ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು?
Taluknewsmedia.comಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು? ಬೆಂಗಳೂರು ನಗರದ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ನಡೆದ ಹಲ್ಲೆ, ನಮ್ಮ ಸಮಾಜದ ಅಸಹಿಷ್ಣುತೆಯ ನಿಜವಾದ ಮುಖವನ್ನು ಮತ್ತೊಮ್ಮೆ ಬಯಲಿಗೆಳೆಯಿದೆ. ಚಿಕ್ಕಗೊಲ್ಲರಹಟ್ಟಿ ಬಳಿ ನಡೆದ ಈ ಘಟನೆ ಕೇವಲ ಒಂದು ತಕರಾರು ಅಲ್ಲ – ಅದು ಸಾರ್ವಜನಿಕ ಸೇವೆ ನೀಡುವವರ ಮೇಲಿನ ಗೌರವ ಕುಸಿಯುತ್ತಿರುವ ಸಂಕೇತ. ಬೈಕ್ ಸವಾರರಿಗೆ ಹಾರ್ನ್ ಕೊಟ್ಟ ಅಷ್ಟೇ ಕಾರಣಕ್ಕೆ ಬಸ್ ನಿಲ್ಲಿಸಿ, ಚಾಲಕ-ಕಂಡಕ್ಟರ್ರನ್ನು ಹೊಡೆದು ರಕ್ತಸಿಕ್ತಗೊಳಿಸಿದ ಪುಂಡತನ, ನಾವು ಹೇಗೆ ನಾಗರಿಕ ಸಮಾಜವೆಂದು ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಎಬ್ಬಿಸುತ್ತದೆ. ರಸ್ತೆಯ ನಿಯಮ ಪಾಲಿಸುವವರು ತಪ್ಪಿತಸ್ಥರಾಗುತ್ತಿದ್ದರೆ, ಕಾನೂನು ಯಾವತ್ತಿಗೆ ಕೇವಲ ಕಾಗದದ ಮೇಲೇ ಉಳಿಯಬೇಕು? ಈ ಘಟನೆಯ ನಂತರ ಪೊಲೀಸರ ಕ್ರಮ ಶ್ಲಾಘನೀಯವಾದರೂ, ಮನೋಭಾವದ ಬದಲಾವಣೆ ಮಾತ್ರವೇ ಇಂತಹ ಘಟನೆಗಳ ತಡೆಗಟ್ಟುವ ದಾರಿ.ಬಸ್ ಚಾಲಕರು,…
ಮುಂದೆ ಓದಿ..
