಮಾನವೀಯ ವರ್ತನೆ ಮತ್ತಷ್ಟು ಬಹಿರಂಗವಾಗಿದೆ. ಈ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿತರ ಪತ್ತೆ ಹಾಗೂ ಬಂಧನ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಸ್ಥಳೀಯರು ಇಂತಹ ಘಟನೆ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದು, ಆರೋಪಿಗಳಿಗೆ…

ಮುಂದೆ ಓದಿ..
ಸುದ್ದಿ 

ಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು

Taluknewsmedia.com

Taluknewsmedia.comಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು. ಕಲಘಟಗಿ ಪೊಲೀಸ್ ವಾಹನ ಬ್ಯಾಟರಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 30ರಿಂದ 31ರ ಮಧ್ಯರಾತ್ರಿ ವೇಳೆ ಹಾಗೂ ಅಕ್ಟೋಬರ್ 25ರಿಂದ 26ರ ಮಧ್ಯೆ ಪಿರ್ಯಾದಿದಾರರ ಮನೆಯಿಂದ ಹತ್ತಿರ ಪಾರ್ಕ್ ಮಾಡಲಾಗಿದ್ದ ಲಾರಿಗಳಿಂದ ಒಟ್ಟು ಏಳು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಪ್ರತಿಯೊಂದು ಬ್ಯಾಟರಿಯ ಮೌಲ್ಯ ರೂ.10,000 ಆಗಿದ್ದು, ಒಟ್ಟಾರೆ ರೂ.70,000 ಕಿಮ್ಮತ್ತಿನ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ ಕಲಘಟಗಿ ಪೊಲೀಸ್ರ ಠಾಣೆಯಲ್ಲಿ 249/2025, ಕಲಂ 303(2) ಬಿ.ಎನ್.ಎಸ್.ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಪಿ.ಐ ಶ್ರೀಶೈಲ ಕೌಜಲಗಿ, ಸಿ.ಎನ್.ಕರ ವಿರಪ್ಪನವರ, ಪಿ.ಎಸ್.ಐ (ಅಪರಾಧ ವಿಭಾಗ) ಹಾಗೂ ಠಾಣಾ ಸಿಬ್ಬಂದಿಗಳ ತಂಡ ತ್ವರಿತ ಕ್ರಮ ಕೈಗೊಂಡು ಮೂವರು ಆರೋಪಿತರನ್ನು ಪತ್ತೆ ಮಾಡಿ ಬಂಧಿಸಿದೆ. ಬಂಧಿತರಿಂದ ಒಟ್ಟು 25 ವಾಹನ ಬ್ಯಾಟರಿಗಳು…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ

Taluknewsmedia.com

Taluknewsmedia.comಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ರಂಜಿತಾ (27) ಎಂದು ಗುರುತಿಸಲಾಗಿದ್ದು, ಅವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ರಂಜಿತಾ ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಕ್ಟೋಬರ್ 25ರಂದು ನಡೆದ ಈ ಘಟನೆ ಕುರಿತಂತೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ರಂಜಿತಾ ತಮ್ಮ ಸ್ನೇಹಿತೆ ರೇಖಾ ಅವರೊಂದಿಗೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನಕ್ಕೆ ಹೋದ ರಂಜಿತಾ ಬಹಳ ಹೊತ್ತಾದರೂ ಹೊರಬರದೇ ಇದ್ದ ಕಾರಣ ಅನುಮಾನಗೊಂಡ ರೇಖಾ ಬಾಗಿಲು ತೆರೆದು ನೋಡಿದಾಗ,…

ಮುಂದೆ ಓದಿ..
ಸುದ್ದಿ 

ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳಿಗೆ 21.55 ಕೋಟಿ ರೂ. ಅನುದಾನ

Taluknewsmedia.com

Taluknewsmedia.comಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳಿಗೆ 21.55 ಕೋಟಿ ರೂ. ಅನುದಾನ ಬೆಂಗಳೂರು:ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ಯೋಜನೆಯಡಿ ರಾಜ್ಯದ 9,337 ಸರ್ಕಾರಿ ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಸರ್ಕಾರ 21.55 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಶಾಲೆಗಳಲ್ಲಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಬಿಸಿಯೂಟ ತಯಾರಿಸಲು ಈವರೆಗೆ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಆದರೆ ಇವು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ, ಆಯ್ದ 9,337 ಶಾಲೆಗಳಿಗೆ ಹೊಸ ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಹಾಗೂ ಇತರೆ ಅಡುಗೆ ಪರಿಕರಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ.…

ಮುಂದೆ ಓದಿ..
ಅಂಕಣ 

ಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ……..

Taluknewsmedia.com

Taluknewsmedia.comಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ…….. ಕೆಲವು ಸಾಮಾನ್ಯ ಉದಾಹರಣೆಗಳು…….. ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ. ಹಾಗಾದರೆ ಈ ದುಂದು ವೆಚ್ಚ ಹೇಗಾಗುತ್ತದೆ……. ಮೊದಲನೆಯ ಅತಿಹೆಚ್ಚು ದುಂದು ವೆಚ್ಚ ಸರ್ಕಾರಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ನಮ್ಮ ತೆರಿಗೆಯ ಹಣ ಪೋಲಾಗುತ್ತದೆ. ಸರ್ಕಾರದ ವತಿಯಿಂದ ಆಗುವ ಯಾವುದೇ ಹೊಸ ಕಟ್ಟಡ, ರಸ್ತೆ, ಭವನ, ಯೋಜನೆ, ಕಾರ್ಯಾಲಯ, ಉದ್ಘಾಟನಾ ಸಭೆ ಸಮಾರಂಭಗಳು ಅದು ಸರ್ಕಾರದ ಕರ್ತವ್ಯದ ಒಂದು ಭಾಗವಾಗಿದ್ದರೂ, ಅದನ್ನು ಸ್ಥಳೀಯವಾಗಿ ಒಂದು ಸಣ್ಣ ಹಣದಲ್ಲಿ ಅವಶ್ಯಕತೆ ಇದ್ದಲ್ಲಿ ಪೂಜೆ ಮಾಡಿ ಮುಗಿಸಬಹುದು. ಆದರೆ ಅದಕ್ಕಾಗಿ ಸರ್ಕಾರ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತದೆ. ಸರ್ಕಾರದಲ್ಲಿ…

ಮುಂದೆ ಓದಿ..
ಸುದ್ದಿ 

ಮೂಲ – ಅನುವಾದ – ರೂಪಾಂತರ – ಭಾಷಾಂತರ ಇತ್ಯಾದಿ ಇತ್ಯಾದಿ…….

Taluknewsmedia.com

Taluknewsmedia.comಮೂಲ – ಅನುವಾದ – ರೂಪಾಂತರ – ಭಾಷಾಂತರ ಇತ್ಯಾದಿ ಇತ್ಯಾದಿ……. ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು….. ಇತ್ತೀಚೆಗೆ ಎದೆಯ ಹಣತೆ ಎಂಬ ಕನ್ನಡದ ಮೂಲ ಕೃತಿಯ ಅನುವಾದ Heart lamp ಎಂಬ ಇಂಗ್ಲಿಷ್ ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿತು. ಅದರ ಮೂಲ ಭಾನು ಮುಷ್ತಾಕ್ ಅವರು ಬರೆದ ಕನ್ನಡ ಭಾಷೆಯ ಕೃತಿ. ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಇಂಗ್ಲೀಷಿಗೆ ಅನುವಾದಿಸಿದವರು ದೀಪಾ ಭಾಸ್ತಿ. ಆ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿಯ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗಿದೆ. ಈ ಸಂದರ್ಭದಲ್ಲಿ ಅನುವಾದಕರಿಗೆ ಸಹ ಮೂಲ ಕೃತಿಯ ಲೇಖಕರಷ್ಟೇ ಮಹತ್ವ ನೀಡಬೇಕು ಎಂಬುದಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿವೆ.…

ಮುಂದೆ ಓದಿ..
ವಿಶೇಷ ಸುದ್ದಿ 

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ.

Taluknewsmedia.com

Taluknewsmedia.comಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ .. ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ. ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ. ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ. ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ ಅಪರಿಚಿತವಾಗಿದ್ದ ಚಿನ್ನಯ್ಯ, ಸುಜಾತ ಭಟ್ ರವರ ಹಿಂದೆ ಹೋಗಿದ್ದಿಲ್ಲ. ‘ಅವರ ದೂರಿಗೂ ನ್ಯಾಯ ಒದಗಿಸಿ’ ಎಂಬುದಷ್ಟೇ ನಮ್ಮೆಲ್ಲರ ಹೇಳಿಕೆಯಾಗಿತ್ತು. ಹಾಗಾಗಿ, ಚಿನ್ನಯ್ಯ, ಸುಜಾತ ಭಟ್ ರವರುಗಳು ಯೂಟರ್ನ್ ಹೊಡೆದ್ರು ಎಂಬುದೆಲ್ಲಾ ಸಾವು, ದೌರ್ಜನ್ಯ,…

ಮುಂದೆ ಓದಿ..