ಮುದ್ದು ಬಾಲ್ಯ…….. ದೊಡ್ಡವರ ದಡ್ಡತನ.
Taluknewsmedia.comಮುದ್ದು ಬಾಲ್ಯ…….. ದೊಡ್ಡವರ ದಡ್ಡತನ – ಬುದ್ದಿ ಇರುವವರ ಕಳ್ಳತನ – ಓದಿದವರ ಭ್ರಷ್ಟತನ – ಅಧಿಕಾರಕ್ಕೇರಿದವರ ಅಸಭ್ಯತನ – ನಮ್ಮ ಮೂರ್ಖತನಗಳಿಗೆ ಮಕ್ಕಳು ಪಾಠವಾಗಬಹುದೇ…… ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು,ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು,ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು,ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆತು ತಿನ್ನುವುದನ್ನು, ಗೊತ್ತು ಮಾಡಿಕೊಳ್ಳಬೇಕಿದೆ ಚಿನ್ನುಗಳಿಂದ ಜಗದ ಸಮಾನತೆಯನ್ನು,ನೋಡಬೇಕಿದೆ ತೆರೆದ ಕಣ್ಣುಗಳಿಂದ ಆ ಹಸುಳೆಗಳ ಚಿಲಿಪಿಲಿಯನ್ನು,ಸವಿಯಬೇಕಿದೆ ಎಳೆಯರಿಂದ ತಿನ್ನುವ ಪರಿಯನ್ನು,ಬದುಕಬೇಕಿದೆ ಆ ಮುದ್ದುಮರಿಗಳ ಚಟುವಟಿಕೆಯಂತೆ,ಕುಣಿಯಬೇಕಿದೆ ಆ ಚಿಣ್ಣಾರಿಗಳ ಚಿಗರೆಯಂತೆ,ಹಿರಿಯರ ಅನುಭವ, ಕಿರಿಯರ ಹೊಸತನ, ಮಕ್ಕಳ ಮುಗ್ಧತೆ,ನಮಗೆ ಪಾಠವಾಗಬೇಕಿದೆ,……. ಮುಂದಿನ ಯೋಚನೆಗಳಿಲ್ಲದ, ಹಿಂದಿನ ನೆನಪುಗಳಿಲ್ಲದ,ಭವಿಷ್ಯದ ಯೋಜನೆಗಳಿಲ್ಲದ, ಇಂದಿನ ಕನಸುಗಳಿಲ್ಲದ,ಅತಿಯಾದ ಆಸೆಗಳಿಲ್ಲದ, ಹೆಚ್ಚಿನ ನಿರಾಸೆಗಳಿಲ್ಲದ,ಶ್ರೀಮಂತಿಕೆಯ ಮೋಹವಿಲ್ಲದ, ಬಡತನದ ನೋವೇ ಗೊತ್ತಾಗದ,ದ್ವೇಷದ ಅರಿವಿಲ್ಲದ, ಪ್ರೀತಿಯ ಆಳ ಅರಿಯದ,ಅಹಂಕಾರದ ಸೋಂಕಿಲ್ಲದ,ಮುಗ್ಧತೆಯ ತಿಳಿವಳಿಕೆ ಇಲ್ಲದ,ಜಾತಿ ಗೊತ್ತಿರದ, ಧರ್ಮ ಅರ್ಥವಾಗದ,ರಾಜಕಾರಣ ತಿಳಿಯದ, ಆಡಳಿತ ಅರಿವಾಗದ,ತೆರಿಗೆ ಕಟ್ಟದ,…
ಮುಂದೆ ಓದಿ..
