ಕೋಲಾರ : ಮಿಕ್ಸಚರ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾರ್ ಕ್ಯಾಷಿಯರ್ ಕೊಲೆ
Taluknewsmedia.comಕೋಲಾರ : ಮಿಕ್ಸಚರ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾರ್ ಕ್ಯಾಷಿಯರ್ ಕೊಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದ ಘಟನೆಯೊಂದು ಆಘಾತ ಮೂಡಿಸಿದೆ. ಸಣ್ಣ ವಿಷಯಕ್ಕೆ ಕೋಪಗೊಂಡು ಒಬ್ಬ ಯುವಕ ಬಾರ್ ಕ್ಯಾಶಿಯರ್‌ನನ್ನೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಲಕ್ಕೂರು ಗ್ರಾಮದ ಅಶೋಕ ವೈನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಕುಮಾರ್ (45) ಎಂಬಾತ ಕೊಲೆಯಾದ ದುರ್ಘಟಿತ. ಆರೋಪಿಯಾಗಿರುವ ಸುಭಾಶ್ ಬಾರ್‌ನಲ್ಲಿ ಮಿಕ್ಸಚರ್ ನೀಡದ ವಿಚಾರಕ್ಕೆ ಕಿರಿಕ್ ಮಾಡಿದ್ದಾನೆಂಬ ಮಾಹಿತಿ ದೊರೆತಿದೆ. ಬಾರ್ ಮುಚ್ಚಿದ ಬಳಿಕ ರಾತ್ರಿ ಮನೆಗೆ ತೆರಳುತ್ತಿದ್ದ ಕುಮಾರ್‌ನ್ನು ಆರೋಪಿಯು ಮನೆ ಎದುರಿಗೇ ತಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ವೇಳೆ ಮೃತನ ಹೆಂಡತಿ ಮತ್ತು ಮಕ್ಕಳು ಕಣ್ಣೆದುರೇ ಈ ನೃಶಂಸ ಕೃತ್ಯ ನಡೆದಿದ್ದು, ಕುಟುಂಬ ಕಂಗಾಲಾಗಿದೆ. ಘಟನೆಯ ಬಳಿಕ ಆರೋಪಿ ಸುಭಾಶ್ ಪರಾರಿಯಾಗಿದ್ದು, ಮಾಲೂರು ಪೊಲೀಸರು ಶೋಧ…
ಮುಂದೆ ಓದಿ..
