ದೇವನಹಳ್ಳಿಯಲ್ಲಿ ದಾರುಣ ಘಟನೆ: ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ನಾಶವಾಗಲು ಯತ್ನ – ಇಬ್ಬರು ಮೃತಪಟ್ಟರು, ಇಬ್ಬರ ಸ್ಥಿತಿ ಚಿಂತಾಜನಕ
Taluknewsmedia.comದೇವನಹಳ್ಳಿಯಲ್ಲಿ ದಾರುಣ ಘಟನೆ: ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ನಾಶವಾಗಲು ಯತ್ನ – ಇಬ್ಬರು ಮೃತಪಟ್ಟರು, ಇಬ್ಬರ ಸ್ಥಿತಿ ಚಿಂತಾಜನಕ ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಪ್ರಯತ್ನಿಸಿದ ಪರಿಣಾಮ, ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಜೀವ-ಮರಣ ಹೋರಾಟದಲ್ಲಿದ್ದಾರೆ. ಬ್ರಾಹ್ಮಣ ಸಮುದಾಯದ ಕುಮಾರಪ್ಪ (60) ಎಂಬವರು ಪೌರೋಹಿತ್ಯವನ್ನು ಜೀವನೋಪಾಯವಾಗಿಸಿಕೊಂಡಿದ್ದರು. ಕುಟುಂಬದಲ್ಲಿ ಪತ್ನಿ ರಮಾ (55) ಮತ್ತು ಇಬ್ಬರು ಪುತ್ರರು ಅರುಣ್ ಹಾಗೂ ಅಕ್ಷಯ್ ಇದ್ದರು. ಇತ್ತೀಚಿನ ದಿನಗಳಲ್ಲಿ ಸಾಲದ ಒತ್ತಡ ಮತ್ತು ಆರ್ಥಿಕ ತೊಂದರೆಗಳಿಂದ ಬಳಲುತ್ತಿದ್ದ ಕುಟುಂಬವು ಬದುಕಿನ ನಿರಾಶೆಯಿಂದ ಭೀಕರ ಹೆಜ್ಜೆ ಇಟ್ಟಿದೆ ಎಂದು ಶಂಕಿಸಲಾಗಿದೆ. ಘಟನೆಯ ರಾತ್ರಿ ಕುಟುಂಬದ ಎಲ್ಲ ಸದಸ್ಯರು ಕ್ರಿಮಿನಾಶಕ ಸೇವಿಸಿದ್ದು, ಹಿರಿಯ ಮಗ ಅರುಣ್ ವಿಷ ಸೇವಿಸಿದ ಬಳಿಕ ನೇಣು ಬಿಗಿದುಕೊಂಡಿರುವುದು…
ಮುಂದೆ ಓದಿ..
