ಸುದ್ದಿ 

ಜಗತ್ತಿನ ಶಿಕ್ಷಕ……. ಒಂದು ಪಾಠ……

Taluknewsmedia.com

Taluknewsmedia.comಜಗತ್ತಿನ ಶಿಕ್ಷಕ…….ಒಂದು ಪಾಠ…… ಶಿಕ್ಷಕರ ದಿನದಂದು ಜಗತ್ತಿನ ಅತಿ ಬುದ್ಧಿವಂತ ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ನೆನೆಯುತ್ತಾ ಒಂದು ಸಂಕಲ್ಪ. ” ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ,ಮೂರ್ಖತನ – ಭಯ – ದುರಾಸೆ…..* ಆಲ್ಬರ್ಟ್ ಐನ್ಸ್ಟೈನ್…ಜಗತ್ತಿನ ಅತ್ಯಂತ ಬುದ್ದಿವಂತ ಎಂದು ಕರೆಯಲ್ಪಡುವ ವಿಜ್ಞಾನಿ…. ಇದಕ್ಕೆ ವಿರುದ್ಧ ಪದಗಳು. ಮೂರ್ಖತನ × ಬುದ್ದಿವಂತಿಕೆ,ಭಯ × ಧೈರ್ಯ,ದುರಾಸೆ × ಆಸೆ,……. ಚಿಂತನೆಗೆ ಹಚ್ಚುವ ಬಹುಮುಖ್ಯ ವಿಷಯವಿದು. ಒಂದು ರೀತಿಯಲ್ಲಿ ನಮ್ಮೊಳಗೆ ಒಂದು ಆತ್ಮಾವಲೋಕನ ಪ್ರಕ್ರಿಯೆಗೆ ಚಾಲನೆ ನೀಡಬಹುದಾದ ವಿಷಯವಿದು. ವ್ಯಕ್ತಿಗತವಾಗಿ ಇದನ್ನು ಹೇಳಿರುವುದು ಜಗತ್ತಿನ ಅತ್ಯಂತ ಬುದ್ದಿವಂತ ವ್ಯಕ್ತಿ. ಆದ್ದರಿಂದ ಇದು ಪರಿಶೀಲನೆಗೆ ಅರ್ಹ ಎಂದು ಭಾವಿಸುತ್ತೇನೆ….. ಭಾರತದ ಮಟ್ಟಿಗೆ ಈ ಮೂರು ಅಂಶಗಳು ಬಹುತೇಕ ಸತ್ಯ ಮತ್ತು ವಾಸ್ತವ. ನೇರವಾಗಿ ಹೇಳಬೇಕೆಂದರೆ ಈ ಸಮಾಜದೊಂದಿಗಿನ ನನ್ನ ಅನುಭವದಲ್ಲಿ ರೂಪಗೊಂಡಿರುವ ಅಭಿಪ್ರಾಯವೆಂದರೆ ಭಾರತದ ಮಧ್ಯಮ ವರ್ಗದ ಜನ…

ಮುಂದೆ ಓದಿ..
ಅಂಕಣ 

ಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು……

Taluknewsmedia.com

Taluknewsmedia.comಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು…… ” ಜಾತಿ ಧರ್ಮದ ಭೇದವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರ ಮನಸ್ಸು ನೋಯಿಸಿದರೆ ಸಮಾಜವೇ ನಾಶವಾಗಲಿದೆ “ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿಜೈನ ಮಠ ಚೆನ್ನೈ. ” ದುಃಖ ದುಮ್ಮಾನ ಮರೆಯಲು ಬರುವ ಪವಿತ್ರವಾದ ಜಾಗ ಧರ್ಮಸ್ಥಳವನ್ನು ಅಗೆದಾಗಲೇ ಕುತಂತ್ರಿಗಳಿಗೆ ಕೇಡುಗಾಲ ಶುರುವಾಗಿದೆ “ಭುವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಕನಕಗಿರಿ. ” ಹೆಗ್ಗಡೆಯವರು ದೊಡ್ಡ ಪರೀಕ್ಷೆ ಎದುರಿಸಿ ಅದರಲ್ಲಿ ರ್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇನ್ನು ಆತಂಕ ಪಡುವಂತಹುದು ಏನು ಇಲ್ಲ “ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರವಣಬೆಳಗೊಳ ಜೈನ ಮಠ. ಭಾರತದ ನೆಲದಲ್ಲಿ ಸೃಷ್ಟಿಯಾದ ಪುರಾತನ ಧರ್ಮಗಳಲ್ಲಿ ಜೈನ ಧರ್ಮವೂ ಒಂದು. ಸತ್ಯ, ಅಹಿಂಸೆ, ತ್ಯಾಗ, ಮೋಕ್ಷ, ಸಹಿಷ್ಣುತೆ ಈ ಧರ್ಮದ ಮೂಲ ಮತ್ತು ಮುಖ್ಯ ಆಶಯಗಳು. ಅದರಲ್ಲೂ ಪ್ರಾಣಿ ಹಿಂಸೆಯನ್ನು ಅತ್ಯುಘ್ರವಾಗಿ ಖಂಡಿಸುವ, ಸಂಪೂರ್ಣ ಸಸ್ಯಾಹಾರವನ್ನೇ…

ಮುಂದೆ ಓದಿ..
ಸುದ್ದಿ 

ಸವಿ ನೆನಪುಗಳು ಬೇಕು ಸವಿಯಲೀ ಬದುಕು……

Taluknewsmedia.com

Taluknewsmedia.comಸವಿ ನೆನಪುಗಳು ಬೇಕು ಸವಿಯಲೀ ಬದುಕು…… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ – ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ, ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? ಅಥವಾ, ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ…… ಅಥವಾ, ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ…… ಅಥವಾ, ಧ್ವನಿಯ ಸ್ವರ ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ….. ಅದರ ನಿಜವಾದ ಅರ್ಥ ಏನೇ ಇರಲಿ ಮನುಷ್ಯ ಜೀವಿಯ ಬದುಕಿನಲ್ಲಿ ಅತಿಹೆಚ್ಚು ಆಕರ್ಷಕ ಧ್ವನಿ ಎಂದರೆ ಅದು ಸಾಮಾನ್ಯವಾಗಿ ಹಾಡುಗಳು ಎಂದು ಕರೆಯಲ್ಪಡುವ ಧ್ವನಿ ತರಂಗಗಳು……. ಬಹುಶಃ ಹುಟ್ಟಿದ ಮಗುವಿನಿಂದ ವೃದ್ದರವರೆಗೆ ಒಂದಲ್ಲ ಒಂದು ರೀತಿಯ ಹಾಡುಗಳ ಮೋಹ ಅವರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದನ್ನು ಕಾಣಬಹುದು…… ಕೇವಲ ಭಾರತ ದೇಶ ಮಾತ್ರವಲ್ಲ ಇಡೀ ಸೃಷ್ಟಿಯ ಮನುಷ್ಯ ಪ್ರಾಣಿಯ ಎಲ್ಲರಿಗೂ ಇದು…

ಮುಂದೆ ಓದಿ..
ಅಂಕಣ 

ಶಿಕ್ಷಕರ ಆತ್ಮಾವಲೋಕನ……

Taluknewsmedia.com

Taluknewsmedia.comಶಿಕ್ಷಕರ ಆತ್ಮಾವಲೋಕನ…… ಶಿಕ್ಷಕರ ದಿನಾಚರಣೆಸೆಪ್ಟೆಂಬರ್ 5………… ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ –ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ –ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ…….. ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ – ಮನ ಬಿಚ್ಚಿ – ಮುಂದಿನ 25 ವರ್ಷಗಳಲ್ಲಿ ಮೌಲ್ಯಯುತ ಬಲಿಷ್ಠ ಭಾರತ ನಿರ್ಮಾಣವಾಗಲು…….. ಅಕ್ಷರ ಕಲಿಸುವವರು ನೀವಲ್ಲವೇ – ಅಧ್ಯಯನ ಮಾಡಲು ಮಾರ್ಗ ಸೂಚಿಸುವವರು ನೀವಲ್ಲವೇ –ಚಿಂತಿಸಲು ಪ್ರೇರೇಪಿಸುವವರು ನೀವಲ್ಲವೇ –ಅನ್ಯಾಯದ ವಿರುದ್ಧ ಸಿಡಿದೇಳಲು ಪ್ರೋತ್ಸಾಹಿಸುವವರು ನೀವಲ್ಲವೇ –ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುವವರು ನೀವಲ್ಲವೇ…… ಭ್ರಷ್ಟ ವ್ಯವಸ್ಥೆಯ ವಿರುದ್ಧ ನೀವೇ ಮೌನವಾದರೆ,ಮೌಢ್ಯಗಳ ವಿರುದ್ಧ ನೀವೇ ಮೌನವಾದರೆ,ಜಾತಿ ಪದ್ದತಿಯ ವಿರುದ್ಧ ನೀವೇ ಮೌನವಾದರೆ,ಚುನಾವಣಾ ಅಕ್ರಮಗಳ ವಿರುದ್ಧ ನೀವೇ ಮೌನವಾದರೆ ಸಮಾಜದ ಭವಿಷ್ಯವೇನು…… ಸತ್ಯದ ಪರವಾಗಿ ಮಾತನಾಡಲು ಹೇಳಿ ಕೊಟ್ಟವರು ನೀವು,ದೇಶ ಭಕ್ತಿಯ ಪಾಠ ಮಾಡಿದವರು ನೀವು,ಮಾನವೀಯ ಮೌಲ್ಯಗಳನ್ನು ಬಿತ್ತಿದವರು ನೀವು,ಸಂವಿಧಾನ…

ಮುಂದೆ ಓದಿ..
ಅಂಕಣ 

ಎರಡು ಮುಖ್ಯವಾದ ಜಾಗತಿಕ ವಿದ್ಯಮಾನಗಳು……

Taluknewsmedia.com

Taluknewsmedia.comಎರಡು ಮುಖ್ಯವಾದ ಜಾಗತಿಕ ವಿದ್ಯಮಾನಗಳು…… ಇಸ್ರೇಲ್ ಎಂಬ ದೇಶದ ಅದ್ಭುತ ಸಾಮರ್ಥ್ಯ ಮತ್ತು ಅಮಾನವೀಯ ಕ್ರೌರ್ಯ, ಹಾಗೆಯೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ಚೀನಾ ಮತ್ತು ರಷ್ಯಾ ಇವುಗಳ ನಡುವೆ ಯಾರು ಹಿತವರು ಭಾರತಕ್ಕೆ ಎಂಬ ಎರಡು ಬಹುಮುಖ್ಯ ಅಂತಾರಾಷ್ಟ್ರೀಯ ಸುದ್ದಿಗಳ ಸುತ್ತಾ ಒಂದು ಸುತ್ತು….. ಇಡೀ ವಿಶ್ವದಲ್ಲಿ ಇಸ್ರೇಲ್ ಎಂಬ ಯಹೂದಿ ಸಮುದಾಯದ ದೇಶ ತನ್ನ ಬುದ್ಧಿಶಕ್ತಿ, ದೂರ ದೃಷ್ಟಿ, ಅದ್ಭುತ ಪ್ರಗತಿ, ಬಲಾಢ್ಯ ಸೈನಿಕ ಶಕ್ತಿ, ಆಧುನಿಕ ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಜಗತ್ತಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ದೇಶವೆಂದರೆ ಹೀಗಿರಬೇಕು ಎನಿಸುವಷ್ಟು ಇಸ್ರೇಲಿನ ಬಗ್ಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೆಯ ಮಾಹಿತಿಗಳು ಸಿಗುತ್ತವೆ. ಹಾಗೆಯೇ ಬಹುಶಃ ಜಗತ್ತಿನ ಕೆಲವೇ ಕೆಲವು ಐತಿಹಾಸಿಕ ಹಿಂಸಾತ್ಮಕ ಘಟನೆಗಳನ್ನು ಹೊರತುಪಡಿಸಿದರೆ, ಜರ್ಮನಿಯ ಹಿಟ್ಲರ್ ನಿಂದ ತಮ್ಮ ಸಮುದಾಯಕ್ಕೆ ಆದ ಅಮಾನುಷ ದೌರ್ಜನ್ಯದ ಪ್ರತಿಫಲವೋ ಏನೋ ಇಸ್ರೇಲಿನ ಇತ್ತೀಚಿನ…

ಮುಂದೆ ಓದಿ..
ಸುದ್ದಿ 

ಕೋಡಿಮಠದ ಸ್ವಾಮಿಗಳ ಭವಿಷ್ಯವಾಣಿ…..

Taluknewsmedia.com

Taluknewsmedia.comಕೋಡಿಮಠದ ಸ್ವಾಮಿಗಳ ಭವಿಷ್ಯವಾಣಿ….. ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40/50 ವರ್ಷಗಳಿಂದ ಅವರ ಭವಿಷ್ಯ ವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ, ರಾಜಕೀಯ ಮತ್ತು ಕೆಲವು ದುರಂತ ಘಟನೆಗಳ ಬಗ್ಗೆ ಅವರು ನುಡಿದ ಭವಿಷ್ಯಗಳು ಸಾಮಾನ್ಯವಾಗಿ ನಿಜವಾಗುತ್ತದೆ….. ಹಾಗಾದರೆ ಸ್ವಾಮೀಜಿಗಳ ಭವಿಷ್ಯ ನಿಜವೇ, ಅವರಿಗೆ ಆ ಶಕ್ತಿ ಇದೆಯೇ ಅಥವಾ ಅದೊಂದು ಅನುಭವದ ಮಾತುಗಳೇ, ಆಳ ಅಧ್ಯಯನದ ಚಿಂತನೆಯೇ, ದೂರ ದೃಷ್ಟಿಯೇ ಅಥವಾ ಅವರೊಳಗಿನ, ಪ್ರತಿಭೆಯೇ, ಅವರು ವಿಶೇಷ ಸಾಮರ್ಥ್ಯವೇ,ವೈಚಾರಿಕತೆಯೇ, ವೈಜ್ಞಾನಿಕವೇ, ಮೂಡನಂಬಿಕೆಯೇ ಹೀಗೆ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಉದ್ಭವವಾಗುತ್ತದೆ….. ಪ್ರಾಕೃತಿಕವಾಗಿ, ಸಹಜವಾಗಿ ಹೇಳುವುದಾದರೆ ಭವಿಷ್ಯವನ್ನು ಊಹಿಸಿ ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ. ವಿಜ್ಞಾನವು ಕೂಡ ಆ ವಿಷಯದಲ್ಲಿ ಸಂಪೂರ್ಣ ಸತ್ಯ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಭವಿಷ್ಯದ ಘಟನೆಗಳು ಎಲ್ಲಾ…

ಮುಂದೆ ಓದಿ..
ಅಂಕಣ 

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ……..

Taluknewsmedia.com

Taluknewsmedia.comಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ…….. ಅಲೆಮಾರಿಗಳ ಅಲೆದಾಟಕ್ಕೆ ಪೂರ್ಣವಿರಾಮ ನೀಡಬೇಕಾದ ಸಮಯ ಬಂದಿದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಊಟ, ಬಟ್ಟೆ ಮತ್ತು ವಸತಿ ಬಹಳ ಮುಖ್ಯವಾದದ್ದು. ಆಧುನಿಕ ನಾಗರಿಕ ಸಮಾಜ ಅಭಿವೃದ್ಧಿ ಹೊಂದಿದಂತೆ ಊಟ, ಬಟ್ಟೆಗಿಂತ ಮನೆ ಎಂಬ ವಾಸ ಸ್ಥಳವೇ ಬಹುಮುಖ್ಯವಾಯಿತು. ಪ್ರತಿಯೊಬ್ಬರೂ ಮುಖ್ಯವಾಗಿ ಮಧ್ಯಮ ವರ್ಗದವರು ಮತ್ತು ಬಡವರ ಜೀವನದ ಬಹುದೊಡ್ಡ ಆಸೆ ಸ್ವಂತ ಮನೆ ಹೊಂದುವುದು. ಆದರೆ ಇಲ್ಲಿ ನೆಲೆಯೇ ಇಲ್ಲದ ಅಲೆಮಾರಿ ಬುಡಕಟ್ಟು ಜನಾಂಗದ ಈಗ ಮುಖ್ಯ ವಾಹಿನಿಯ ಗಮನ ಸೆಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಳ ಮೀಸಲಾತಿಯ ವಿಷಯ ವಿವಾದವಾಗಿ, ಕೊನೆಗೆ ಪರಿಹಾರ ರೂಪದಲ್ಲಿ ಒಂದು ಸೂತ್ರ ಸಿದ್ಧವಾಗಿದೆ. ಆ ಸೂತ್ರದ ಪ್ರಕಾರ ಅಲೆಮಾರಿ ಜನಾಂಗವನ್ನು ಮೂರನೇ ವರ್ಗಕ್ಕೆ ಸೇರಿಸಿ ಅಲ್ಲಿಯ ಬಲಿಷ್ಠರೊಂದಿಗೆ ಸ್ಪರ್ಧಿಸಲು ಹೇಳಿರುವುದರಿಂದ ಅಲೆಮಾರಿ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿದೆ…

ಮುಂದೆ ಓದಿ..
ಅಂಕಣ 

ಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ……..

Taluknewsmedia.com

Taluknewsmedia.comಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ…….. ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ,ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ……. ನಾನು ರಾಜನಲ್ಲ,ನಾನೊಬ್ಬ ಸಾಮಾನ್ಯ ಕೃಷಿಕ, ನನಗೆ ಅರಮನೆ ಇಲ್ಲ,ನನಗಿರುವುದು ಹೆಂಚಿನ ಮನೆ, ನಾನು ಆನೆಯ ಮೇಲೆ ಕುಳಿತು ಓಡಾಡುವವನಲ್ಲ,ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವವನು ನಾನು, ಸಿಂಹಾಸನ ಮೇಲೆ ಕುಳಿತುಕೊಳ್ಳುವವ ನಾನಲ್ಲ,ಹುಲ್ಲು ಹಾಸಿನ ಮೇಲೆ ಮಲಗುವವ ನಾನು, ಛತ್ರ ಚಾಮರ ಬೀಸಣಿಕೆಯ ತಂಪು ಗಾಳಿ ನನಗಿಲ್ಲ,ಬಿಸಿಲಿನ ಝಳದಲ್ಲಿ, ಗಾಳಿಯ ರಭಸಕ್ಕೆ ಭತ್ತದ ರಾಶಿಯ ಹೊಟ್ಟು ತೂರುವವನು ನಾನು, ಭಕ್ಷ್ಯ ಭೋಜನ ತಿನ್ನುವವನಲ್ಲ,ರಾಗಿ, ರೊಟ್ಟಿ, ಜೋಳ, ಮೆಣಸಿನಕಾಯಿ, ಸೊಪ್ಪು, ಗೊಜ್ಜು ತಿನ್ನುವವನು ನಾನು, ಆಳು ಕಾಳು, ಸೇವಕ, ಸೈನಿಕರು ನನಗಿಲ್ಲ,ನನಗೆ ನಾನೇ ಕಾಲಾಳು, ಮೈತುಂಬ ವೈಭವೋಪೇತ ಬಟ್ಟೆ ತೊಡಲು ನಾನು ಅರಸನಲ್ಲ,ಪಂಚೆ, ಜುಬ್ಬ ಕೆಲವೊಮ್ಮೆ ಬರಿಮೈ…

ಮುಂದೆ ಓದಿ..
ಅಂಕಣ 

ಪಂಥಗಳಾಚೆಯ ಬದುಕು,ಇಸಂ ಮುಕ್ತ ಜೀವನ..

Taluknewsmedia.com

Taluknewsmedia.comಪಂಥಗಳಾಚೆಯ ಬದುಕು, ಇಸಂ ಮುಕ್ತ ಜೀವನ, ದೀರ್ಘವಾದರೂ ಗಂಭೀರ ವಿಷಯ, ದಯವಿಟ್ಟು ಗೌರಿ ಹಬ್ಬದ ವಿರಾಮದಲ್ಲಿ ಸ್ವಲ್ಪ ಸಮಯ ನೀಡಿ… ಸಮಾಜ ಮಾನಸಿಕ ವಿಭಜನೆ ಆಗುವ ಮುನ್ನ ಎಚ್ಚರವಿರಲಿ, ನಾವೆಲ್ಲರೂ ಒಂದೇ ಬಳ್ಳಿಯ ಹೂಗಳು, ಒಂದೇ ದೋಣಿಯ ಪಯಣಿಗರು, ನಮ್ಮ ಅಜ್ಞಾನದಿಂದ ದೋಣಿ ಮುಳುಗದಿರಲಿ……. ಎಡಪಂಥೀಯರು, ಎಡಚರರು, ಅರ್ಬನ್ ನಕ್ಸಲರು ಇತ್ಯಾದಿ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕೇಳಿ ಬರುತ್ತಿವೆ. ಇವರು ಧರ್ಮ ವಿರೋಧಿಗಳು, ದೇಶದ್ರೋಹಿಗಳು, ಹಿಂಸಾವಾದಿಗಳು ಎಂಬ ಅರ್ಥದಲ್ಲಿ ಇದರ ವಿರುದ್ಧ ಚಿಂತನೆಯವರು ಮಾತನಾಡುತ್ತಿದ್ದಾರೆ. ಹಾಗೆಯೇ, ಬಲಪಂಥೀಯರು, ರೈಟ್ ವಿಂಗ್ ನವರು, ರಾಷ್ಟ್ರೀಯ ವಾದಿಗಳು, ಧರ್ಮ ರಕ್ಷಕರು ಮುಂತಾದ ಹೆಸರುಗಳಿಂದ ಕೆಲವರನ್ನು ಕರೆಯಲಾಗುತ್ತದೆ. ಇವರು ಕೋಮುವಾದಿಗಳು, ಗಲಭೆಕೋರರು, ವಿಭಜಕ ಮನಸ್ಥಿತಿಯವರು, ಮಾನವ ವಿರೋಧಿಗಳು, ಅಸಮಾನತೆಯ ಜನಕರು ಎಂದು ಅವರ ವಿರೋಧಿಗಳು ಹೇಳುತ್ತಾರೆ. ಇದು ಖಂಡಿತ ತಪ್ಪು ಮತ್ತು ವಿಭಜನಾತ್ಮಕ ಮನಸ್ಥಿತಿ. ಈ ರೀತಿ ಯಾವುದೋ…

ಮುಂದೆ ಓದಿ..
ಅಂಕಣ 

ಘರ್ಷಣೆ ಮತ್ತು ಸೌಹಾರ್ದತೆ,ಆಯ್ಕೆ ನಿಮ್ಮದು, ನಮ್ಮದು……

Taluknewsmedia.com

Taluknewsmedia.comಘರ್ಷಣೆ ಮತ್ತು ಸೌಹಾರ್ದತೆ,ಆಯ್ಕೆ ನಿಮ್ಮದು, ನಮ್ಮದು…… ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ – ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ…… ಇದು ಹಿಂದು – ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ…… ಸಾಮಾನ್ಯವಾಗಿ ಗಣೇಶ ಹಬ್ಬವು ವೈಯಕ್ತಿಕತೆಯ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಉತ್ಸವವಾಗಿ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ರಾಜಕೀಯ ಕಾರಣದಿಂದಾಗಿ ಒಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದೆ. ಎರಡು ಬಹುಮುಖ್ಯ ಕಾರಣಗಳಿಗಾಗಿ ಈ ಸಂದರ್ಭದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಗಣೇಶನನ್ನು ಪ್ರತಿಷ್ಠಾಪಿಸುವ ಜಾಗ ಮತ್ತು ಮೆರವಣಿಗೆಯ ಹಾದಿ ಇಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನ ಗೊಳಿಸುತ್ತದೆ. ಮುಖ್ಯವಾಗಿ ಹಿಂದೂ ಮುಸ್ಲಿಮರ ನಡುವೆ…. ವಿಶ್ವದ ಬೃಹತ್ ಭೌಗೋಳಿಕ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಬಹುಶಃ ಏಳನೆಯ ಸ್ಥಾನ ಇರಬೇಕು. ಒಂದು…

ಮುಂದೆ ಓದಿ..