ವಿಜಯನಗರದ ಹೆಬ್ಬಾಳ ಫ್ಲೈಓವರ್ ಬಳಿ ಬಹು ವಾಹನಗಳ ಗುದ್ದಾಟ – KSRTC ಬಸ್ ಚಾಲಕರ ಅಜಾಗರೂಕತೆ ಅಪಘಾತಕ್ಕೆ ಕಾರಣ
Taluknewsmedia.comಬೆಂಗಳೂರುನಗರದ ವಿಜಯನಗರದ ಹೆಬ್ಬಾಳ ಫ್ಲೈಓವರ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭಾರೀ ಅಪಘಾತದಲ್ಲಿ ನಾಲ್ಕು ವಾಹನಗಳು ಪರಸ್ಪರ ಡಿಕ್ಕಿಯಾದ ಘಟನೆ ನಡೆದಿದೆ. ಚಾಲಕರ ಅಜಾಗರೂಕತೆ ಮತ್ತು ವೇಗವೇ ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ತಮ್ಮ ಖಾಸಗಿ ಕಾರು KA-50-MD-1205 ನಲ್ಲಿ ಹೆಬ್ಬಾಳದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, KSRTC ಬಸ್ ಸಂಖ್ಯೆ KA-40-F-0934 ರ ಚಾಲಕ ಗಜೇಂದ್ರಪ್ಪ ಅವರು ನಿಯಂತ್ರಣ ತಪ್ಪಿದ ಬಸ್‌ನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು, ಕಾರಿಗೆ ಬಲದಿಂದ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಕಾರು ಮಾತ್ರವಲ್ಲದೇ, ಹತ್ತಿರದಲ್ಲಿ ನಿಲ್ಲಿಸಿದ್ದ KA-51-MC-4933 ಎಂಬ ಇನ್ನೊಂದು ಖಾಸಗಿ ಕಾರು ಹಾಗೂ ಸಾರ್ವಜನಿಕ ಬಸ್ KA-17-B-4121 ಗೆ ಸಹ ಹಾನಿಯುಂಟಾಗಿದೆ. ಮೂರು ವಾಹನಗಳು ಜಖಂಗೊಂಡಿದ್ದು, ವಾಹನ ಸವಾರರು ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ…
ಮುಂದೆ ಓದಿ..
