ಸುದ್ದಿ 

ಹೋರಾಟ ಮತ್ತು ಹೋರಾಟಗಾರರು……

Taluknewsmedia.com

Taluknewsmedia.comಹೋರಾಟ ಮತ್ತು ಹೋರಾಟಗಾರರು…… ಹೊಸ ಹೋರಾಟಗಾರರು ಸೃಷ್ಟಿಯಾಗಬೇಕಿದೆ, ಹಳೆಯ ಹೋರಾಟಗಾರರು ಮರುಹುಟ್ಟು ಪಡೆಯಬೇಕಿದೆ, ಸಮಕಾಲೀನ ಹೋರಾಟಗಾರರು ಹೋರಾಟದ ಮಾರ್ಗಗಳನ್ನು ಪುನರ್ ರೂಪಿಸಿಕೊಳ್ಳಬೇಕಿದೆ…… 1995/2000 ಇಸವಿಯ ನಂತರ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಮಾನಸಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಕಡು ಬಡವರು ಮತ್ತು ಅತ್ಯಂತ ಶ್ರೀಮಂತರು ಸಂಖ್ಯೆಗೆ ಹೋಲಿಸಿದಾಗ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗ ಶೇಕಡ 70 ರಿಂದ 80 ರಷ್ಟು ವ್ಯಾಪಕವಾಗಿ ಅಸ್ತಿತ್ವದಲ್ಲಿದೆ. ಈ ಆಧುನಿಕ ಮಧ್ಯಮ ವರ್ಗ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಮನರಂಜನಾ ಉದ್ಯಮಗಳು, ಧಾರ್ಮಿಕ ಆಚರಣೆಗಳು, ರಾಜಕೀಯ ಚಟುವಟಿಕೆಗಳು, ಸೈದ್ಧಾಂತಿಕ ನಿಲುವುಗಳು ಎಲ್ಲದರ ಸಾಮಾನ್ಯ ಅರಿವಿನೊಂದಿಗೆ ಬೆಳೆಯುತ್ತಿದೆ. ಬಹುತೇಕ ಕಾರ್ಪೊರೇಟ್ ವ್ಯವಸ್ಥೆಯ ಕೊಳ್ಳುಬಾಕ ಸಂಸ್ಕೃತಿ ಇವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಿಸುತ್ತಿದೆ. ಇವರ ಯೋಚನಾ ಶಕ್ತಿಯ ಮೇಲೆ ದಾಳಿ ಮಾಡಿದೆ. ಅದರ ಪರಿಣಾಮವಾಗಿ ಈ ಜನರಲ್ಲಿ ಹೋರಾಟದ ಮನೋಭಾವ…

ಮುಂದೆ ಓದಿ..
ಸುದ್ದಿ 

” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ “

Taluknewsmedia.com

Taluknewsmedia.com” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ ” ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು. ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು. ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್.…

ಮುಂದೆ ಓದಿ..
ಸುದ್ದಿ 

” ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ “

Taluknewsmedia.com

Taluknewsmedia.comಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್…… ಆದ್ದರಿಂದ…… ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ….. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ……. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ…… ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.ಆಸ್ಪತ್ರೆ, ಪೋಲೀಸ್, ನ್ಯಾಯಾಲಯ, ದೇವರು, ಧರ್ಮ, ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.ಇದು ಹೇಳುವಷ್ಟು ಸುಲಭವಲ್ಲ. ಆದರೆ…

ಮುಂದೆ ಓದಿ..
ಸುದ್ದಿ 

ನಮ್ಮ ನಿಷ್ಠೆ ಪ್ರಕೃತಿಗೆ…….

Taluknewsmedia.com

Taluknewsmedia.comನಮ್ಮ ನಿಷ್ಠೆ ಪ್ರಕೃತಿಗೆ……. ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ…… ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು……. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು……. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು…… ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು…….. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು…… ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು…….. ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.ಮದುವೆ, ಮಕ್ಕಳು, ಪರೀಕ್ಷೆ, ಉದ್ಯೋಗ, ಆರೋಗ್ಯ, ಆಸ್ತಿ, ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ, ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ. ಉದಾಹರಣೆಗೆ…… ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ, ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ…

ಮುಂದೆ ಓದಿ..
ಸುದ್ದಿ 

ಮಾಡಿದ್ದುಣ್ಣೋ ಮಹಾರಾಯ…….

Taluknewsmedia.com

Taluknewsmedia.comಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ……. ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ…….. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಮಂದಿಯ ವಿರುದ್ಧ ದೂರು ಕೊಡಬೇಕಿದೆ, ಅದೇ ಸಿನಿಮಾಗಳಲ್ಲಿ ಮಚ್ಚು, ಲಾಂಗು ಬಾಂಬು, ಬಂದೂಕು, ರಕ್ತ, ಹಿಂಸೆ, ಸೇಡು ತೋರಿಸಿ ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ದೂರು ನೀಡಬೇಕಿದೆ, ಧಾರವಾಹಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನಾಶಪಡಿಸಿ ಅದರ ವಿರುದ್ಧ ಮೌಲ್ಯಗಳನ್ನು ಪ್ರತಿಪಾದಿಸುವ, ಕೌಟುಂಬಿಕ ಮೌಲ್ಯಗಳನ್ನು ಅಪವಿತ್ರಗೊಳಿಸಿ ಅನೈತಿಕ ಸಂಬಂಧಗಳನ್ನು ನೈತಿಕ ಗೊಳಿಸುವ ಕಥೆಗಳ ವಿರುದ್ಧ ದೂರು ನೀಡಬೇಕಿದೆ, ರಿಯಾಲಿಟಿ ಶೋಗಳ ಹೆಸರಿನಲ್ಲಿ ಬಿಗ್ ಬಾಸ್ ರೀತಿಯ ಅತ್ಯಂತ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ನೀಡಬೇಕಿದೆ, ಸರ್ಕಾರದ ಪ್ರತಿ ಕಚೇರಿಯಲ್ಲಿ ಲಂಚಕ್ಕಾಗಿ ಒತ್ತಾಯಿಸುವ, ಕಿರುಕುಳಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ, ಬೆಂಗಳೂರಿನ ಪ್ರಮುಖ…

ಮುಂದೆ ಓದಿ..
ಸುದ್ದಿ 

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿವೇಚನೆ ಮತ್ತು ಜವಾಬ್ದಾರಿ‌……..

Taluknewsmedia.com

Taluknewsmedia.comರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ,ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ,ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ ಸಾವುಗಳ ಸುತ್ತ, ಚಲನಚಿತ್ರ ನಟನೊಬ್ಬನ ಕೊಲೆಯ ಸುತ್ತ, ಆತನ ಅಭಿಮಾನಿಗಳ ಮತ್ತು ವಿರೋಧಿಗಳ ಹುಚ್ಚಾಟದ ಸುತ್ತ, ಇದಕ್ಕೆಲ್ಲ ಪ್ರತಿಕ್ರಿಯಿಸುವ ಮತ್ತಷ್ಟು ಸಿನಿಮಾ, ರಾಜಕೀಯ ವ್ಯಕ್ತಿಗಳ ಸುದ್ದಿಯ ಸುತ್ತ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಬೀದಿ ಬದಿಯ ಅಂಗಡಿಗಳು ಎಲ್ಲವೂ ಕೇಂದ್ರೀಕೃತವಾಗಿ ಇಡೀ ಸಮೂಹ ಈ ರೀತಿಯ ಸನ್ನಿಗೆ ಒಳಗಾಗಿ, ಋಣಾತ್ಮಕ ವಿಷಯಗಳ ಸುತ್ತಲೇ ಸುತ್ತುತ್ತಾ, ಇಡೀ ಸಮಾಜವೇ ಹೀಗಿರಬೇಕು ಎಂದು ಯುವ ಜನಾಂಗ ಭಾವಿಸುವಂತಾದರೆ, ನಿಜವಾದ ಪ್ರಗತಿಪರ, ವೈಜ್ಞಾನಿಕ, ವೈಚಾರಿಕ, ಕ್ರಿಯಾತ್ಮಕ, ಸಾಹಸಮಯ, ಸಾಧಕ ಮನೋಭಾವದ ಮುಂದಿನ ಜನಾಂಗ ಸೃಷ್ಟಿಯಾಗುವುದಾದರೂ ಹೇಗೆ ? ಎಲ್ಲಾ ಬ್ರೇಕಿಂಗ್ ನ್ಯೂಸ್ ಗಳು, ಭಾವನಾತ್ಮಕ ವಿಷಯಗಳು, ಪ್ರಚೋದನಕಾರಿ ಮತ್ತು ವಿಭಜನಕಾರಿ ಸುದ್ದಿಗಳು, ಮನ ಕೆರಳಿಸುವ ಮನರಂಜನೆಗಳು, ಅತ್ಯಾಚಾರ, ರಾಜಕೀಯ ಕುತಂತ್ರ, ವಂಚನೆ, ಭ್ರಷ್ಟಾಚಾರ ಇವುಗಳ…

ಮುಂದೆ ಓದಿ..
ಅಂಕಣ 

ಸುಪ್ರಭಾತ……….

Taluknewsmedia.com

Taluknewsmedia.comಸುಪ್ರಭಾತ………. ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ ಹೆಚ್ಚಾಗಬಹುದು, ಕೆಲವೊಮ್ಮೆ ಬಡತನವೂ ಹೆಚ್ಚಾಗಬಹುದು. ಮತ್ತೆ ಕೆಲವೊಮ್ಮೆ ಸಾಲಗಾರರು ಆಗಬಹುದು. ಆದರೆ ಅವರ ಮನಸ್ಥಿತಿಗಳಲ್ಲಿ ಮಾತ್ರ ಬಹುತೇಕ ಸಾಮ್ಯತೆ ಇರುತ್ತದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಯೋಚಿಸುತ್ತಾರೆ. ಅತ್ಯಂತ ಶ್ರೀಮಂತರು, ತೀರಾ ಕಡು ಬಡವರು ಮಾತ್ರ ತಮ್ಮ ಆಲೋಚನೆಯಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ವಠಾರ ಸಂಸ್ಕೃತಿಯೇ ಇರಲಿ ಅಥವಾ ಅಪಾರ್ಟ್ಮೆಂಟ್ ಸಂಸ್ಕೃತಿಯೇ ಇರಲಿ ಮನಸ್ಥಿತಿ ಮಾತ್ರ ಅದೇ ಸಂಸ್ಕೃತಿಯಾಗಿರುತ್ತದೆ. ವಿದ್ಯಾಭ್ಯಾಸ ಅಥವಾ ಅಕ್ಷರಸ್ಥರ ಸಂಖ್ಯೆ ಹೆಣ್ಣು ಗಂಡು ಇಬ್ಬರಲ್ಲಿಯು ಹೆಚ್ಚಾದರೂ ಸಹ ಮನೋಭಾವ ಮಾತ್ರ ಅದೇ ಇರುತ್ತದೆ. ಆ ರೀತಿಯ ಒಂದು ವಠಾರದ ಸುಪ್ರಭಾತ……. ಭಕ್ತಿಯ ಸುಪ್ರಭಾತವಲ್ಲ,ಬದುಕಿನ ಸುಪ್ರಭಾತ ಕೇಳಿ……. ಬಹುತೇಕ ನಗರದ ವಠಾರಗಳಲ್ಲಿ…

ಮುಂದೆ ಓದಿ..
ಅಂಕಣ 

ಅವರ ಮೇಲೆ ಇವರು,ಇವರ ಮೇಲೆ ಅವರು……

Taluknewsmedia.com

Taluknewsmedia.comಅವರ ಮೇಲೆ ಇವರು, ಇವರ ಮೇಲೆ ಅವರು…… ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ………. ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ. ಬಸ್ಸು ಹತ್ತಲು ಓಡಿದ ಪ್ರಯಾಣಿಕಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮುಂದೆ ಚಲಿಸುತ್ತದೆ. ಈತ ಬಸ್ಸಿನ ಬಾಗಿಲ ಕಂಬಿ ಹಿಡಿದವನು ಕೈ ಜಾರಿ ದೊಪ್ಪನೆ ಕೆಳಗೆ ಬೀಳುತ್ತಾನೆ. ಕಾಲಿಗೆ ಬಲವಾದ ಪೆಟ್ಟಾಗುತ್ತದೆ. ಡ್ರೈವರ್ ಅನ್ನು ಶಪಿಸುತ್ತಾಮತ್ತೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾನೆ.ಅದೇ ಬಸ್ಸಿನ ಡ್ರೈವರ್ ತನ್ನ ಮಗನನ್ನು ಸೇರಿಸಲು ಒಂದು ಖಾಸಗಿ ಶಾಲೆಗೆ ಹೋಗುತ್ತಾನೆ. ಅಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿ ಹಿಂಸಿಸಿದ ಪ್ರಿನ್ಸಿಪಾಲರು ಕೊನೆಗೆ ಹೆಚ್ಚಿನ ಡೊನೇಷನ್ ಕಟ್ಟಿಸಿಕೊಂಡು ಶಾಲೆಗೆ ಸೇರಿಸಿಕೊಳ್ಳುತ್ತಾರೆ. ಪ್ರವೇಶ ಮುಗಿಸಿ ಹೊರಬಂದ ಡ್ರೈವರ್ ಸುಲಿಗೆ ಮಾಡಿದ್ದಕ್ಕಾಗಿ ಶಾಲೆಯನ್ನು ಬಯ್ಯುತ್ತಾ ಮನೆ ಕಡೆ ಹೊರಡುತ್ತಾನೆ.ಅದೇ ಶಾಲೆಯ ಪ್ರಿನ್ಸಿಪಾಲರು ಜ್ವರದ ಕಾರಣಕ್ಕಾಗಿ ಒಂದು…

ಮುಂದೆ ಓದಿ..
ಅಂಕಣ 

ಬದಲಾವಣೆ………ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು…….

Taluknewsmedia.com

Taluknewsmedia.comಬದಲಾವಣೆ……… ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು……. ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು…… ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು….. ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು…….. ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು……. ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು….. ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು…… ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು……. ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು……… ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು…… ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು….. ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು…… ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು…… ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು……. ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು……. ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ…

ಮುಂದೆ ಓದಿ..
ಅಂಕಣ 

” ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು…..”

Taluknewsmedia.com

Taluknewsmedia.comಜಾರ್ಜ್ ಬರ್ನಾರ್ಡ್ ಶಾನೊಬೆಲ್ ಪ್ರಶಸ್ತಿ ಪುರಸ್ಕೃತ.ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ……. ಇದು ಸಹಜ ಸ್ವಾಭಾವಿಕ ಮತ್ತು ಒಳ್ಳೆಯ ವಿಷಯಗಳಿಗೆ ಮಾತ್ರ ಅನ್ವಯ. ದುಷ್ಟ, ವಿನಾಶಕಾರಿ ಮತ್ತು ಜೀವ ವಿರೋಧಿ ಕೆಲಸಗಳಿಗೆ ಇದು ಅನ್ವಯವಾಗುವುದಿಲ್ಲ.ನಾವು ಏನನ್ನಾದರೂ ವಿಭಿನ್ನ, ವಿಶಿಷ್ಟ, ಸಾಮಾನ್ಯರಿಗೆ ಅಸಾಮಾನ್ಯವಾಗಿ ಕಾಣುವಂತ ಪ್ರಯೋಗಾತ್ಮಕ ಕೆಲಸಕ್ಕೆ ಕೈಹಾಕಿದಾಗ ನಮ್ಮ ಸಮಾಜದ ಪ್ರತಿಕ್ರಿಯೆ ಹೆಚ್ಚು ನಕಾರಾತ್ಮಕವಾಗಿರುತ್ತದೆ. ಅದು ಒಳ್ಳೆಯ ಪ್ರತಿಕ್ರಿಯೆಯಲ್ಲ ಎಂದು ಖ್ಯಾತ ಸಾಹಿತಿ ನಾಟಕಕಾರ ಚಿಂತಕ ವಾಗ್ಮಿ ಬರ್ನಾರ್ಡ್ ಶಾ ಸುಮಾರು ನೂರು ವರ್ಷಗಳ ಹಿಂದೆಯೇ ಹೇಳಿದ್ದಾರೆ.ಇಲ್ಲಿ ಸಲಹೆಗಳು, ಹಿತ ನುಡಿಗಳು, ಮನವಿಗಳು, ಕಾಳಜಿ ಪೂರ್ವಕ ಒತ್ತಾಯಗಳು, ಪ್ರೀತಿ – ಆತಂಕ – ಮಮಕಾರದ ಮಾತುಗಳು ಖಂಡಿತ ಸ್ವೀಕಾರಾರ್ಹ. ಇದನ್ನು ಹೊರತುಪಡಿಸಿ ಲೇವಡಿ, ಹಾಸ್ಯ, ವ್ಯಂಗ್ಯ, ಅಜ್ಞಾನ, ಅಸೂಯೆ, ಕೀಟಲೆ, ಬೇಜವಾಬ್ದಾರಿ, ಉಡಾಫೆ ಮಾತುಗಳು ಮಾತ್ರ ಖಂಡನೀಯ ಮತ್ತು ಮೇಲಿನ…

ಮುಂದೆ ಓದಿ..