ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಈಗ ವಕೀಲ: ಸಂಸದೆ ಆಕ್ಷೇಪ ವ್ಯಕ್ತಪಡಿಸಿದ್ದೇಕೆ?
Taluknewsmedia.comರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಈಗ ವಕೀಲ: ಸಂಸದೆ ಆಕ್ಷೇಪ ವ್ಯಕ್ತಪಡಿಸಿದ್ದೇಕೆ? ಅಪರಾಧವೊಂದಕ್ಕೆ ಶಿಕ್ಷೆ ಅನುಭವಿಸಿದ ವ್ಯಕ್ತಿಯು ತನ್ನ ತಪ್ಪುಗಳನ್ನು ತಿದ್ದಿಕೊಂಡು ಸಮಾಜದ ಮುಖ್ಯವಾಹಿನಿಗೆ ಮರಳುವುದು ಸುಧಾರಣಾತ್ಮಕ ನ್ಯಾಯದಾನ ಪದ್ಧತಿಯ ಮೂಲ ಆಶಯ. ಆದರೆ, ಆ ಅಪರಾಧವು ದೇಶದ ಮಾಜಿ ಪ್ರಧಾನಿಯೊಬ್ಬರ ಹತ್ಯೆಯಂತಹ ಗಂಭೀರ ಸ್ವರೂಪದ್ದಾಗಿದ್ದರೆ, ಅಂತಹ ವ್ಯಕ್ತಿ ನ್ಯಾಯದಾನದ ಅತ್ಯುನ್ನತ ವೃತ್ತಿಯನ್ನೇ ಅಪ್ಪಿಕೊಳ್ಳುವುದು ಎಂತಹ ಚರ್ಚೆಗಳಿಗೆ ಕಾರಣವಾಗಬಹುದು? ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿಯಾಗಿದ್ದ ಎ.ಜಿ. ಪೆರಾರಿವಾಲನ್ ಈಗ ವಕೀಲರಾಗಿ ನೋಂದಣಿಯಾಗಿದ್ದಾರೆ. ದೇಶದ ಭದ್ರತೆ ಮತ್ತು ಕಾನೂನು ವೃತ್ತಿಯ ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಈಗ ಕಾನೂನು ಮತ್ತು ನೈತಿಕತೆಯ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ತಮಿಳುನಾಡಿನ ಮೈಲಾಡತುರೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಆರ್. ಸುಧಾ ಅವರು ಈ ಬೆಳವಣಿಗೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಎ.ಜಿ. ಪೆರಾರಿವಾಲನ್ ಅವರು ತಮಿಳುನಾಡು ಮತ್ತು ಪುದುಚೇರಿ ಬಾರ್…
ಮುಂದೆ ಓದಿ..
