ಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ!
Taluknewsmedia.comಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ! ಬೆಂಗಳೂರು ನಗರದ ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ಮಂಗಳಮುಖಿಯರ ಗ್ಯಾಂಗ್ ನಡುವೆ ನಡೆದ ಘಟನೆ ಈಗ ಸಂಚಲನ ಸೃಷ್ಟಿಸಿದೆ. ಕೆಆರ್‌ಪುರದ ಗ್ಯಾಂಗ್‌ಗೆ ಸೇರಿದ್ದ ಸುಕನ್ಯಾ ಎಂಬ ಮಂಗಳಮುಖಿ ಮೇಲೆ, ಬೊಮ್ಮನಹಳ್ಳಿಯ ಪ್ರೀತಿ ಮತ್ತು ಚಿನ್ನಿ ನೇತೃತ್ವದ ಮಂಗಳಮುಖಿಯರ ತಂಡ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಮಂಗಳಮುಖಿ ಸುಕನ್ಯಾ ತಮ್ಮ ಹಳೆಯ ತಂಡ ಬಿಟ್ಟು ಹೊಸ ತಂಡ ಸೇರಿದ್ದಕ್ಕೆ ಕೋಪಗೊಂಡ ಪ್ರೀತಿ ಹಾಗೂ ಸಹಚರರು ಸುಕನ್ಯಾಳನ್ನು ಕೆಆರ್‌ಪುರದಿಂದ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಹಿಟ್ಟಿನ ದೊಣ್ಣೆ, ಸೌಟು ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ತಲೆಯನ್ನು ಬೋಳಿಸಿ, ಕಾಲಿನಿಂದ ತಳ್ಳಿ, ಮನಸೋ ಇಚ್ಚೆ ಹೊಡೆದಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಹಲ್ಲೆಯ ವೇಳೆ ಮತ್ತೊಬ್ಬ ಮಂಗಳಮುಖಿಗೆ…
ಮುಂದೆ ಓದಿ..
