ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಜಾಲ ಬಯಲು : ಖಾಸಗಿ ಆಸ್ಪತ್ರೆ ಮಾಲಕಿ ಕಿಂಗ್ಪಿನ್! ಐವರು ಬಂಧನ
Taluknewsmedia.comಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಜಾಲ ಬಯಲು : ಖಾಸಗಿ ಆಸ್ಪತ್ರೆ ಮಾಲಕಿ ಕಿಂಗ್ಪಿನ್! ಐವರು ಬಂಧನ ಮೈಸೂರಿನ ಬನ್ನೂರು ಹೈವೇ ಬಳಿಯ ಫಾರಂ ಹೌಸ್ನಲ್ಲಿ ನಡೆಯುತ್ತಿದ್ದ ಅಮಾನವೀಯ ಭ್ರೂಣ ಲಿಂಗ ಪತ್ತೆ ದಂಧೆ ಬಯಲಾಗಿದ್ದು, ಜಿಲ್ಲೆಯ ಆರೋಗ್ಯ ಇಲಾಖೆಯ ತಂಡವು ಯಶಸ್ವಿ ದಾಳಿ ನಡೆಸಿ ಐವರನ್ನು ಬಂಧಿಸಿದೆ. ಈ ಘಟನೆಯ ಮುಖ್ಯ ಆರೋಪಿ ಖಾಸಗಿ ಆಸ್ಪತ್ರೆಯ ಮಾಲಕಿಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ದಂಧೆಯ ಕಿಂಗ್ಪಿನ್: ಖಾಸಗಿ ಆಸ್ಪತ್ರೆ ಮಾಲಕಿ ಶ್ಯಾಮಲಾ ಬನ್ನೂರಿನ ಎಸ್.ಕೆ. ಆಸ್ಪತ್ರೆ ಮಾಲಕಿ ಶ್ಯಾಮಲಾ ಈ ಕೃತ್ಯದ ಮಾಸ್ಟರ್ಮೈಂಡ್ ಆಗಿದ್ದು, ಅವರ ಪತಿ ಗೋವಿಂದರಾಜು ಸಹ ಸಹಾಯಕರಾಗಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ಮಧ್ಯವರ್ತಿ ಪುಟ್ಟರಾಜು ಮೂಲಕ ಗರ್ಭಿಣಿಯರನ್ನು ಸಂಪರ್ಕಿಸಿ, ಫಾರಂ ಹೌಸ್ನಲ್ಲಿ ಅಕ್ರಮ ಸ್ಕ್ಯಾನಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಒಂದು ಭ್ರೂಣ ಲಿಂಗ ಪತ್ತೆಗೆ ₹25,000 ರಿಂದ ₹35,000 ವರೆಗೆ ವಸೂಲು ಮಾಡಲಾಗುತ್ತಿತ್ತೆಂದು ತಿಳಿದುಬಂದಿದೆ. ಫಾರಂ…
ಮುಂದೆ ಓದಿ..
