ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ……..
Taluknewsmedia.comಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ…….. ಭಾರತ ದೇಶದಲ್ಲಿ ಅತ್ಯಂತ ತುರ್ತಾಗಿ ಆಗಬೇಕಾಗಿರುವ ಕೆಲಸಗಳಲ್ಲಿ ಈ ಕ್ಷಣದ ಪ್ರಮುಖ ವಿಷಯವೆಂದರೆ ವಾಹನ ಚಾಲನಾ ಪರವಾನಗಿ ನೀಡುವ ರೀತಿ ನೀತಿ ನಿಯಮಗಳನ್ನು ಪುನರ್ ಪರಿಶೀಲಿಸಬೇಕಾಗಿದೆ. ಅದನ್ನು ಕೇವಲ ಆರ್ ಟಿ ಓ ಅಧಿಕಾರಿಗಳು ಮಾತ್ರ ನಿರ್ಧರಿಸುವ ಹಂತ ಮೀರಿ ಹೋಗಿದೆ. ಭಾರತದಲ್ಲಿ ಸರಾಸರಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾಯುತ್ತಿದ್ದಾರೆ. ಇನ್ನೆಷ್ಟೋ ಜನ ಪ್ರತಿ ಕ್ಷಣ ಗಾಯಾಳುವಾಗಿ ಬದುಕನ್ನೇ ದುರಂತಮಯವಾಗಿಸಿಕೊಳ್ಳುತ್ತಿದ್ದಾರೆ. ಇದರ ಪರೋಕ್ಷ ಪರಿಣಾಮ ಅನೇಕ ಕುಟುಂಬಗಳು ತೊಂದರೆಗೆ ಸಿಲುಕಿವೆ. ಹಾಗೆಯೇ ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಮೇಲೆ ಬಹಳ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಜೊತೆಗೆ ರಸ್ತೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಮಾನಸಿಕತೆಯೂ ಕುಸಿಯುತ್ತಿದೆ. ಏಕೆಂದರೆ ಮನೆಯಿಂದ ಆಚೆ ಹೋದ ವ್ಯಕ್ತಿ ಮತ್ತೆ ಮನೆಗೆ ವಾಪಸ್ ಬರುವವರೆಗೆ, ಅದರಲ್ಲೂ ಮುಖ್ಯವಾಗಿ ದೂರದ ಪ್ರಯಾಣವಿದ್ದಾಗ ಮನೆಯವರಿಗೆ ಎದೆ ಡವ ಡವ ಬಡಿದುಕೊಳ್ಳುತ್ತಿರುತ್ತದೆ.…
ಮುಂದೆ ಓದಿ..
