ಸುದ್ದಿ 

ಬೆಂಗಳೂರು ನಗರದ ಮಾರನಾಯಕನಹಳ್ಳಿ ವ್ಯಕ್ತಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.com ಬೆಂಗಳೂರು:18 ಆಗಸ್ಟ್ 2025ನಗರದ ಮಾರನಾಯಕನಹಳ್ಳಿ ಒಂದು ಪ್ರದೇಶದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿ ಕಾಣೆಯಾದ ಘಟನೆ ವರದಿಯಾಗಿದೆ. ಚಿಕ್ಕಜಾಲ ಪೊಲೀಸರಿಗೆ ನೀಡಿದ ದೂರು ಪ್ರಕಾರ, ಆಗಸ್ಟ್ 2, 2025ರಂದು ರಾತ್ರಿ ಸುಮಾರು 9 ಗಂಟೆಗೆ ಮದ್ಯಪಾನ ಮಾಡಿದ ವೆಂಕಟೇಶ್ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಟಿದ್ದಾರೆ. ನಂತರದಿಂದ ಅವರು ಮನೆಗೆ ಮರಳಿಲ್ಲ ಮತ್ತು ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹಿಂದೆ ಜಗಳವಾದ ಸಂದರ್ಭದಲ್ಲಿ ಅವರು ಮನೆ ಬಿಟ್ಟು ಹೋಗಿ ಮತ್ತೆ ವಾಪಸ್ಸಾದ ಘಟನೆಗಳಿದ್ದರೂ, ಈ ಬಾರಿ ಹಿಂತಿರುಗದಿರುವುದರಿಂದ ಕುಟುಂಬವು ಚಿಂತೆಗೆ ಒಳಗಾಗಿದೆ. ಕಾಣೆಯಾದ ವ್ಯಕ್ತಿಯ ವಿವರಗಳು: ಹೆಸರು: ವೆಂಕಟೇಶ್ ಧರಿಸಿದ್ದ ಉಡುಪು: ಬಿಳಿ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್, ಬೂದು ಬಣ್ಣದ ಹ್ಯಾಂಡ್ ಶಾರೀರಿಕ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ

Taluknewsmedia.com

Taluknewsmedia.comಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ ಬೆಂಗಳೂರು:18 ಆಗಸ್ಟ್ 2025ಆನ್‌ಲೈನ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೂಪ ಸಿ ಕಾಲಹವರಿಗೆ ಅಪರಿಚಿತರಿಂದ ಸಂದೇಶ ಬಂದು, ತಮ್ಮ ಖಾತೆಗೆ ಹಣ ಹಾಕಲು ಹೇಳಲಾಗಿದೆ. ರೂಪ ಅವರು ಸಂದೇಶವನ್ನು ನಂಬಿ, ಎನ್‌ಒಐ ಬ್ಯಾಂಕ್ ಖಾತೆ ಸಂಖ್ಯೆ 20407719457 ಹಾಗೂ ಇನ್ನೊಂದು 250100048700002 ಸೇರಿ ಹಲವು ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹1,94,980 ಮೊತ್ತವನ್ನು ಜಮೆ ಮಾಡಿದ್ದಾರೆ. ಅನಂತರ ತಾನು ಮೋಸಗೀಡಾದ ವಿಷಯ ತಿಳಿದುಕೊಂಡ ಪೀಡಿತರು ಅಮೃತ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು 9211930221, 7992050376, 8545822947, 9211938864 ಸೇರಿದಂತೆ ಹಲವು ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಹಣ ವರ್ಗಾಯಿಸಲು ಒತ್ತಾಯಿಸಿದ್ದರೆಂಬುದು ಪತ್ತೆಯಾಗಿದೆ.

ಮುಂದೆ ಓದಿ..
ಸುದ್ದಿ 

ಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ

Taluknewsmedia.com

Taluknewsmedia.comಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ ಬೆಂಗಳೂರು, 18 ಆಗಸ್ಟ್ 2025:ಸಂಪಿಗೆಹಳ್ಳಿ ಪೊಲೀಸ್ ಠಾಣೆಯ PSI ಕುಪೇಂದ್ರ ಹೆಚ್.ಸಿ. ಅವರ ತಂಡ ಇಂದು ಮಧ್ಯಾಹ್ನ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಹತ್ತಿರ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದೆ. ಸಂಪಿಗೆಹಳ್ಳಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದಾಗ, ನಂಬರ್ ಪ್ಲೇಟ್ ಇಲ್ಲದ Pulsor NS-400 ಬೈಕ್ ಸೀಟ್ ಕೆಳಗಡೆ ಅಡಗಿಸಿದ್ದ 30 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಕಪ್ಪು ಬಣ್ಣದ ಪೌಚ್ ಹಾಗೂ ಒಪ್ಪೋ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಯಿತು. ಬಂಧಿತನನ್ನು ವಸೀಂ ಆಕ್ರಮ್ ಅಕಾ ಆರ್ಯನ್ ಎಂದು ಗುರುತಿಸಲಾಗಿದ್ದು, ಆತ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನೆಂಬ ಶಂಕೆ ಇದೆ. ಸ್ಥಳಕ್ಕೆ ಬಂದ ತಜ್ಞರು ವಶಕ್ಕೆ ಪಡೆದ ವಸ್ತುಗಳನ್ನು ಪರೀಕ್ಷಿಸಿ…

ಮುಂದೆ ಓದಿ..
ಸುದ್ದಿ 

ತಿರುಮೇನಹಳ್ಳಿಯಲ್ಲಿ ಮನೆ ಕಳ್ಳತನ – ಚಿನ್ನ, ಬೆಳ್ಳಿ ಆಭರಣ ದೋಚಾಟ

Taluknewsmedia.com

Taluknewsmedia.com ಬೆಂಗಳೂರು: ಆಗಸ್ಟ್ 18 2025ತಿರುಮೇನಹಳ್ಳಿ ಅಗ್ರಹಾರ ಲೇಔಟ್ ಪ್ರದೇಶದಲ್ಲಿ 15 ಆಗಸ್ಟ್ ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ ಮನೆಗೆ ವಾಪಸ್ಸು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ಮಧ್ಯಾಹ್ನ 12.30 ಗಂಟೆಗೆ ಕುಟುಂಬ ಮನೆಯನ್ನು ಲಾಕ್ ಹಾಕಿಕೊಂಡು ಹೊರಟಿದ್ದು, ಸಂಜೆ 4 ಗಂಟೆಗೆ ವಾಪಸ್ಸು ಬಂದಾಗ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಬೀರುವನ್ನು ಕಬ್ಬಿಣದ ರಾಡ್ ಬಳಸಿ ಒಡೆದು, ಆಭರಣಗಳನ್ನು ಕಳವು ಮಾಡಿದ್ದಾರೆ. ಕಳುವಾದ ವಸ್ತುಗಳ ವಿವರ: 4 ಚಿನ್ನದ ಉಂಗುರಗಳು 4 ಮಕ್ಕಳ ಚಿನ್ನದ ಉಂಗುರಗಳು ಚಿನ್ನದ ತಾಳಿ ಮಾದರಿಯ ಡಾಲರ್ – 1 ಬೆಳ್ಳಿಯ ಉಂಗುರಗಳು – 5 ಬೆಳ್ಳಿಯ ಚೈನ್ – 1 ಒಟ್ಟಾರೆ ಸುಮಾರು 17 ಗ್ರಾಂ ಚಿನ್ನ ಹಾಗೂ 20 ಗ್ರಾಂ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 23 ವರ್ಷದ ಯುವತಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.com ಬೆಂಗಳೂರುತಿಂಡ್ಲು ವಿದ್ಯಾರಣ್ಯಪುರದಲ್ಲಿ ವಾಸವಿರುವ ಸುಮಾರು 23 ವರ್ಷದ ಯುವತಿ ಚಾಂದಿನಿ ಕಾಣೆಯಾದ ಪ್ರಕರಣ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ ಮಹಿಳೆಯ ಪ್ರಕಾರ, ಅವರು ಯುಪಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಗಂಡ ಆಟೋ ಚಾಲಕರಾಗಿದ್ದಾರೆ. ಇವರಿಗೆ ಮೂರು ಮಂದಿ ಮಕ್ಕಳು ಇದ್ದಾರೆ. 2025ರ ಆಗಸ್ಟ್ 14ರಂದು ಸಂಜೆ ಸುಮಾರು 4.30ರ ಹೊತ್ತಿಗೆ, ಚಾಂದಿನಿ ಮನೆಯಲ್ಲಿಯೇ ಇದ್ದಳು. ನಂತರ ಸಂಜೆ 5 ಗಂಟೆಯ ವೇಳೆಗೆ ಆಕೆ ಹೊರಗೆ ಹೋದರು ಎಂದು ತಮ್ಮ ತಂಗಿ ಕೀರ್ತಿ ತಿಳಿಸಿದ್ದಾಳೆ. ಕುಟುಂಬದವರು ಹಲವಾರು ಬಾರಿ ಕರೆ ಮಾಡಿದರೂ, ಚಾಂದಿನಿ ಫೋನ್ ಸ್ವೀಕರಿಸಲಿಲ್ಲ. ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ಚಾಂದಿನಿ ತನ್ನ ಸ್ನೇಹಿತೆ ರಾಣಿಯೊಂದಿಗೆ ಜೆಪಿ ನಗರಕ್ಕೆ ತೆರಳುತ್ತಿದ್ದೇನೆ, ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದರೂ, ಆಕೆ…

ಮುಂದೆ ಓದಿ..
ಸುದ್ದಿ 

ಊಟಿಗೆ ಪ್ರವಾಸಕ್ಕೆ ರೂಂ ಬುಕ್ಕಿಂಗ್ ನೆಪದಲ್ಲಿ ₹48,013 ವಂಚನೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025ಬೆಂಗಳೂರು: ಏರ್‌ಬಿಎನ್‌ಬಿ ಮೂಲಕ ಊಟಿಗೆ ಪ್ರವಾಸಕ್ಕಾಗಿ ಹೋಟೆಲ್ ರೂಂ ಬುಕ್ ಮಾಡುವ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ ವಂಚನೆ ನಡೆದಿದೆ.ಅರವಿಂದ್ ಕುಮಾರ್ ಅವರು ಹಾಗೂ ಅವರ ಸ್ನೇಹಿತರು 14.08.2025 ರಂದು ಬೆಳಗ್ಗೆ 8.30ಕ್ಕೆ ಊಟಿಗೆ ಪ್ರಯಾಣಿಸಲು ಏರ್‌ಬಿಎನ್‌ಬಿ ಆಪ್ ಮೂಲಕ ಎರಡು ಬೆಡ್‌ಗಳಿರುವ ರೂಂ ಬುಕ್ ಮಾಡಲು ಪ್ರಯತ್ನಿಸಿದರು. ಆದರೆ ಬುಕಿಂಗ್ ರಸೀದಿಯಲ್ಲಿ ಒಂದೇ ಬೆಡ್ ಇರುವ ರೂಂ ತೋರಿಸಿದ್ದರಿಂದ, ಅವರು ಗೂಗಲ್‌ನಲ್ಲಿ ಹುಡುಕಿ ಹೋಟೆಲ್ ಕಸ್ಟಮರ್ ಕೇರ್ ಸಂಖ್ಯೆಗೆ ಸಂಪರ್ಕಿಸಿದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, “ನಿಮಗೆ ಎರಡು ಬೆಡ್‌ಗಳಿರುವ ರೂಂ ಮಾಡಿಕೊಡುತ್ತೇನೆ” ಎಂದು ಹೇಳಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದರು. ಆರೋಪಿಯ ಸೂಚನೆಂತೆ ಪೇಮೆಂಟ್ ಪ್ರಕ್ರಿಯೆ ನಡೆಸಿದ ನಂತರ, ದೂರುದಾರರ ಖಾತೆಯಿಂದ ಒಟ್ಟು ₹48,013 ಹಣ ಡೆಬಿಟ್‌ ಆಗಿದೆ. ವಂಚನೆಯಿಂದ ಹಣ ಕಳೆದುಕೊಂಡ ದೂರುದಾರರು ಬಾಗಲೂರು ಪೊಲೀಸರಿಗೆ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಚರ್ಚ್ ಪಾಸ್ಟರ್‌ಗಳ ವಿರುದ್ಧ ಸದಸ್ಯನಿಗೆ ಕಿರುಕುಳ, ಬೆದರಿಕೆ ಆರೋಪ

Taluknewsmedia.com

Taluknewsmedia.comಬೆಂಗಳೂರು: ಚರ್ಚ್ ಪಾಸ್ಟರ್‌ಗಳ ವಿರುದ್ಧ ಸದಸ್ಯನಿಗೆ ಕಿರುಕುಳ, ಬೆದರಿಕೆ ಆರೋಪ ಬೆಂಗಳೂರು ಆಗಸ್ಟ್ 16 2025 ಬೆಂಗಳೂರು ಮೂಲದ ಸಂತೋಷ್ ಕುಮಾರ್ ಎಂಬ ವ್ಯಕ್ತಿ ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್‌ (CFC) ಪಾಸ್ಟರ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂತೋಷ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಪ್ರಕಾರ, 2002 ರಿಂದ ಚರ್ಚ್ ಸದಸ್ಯರಾಗಿದ್ದ ಸಂತೋಷ್ ಕುಮಾರ್, ಸೆಪ್ಟೆಂಬರ್ 2024ರಿಂದ ಯಾವುದೇ ಕಾರಣವಿಲ್ಲದೆ ಭಾನುವಾರದ ಪೂಜೆ ಮತ್ತು ಇತರ ಕ್ರಿಶ್ಚಿಯನ್ ಸಭೆಗಳಲ್ಲಿ ಭಾಗವಹಿಸಲು ತಡೆಯಲ್ಪಟ್ಟಿದ್ದಾರೆ. 08 ಜೂನ್ 2025ರಂದು ಚರ್ಚ್‌ಗೆ ಹೋದಾಗ, ಪಾಸ್ಟರ್‌ಗಳು ಪ್ರವೇಶ ನಿರಾಕರಿಸಿ ಅವಮಾನಕಾರಿ ಪದಗಳನ್ನು ಬಳಸಿದ್ದಲ್ಲದೆ, ದೇಹದ ಮೇಲೆ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ದೂರು ಹೇಳುತ್ತದೆ. ಇದಲ್ಲದೆ, ಮಹಿಳೆಯರ ಮೇಲೆ ಅಪರಾಧ ಅಥವಾ ಕೊಲೆ ಮಾಡಲು ಪ್ರೇರೇಪಿಸುವಂತ ಅಸಭ್ಯ ಹೇಳಿಕೆಗಳನ್ನು ತಮ್ಮ ಹೆಂಡತಿ ಮತ್ತು ಮಕ್ಕಳ ಮುಂದೆ…

ಮುಂದೆ ಓದಿ..
ಸುದ್ದಿ 

ಗೋದ್ರೇಜ್ ಆನಂದ ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ವೈರ್ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ಯಲಹಂಕ ನ್ಯೂಟೌನ್‌ನ ಜಲದಿ ಎಲೆಕ್ಟ್ರಿಕಲ್ (ಜಿ.ಇ. ಪ್ರಾಜೆಕ್ಟ್) ಕಂಪನಿಯಲ್ಲಿ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ದೂರು ಆಧಾರವಾಗಿ ಬಾಗಲೂರು ಸಮೀಪದ ಗೋದ್ರೇಜ್ ಆನಂದ ಫೇಸ್–2 ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ಎಲೆಕ್ಟ್ರಿಕಲ್ ವೈರ್ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಬಿ ಮತ್ತು ಸಿ ಟವರ್‌ಗಳ 2ನೇ ಮಹಡಿಯಲ್ಲಿ (ಪಾಟ್ ನಂ. 203 ಮತ್ತು 209) ಕೆಲಸಕ್ಕಾಗಿ ಇಟ್ಟಿದ್ದ ಕಾಪರ್ ವೈರ್ ಕಾಯಿಲ್ ಬಾಕ್ಸ್‌ಗಳನ್ನು ಆಗಸ್ಟ್ 6ರಂದು ಸಂಜೆ ಲಾಕ್ ಹಾಕಿ ಬಿಟ್ಟು ಹೋಗಿದ್ದರು. ಆದರೆ, ಆಗಸ್ಟ್ 7ರಂದು ಬೆಳಿಗ್ಗೆ ಬಂದು ನೋಡಿದಾಗ ಲಾಕ್ ಮುರಿದು ಕಾಯಿಲ್‌ಗಳು ಕಳ್ಳತನವಾಗಿರುವುದು ಪತ್ತೆಯಾಯಿತು. ಕಂಪನಿಯವರು ಕಳ್ಳತನವಾದ ಸಾಮಗ್ರಿಗಳ ನಿಖರ ಪ್ರಮಾಣ ಮತ್ತು ಮೌಲ್ಯದ ಮಾಹಿತಿಯನ್ನು ನಂತರ ನೀಡುವುದಾಗಿ ತಿಳಿಸಿದ್ದಾರೆ. ಪ್ರಕರಣ ಬಾಗಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಜಮೀನು ವಿವಾದ – ಬೆಳೆ ನಾಶ, ರೈತನಿಗೆ ಬೆದರಿಕೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025ಯಲಹಂಕದಲ್ಲಿ ಜಮೀನು ವಿವಾದ ತೀವ್ರಗೊಂಡಿದ್ದು, ರೈತನ ಬೆಳೆಗಳನ್ನು ನಾಶಪಡಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೂರುದಾರರು 2010ರಲ್ಲಿ 2 ಎಕರೆ 39 ಗುಂಟೆ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದರು. ನ್ಯಾಯಾಲಯ ತೀರ್ಪು ತಮ್ಮ ಪರವಾಗಿ ಬಂದಿದ್ದರೂ, ಜುಲೈ 31ರಂದು ಆರೋಪಿಗಳು ಜಮೀನಿಗೆ ಬಂದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 1ರ ರಾತ್ರಿ ಆರೋಪಿಗಳು JCB ಯಂತ್ರದಿಂದ ಹಲಸಿನ ಗಿಡ, ಬಟರ್‌ಫ್ರೂಟ್, ನಿಂಬೆ, ಹೊನ್ನೆ, ಮಹಾಗಣಿ, ಟೀಕ್‌ ಸೇರಿದಂತೆ ಹಲವು ಗಿಡಗಳನ್ನು ನೆಲಸಮಗೊಳಿಸಿದ್ದು, ₹5 ಲಕ್ಷ ನಷ್ಟ ಉಂಟಾಗಿದೆ. ಬಾಗಲೂರು ಪೊಲೀಸರು ಆರೋಪಿಗಳ ವಿರುದ್ಧ ಹಲ್ಲೆ, ಪ್ರಾಣಬೆದರಿಕೆ ಮತ್ತು ಆಸ್ತಿ ಹಾನಿ ಪ್ರಕರಣ ದಾಖಲಿಸಿದ್ದಾರೆ

ಮುಂದೆ ಓದಿ..
ಸುದ್ದಿ 

ಜಮೀನು ಹಕ್ಕು ವಿವಾದ – ನಕಲಿ ದಾಖಲೆ ಸೃಷ್ಟಿ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 16 2025ಬಿದರಹಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಸರ್ವೇ ನಂ.167 ರ 4 ಎಕರೆ 36 ಗುಂಟೆ ಜಮೀನು ಹಕ್ಕು ಸಂಬಂಧಿ ವಿವಾದ ಪ್ರಕರಣದಲ್ಲಿ, ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ ಪ್ರಕರಣ ದಾಖಲೆಯಾಗಿದೆ. ದೂರಿನಲ್ಲಿ, ಜಮೀನಿನ ಮಾಲಕಿ ಶಾಂತಕುಮಾರಿ ಆರ್. (ಆಸ್ಟ್ರೇಲಿಯಾದಲ್ಲಿ ವಾಸ) ರವರ ಸಹಿಯನ್ನು ನಕಲಿ ಮಾಡಿ, 20-12-2017 ರಂದು ಬೋಗಸ್ GPA ಸೃಷ್ಟಿಸಿ, ಜಮೀನು ಕಬಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿದೆ. ದೂರಿದಾರ ವಿನೋದ್ ಕುಮಾರ್ ಎಂ.ಎಲ್. ಅವರು, ಶಾಂತಕುಮಾರಿಯ ಪರವಾಗಿ ಜಮೀನು ನೋಡಿಕೊಳ್ಳುತ್ತಿದ್ದಾಗ, ರೇವತಿ ರಾಜ್ ಸೇರಿದಂತೆ ಕೆಲವು ಮಂದಿ ನಕಲಿ GPA ಹಾಗೂ ಸೇಲ್ ಡೀಡ್ ಸೃಷ್ಟಿಸಿ ನ್ಯಾಯಾಲಯಕ್ಕೂ ತಪ್ಪು ದಾಖಲೆ ಸಲ್ಲಿಸಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಮುಂಚೆ ಜಯನಗರ ಉಪನೋಂದಣಾಧಿಕಾರಿ ಹಾಗೂ ಕೊರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ವಿರುದ್ಧ IPC ಅಡಿಯಲ್ಲಿ ಮೋಸ, ನಕಲಿ…

ಮುಂದೆ ಓದಿ..