ನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ!
Taluknewsmedia.comನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ! ನೆಲಮಂಗಲದ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ‘ಬೀಟ್ ಪೊಲೀಸ್’ ಚಿತ್ರದ ಭರ್ಜರಿ ಮುಹೂರ್ತ ಕಾರ್ಯಕ್ರಮ ನಡೆಯಿತು.ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣ ಗೌಡರು ನಿರ್ಮಿಸುತ್ತಿರುವ ಈ ಚಿತ್ರವನ್ನು, ಖ್ಯಾತ ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕನಾಗಿ ನಟಿಸುತ್ತಿದ್ದು, “ಭೀಮ” ಚಿತ್ರದ ಮೂಲಕ ಪ್ರಖ್ಯಾತಿಯಾಗಿರುವ ನಟಿ ಪ್ರಿಯಾ ಅವರು ಸಶಕ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಜನಪ್ರಿಯ ನಟ ಡ್ರ್ಯಾಗನ್ ಮಂಜು ಮಿಂಚಲಿದ್ದಾರೆ. ನಿರ್ಮಾಪಕ ಆರ್. ಲಕ್ಷ್ಮಿ ನಾರಾಯಣ ಗೌಡ ಮಾತನಾಡಿ..“ಇದು ನಮ್ಮ ಆರ್ಯ ಫಿಲಂಸ್ನ ನಾಲ್ಕನೇ ಸಿನಿಮಾ. ನೈಜ ಘಟನೆಯ ಸುತ್ತ ಹೆಣೆದಿರುವ ಈ ಚಿತ್ರದಲ್ಲಿ ಇಂದಿನ ಎಜುಕೇಶನ್ ವ್ಯವಸ್ಥೆಯ ಕುರಿತಾದ ಗಂಭೀರ ಸಂದೇಶವಿದೆ. ಸಮಾಜದಲ್ಲಿ ಜನರು…
ಮುಂದೆ ಓದಿ..
