ಕಲಬುರಗಿ ಬ್ಯಾಂಕ್ ಚುನಾವಣೆ: ವಿಜಯೇಂದ್ರ ಮಾವನ ನಾಮಪತ್ರ ತಿರಸ್ಕೃತ — ಕಾಂಗ್ರೆಸ್‌ಗೆ ಮೊದಲ ಗೆಲುವಿನ ಸಂಭ್ರಮ
Taluknewsmedia.comಕಲಬುರಗಿ ಬ್ಯಾಂಕ್ ಚುನಾವಣೆ: ವಿಜಯೇಂದ್ರ ಮಾವನ ನಾಮಪತ್ರ ತಿರಸ್ಕೃತ — ಕಾಂಗ್ರೆಸ್‌ಗೆ ಮೊದಲ ಗೆಲುವಿನ ಸಂಭ್ರಮ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್ ನಿರ್ದೇಶಕರ ಚುನಾವಣೆಗಾಗಿ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ 33 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯಗೊಂಡಿವೆ ಎಂದು ಚುನಾವಣಾಧಿಕಾರಿ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಪ್ರಕಾಶ್ ಕುದರಿ ತಿಳಿಸಿದ್ದಾರೆ. ವಿಜಯೇಂದ್ರ ಮಾವನ ನಾಮಪತ್ರ ಅನರ್ಹ:ಬ್ಯಾಂಕ್‌ನ ಪ್ರಸ್ತುತ ನಿರ್ದೇಶಕರಾದ ಶಿವಾನಂದ ಅಪ್ಪಾಸಾಬ ಮಾನಕರ ಅವರು ಟಿಎಪಿಸಿಎಂನ ಬಿ ಕ್ಷೇತ್ರದಿಂದ ಪುನರಾಯ್ಕೆಗಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅಫಜಲಪುರ ಟಿಎಪಿಸಿಎಂ ಪ್ರದೇಶಕ್ಕೆ ಆಡಳಿತಾಧಿಕಾರಿ ನೇಮಕಗೊಂಡಿದ್ದ ಕಾರಣದಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಶಿವಾನಂದ ಮಾನಕರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮಾವರಾಗಿದ್ದಾರೆ ಎನ್ನುವುದು ವಿಶೇಷ. ಅವಿರೋಧ ಆಯ್ಕೆಗಳ ಸಂಭ್ರಮ:ಬ್ಯಾಂಕ್‌ನ ಅಧ್ಯಕ್ಷರಾಗಿರುವ ಸೋಮಶೇಖರ ಗೋನಾಯಕ (ಪಟ್ಟಣ…
ಮುಂದೆ ಓದಿ..
