ಹೊನ್ನೇನಹಳ್ಳಿ ಮಹಿಳೆಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ – ಪ್ರಕರಣ ದಾಖಲೆ
Taluknewsmedia.comಬೆಂಗಳೂರು ಗ್ರಾಮಾಂತರ 23 ಆಗಸ್ಟ್ 2025ಹೊನ್ನೇನಹಳ್ಳಿಯ ಜರ್ ಸೆರಾಮಿಕ್ ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಂಗಡಿ ಮಾಲೀಕರಾದ ರವಿ ಅಗರ್ವಾಲ್ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಕವಿತಾ ಅವರ ದೂರಿನ ಪ್ರಕಾರ, ಆರೋಪಿಯು ಹಲವು ತಿಂಗಳುಗಳಿಂದ ಅವಳನ್ನು ಅಂಗಡಿಯ ಕ್ಯಾಬಿನ್‌ಗೆ ಕರೆಯಿಸಿ ಅಸಭ್ಯ ವರ್ತನೆ ಮಾಡುತ್ತಿದ್ದನು. ತನ್ನ XUV ಕಾರಿನಲ್ಲಿ ಕೂರಿಸಿಕೊಂಡು ಮನೆ ಹತ್ತಿರಕ್ಕೆ ಕರೆದುಕೊಂಡು ಹೋಗಿ ಶಾರೀರಿಕ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಹೇಳಲಾಗಿದೆ. “ನಿನ್ನ ಗಂಡ ಬಿಕಾರಿ, ನನ್ನ ಬಳಿ 50–60 ಕೋಟಿ ಇದೆ, ನನಗೆ ಏನೂ ಮಾಡಲು ಯಾರಿಗೂ ಸಾಧ್ಯವಿಲ್ಲ” ಎಂದು ಅವಳಿಗೆ ಬೆದರಿಕೆ ಹಾಕುತ್ತಿದ್ದನೆಂದು ಆರೋಪವಿದೆ. ಇದಲ್ಲದೆ, “ನೀನು ತಿರುಪತಿಗೆ ಬರಬೇಕು, ಇಲ್ಲವಾದರೆ ನಿನ್ನ ಗಂಡ ಮತ್ತು ಮಗುವನ್ನು ಕೊಲೆ ಮಾಡಿಸುತ್ತೇನೆ” ಎಂದು ಬೆದರಿಸಿ ಅವಳನ್ನು ತಿರುಪತಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ ಘಟನೆ ದೂರುನಲ್ಲಿದೆ.…
ಮುಂದೆ ಓದಿ..
