ಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ!
Taluknewsmedia.comಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ! ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಮನೆ ಮುಂದೆ ಅಲಂಕಾರ ಗಿಡದಂತೆ ಬೆಳೆಸಲಾಗಿದ್ದ ಗಾಂಜಾ ಗಿಡವನ್ನು ಪೊಲೀಸರು ಪತ್ತೆಹಚ್ಚಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಅಕ್ಟೋಬರ್ 29ರಂದು ನಡೆದಿದೆ. ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂಭಾಗದಲ್ಲಿ ಸೀರೆಗಳಿಂದ ಸುತ್ತು ಕಟ್ಟಿ ಮಧ್ಯದಲ್ಲಿ ಐದು ಗಾಂಜಾ ಗಿಡಗಳನ್ನು ಅಲಂಕಾರ ಗಿಡದಂತೆಯೇ ಬೆಳೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಬಂದ ನಿಖರ ಮಾಹಿತಿಯ ಮೇರೆಗೆ, ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುಮಾರು 9 ಕೆ.ಜಿ ತೂಕದ ಮತ್ತು ₹3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿನ್ನೆಲೆ ತಹಶೀಲ್ದಾರ್ ಚೇತನ, ಸಿಡಿಪಿಒ ಪ್ರದೀಪ್ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿ…
ಮುಂದೆ ಓದಿ..
