ಅಂಕಣ 

ಸಮಸ್ಯೆಗಳು – ಸಲಹೆಗಳು – ಮನವಿ..

Taluknewsmedia.com

Taluknewsmedia.comಸಮಸ್ಯೆಗಳು – ಸಲಹೆಗಳು – ಮನವಿ. ಶಿಕ್ಷಣ ಸಂಘಟನೆಗಳು – ಶಿಕ್ಷಕರು – ಪೋಷಕರು – ಸಾಮಾಜಿಕ ಕಾರ್ಯಕರ್ತರು – ಚಿಂತಕರು – ಶಿಕ್ಷಣ ತಜ್ಞರು – ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು… ಮಾನ್ಯ ಮುಖ್ಯಮಂತ್ರಿಗಳು,ಮಾನ್ಯ ಶಿಕ್ಷಣ ಸಚಿವರು,ಮಾನ್ಯ ಮುಖ್ಯ ಕಾರ್ಯದರ್ಶಿಗಳು,ಮಾನ್ಯ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಶಿಕ್ಷಣ ಕ್ಷೇತ್ರದಸಂಬಂಧಪಟ್ಟವರು……. ( ಇವರಿಗೆ ದಯವಿಟ್ಟು ತಲುಪಿಸಿ ) ಚುನಾವಣೆ ಮತ್ತು ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳಬೇಕು ಏಕೆಂದರೆ ಅವರಿದ್ದಲ್ಲಿ ಹೆಚ್ಚು ನಿಖರತೆ ಇರುತ್ತದೆ ಎನ್ನುವ ಕಾರಣದಿಂದ ಅವರಿಗೆ ಈ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡಬಾರದು ಎಂದು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವಾಗ ಶಿಕ್ಷಕರ ಸಮಸ್ಯೆಗಳ ಕುರಿತು ಒಂದು ಟಿಪ್ಪಣಿ……. ರಾಜ್ಯದ ವಿವಿಧ ಭಾಗಗಳ ನನ್ನ ಕೆಲವು ಆತ್ಮೀಯ ಶಿಕ್ಷಕರುಗಳೊಂದಿಗೆ ಖಾಸಗಿಯಾಗಿ ಮಾತನಾಡಿದ ನಂತರ ಅವರುಗಳು ನೀಡಿದ ಕೆಲವು ಸಲಹೆಗಳನ್ನು ಕ್ರೋಢೀಕರಿಸಿ ಈ ಸಮಸ್ಯೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು…

ಮುಂದೆ ಓದಿ..
ಅಂಕಣ 

ಓದು ಮತ್ತು ಮಾನವೀಯ ಪ್ರಜ್ಞೆ…..ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?…..

Taluknewsmedia.com

Taluknewsmedia.comಓದು ಮತ್ತು ಮಾನವೀಯ ಪ್ರಜ್ಞೆ….. ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?….. ಈ ರೀತಿಯ ಅನುಮಾನ ಬಲವಾಗುತ್ತಿದೆ.ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ…… ಆದರೆ,ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ, ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ…

ಮುಂದೆ ಓದಿ..
ಅಂಕಣ 

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ………

Taluknewsmedia.com

Taluknewsmedia.comಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ……… ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು…………… ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ. ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು ಕಷ್ಟ, ಬೇಸರ, ಜಗಳ, ಅಸಮಾಧಾನ, ನಿರಾಸೆಯ ಅನುಭವವಾದರು ಪ್ರೀತಿ ಎಂಬ ಭಾವ ತೀವ್ರತೆ ಅದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತದೆ. ಕೊನೆಗೆ ತೀರಾ ಹೊಂದಾಣಿಕೆ ಸಾಧ್ಯವಾಗದಿದ್ದರೆ ಮುಂದೆ ಬಿಡುಗಡೆ ಹೊಂದಬಹುದು ಅಥವಾ ಅದು ಕೋಪವಾಗಿ ಪರಿವರ್ತನೆ ಹೊಂದಿ ಬೇರೆ ಬೇರೆಯಾಗಬಹುದು. ಇದೊಂದು ಸಹಜ ಪ್ರಕ್ರಿಯೆ.ಆದರೆ ಪ್ರೀತಿಯಲ್ಲಿ ಇದನ್ನು ಮೀರಿದ ಈ ಎರಡು ಘಟನೆಗಳು ಪ್ರೀತಿಸುವ ಜೀವಗಳನ್ನು ವಯಸ್ಸು, ಲಿಂಗದ…

ಮುಂದೆ ಓದಿ..
ಅಂಕಣ 

ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ..

Taluknewsmedia.com

Taluknewsmedia.comಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ……..ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಬೃಹತ್ ಮೆರವಣಿಗೆ ಘೋಷಣೆಗಳು ನಡೆಯುತ್ತಿದ್ದವು. ಜನರ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ವಾಹನ ಸಂಚಾರ ಸಂಪೂರ್ಣ ನಿಂತು ರಸ್ತೆಗಳು ಭಣಗುಡುತ್ತಿದ್ದವು. ಬೀದಿಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಲ್ಲಿ ಒಂದಷ್ಟು ಗಲಭೆ, ಬೆಂಕಿ, ಹಿಂಸಾಚಾರ, ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್ ನಡೆಯುತ್ತಿದ್ದವು. ಸರ್ಕಾರಗಳು ನಡುಗುತ್ತಿದ್ದವು. ಆದರೆ 2025 ರ ಜುಲೈ 9 ರ ಈ ಬಂದ್ ಇಷ್ಟೊಂದು ಸಂಪರ್ಕ ಕ್ರಾಂತಿಯ ನಡುವೆಯೂ ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ಮಾಧ್ಯಮಗಳು ಪ್ರಚಾರವನ್ನೂ ಕೊಡಲಿಲ್ಲ. ಕಾರಣ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಅಥವಾ…

ಮುಂದೆ ಓದಿ..
ಅಂಕಣ 

ಗುರು ಪೂರ್ಣಿಮೆ…

Taluknewsmedia.com

Taluknewsmedia.comಗುರು ಪೂರ್ಣಿಮೆ… ಅರಿವೇ ಗುರು…… ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ….. ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು….. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದು, ಎಷ್ಟು ಬಾಲಿಶವಾದದ್ದು, ಎಷ್ಟು ಸತ್ಯವಾದದ್ದು, ಎಷ್ಟು ವಾಸ್ತವವಾದದ್ದು, ಎಷ್ಟು ಪ್ರಯೋಜನಕಾರಿಯಾದದ್ದು, ಎಷ್ಟು ಅಪಾಯಕಾರಿಯಾದದ್ದು, ಎಷ್ಟು ಮಾನವೀಯವಾದದ್ದು, ಎಷ್ಟು ಸಂಕುಚಿತವಾದದ್ದು ಎಂಬ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ… ಅರಿವೇ ಗುರು, ಅರಿವೇ ಜ್ಯೋತಿರ್ಲಿಂಗ, ನಾನೆಂಬುದು ಅರಿವಿ ನೆಂಜಲು ಮುಂತಾದ ಅರಿವಿನ ವಿಮರ್ಶೆಗಳು ಅರಿವಿನ ಅರಿವನ್ನು ತಿಳುವಳಿಕೆ, ಜ್ಞಾನಾರ್ಜನೆಯ ಮಾರ್ಗ ಮತ್ತು ಗುರಿ ಮುಂತಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಅರಿವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿ ಒಟ್ಟು ವ್ಯಕ್ತಿತ್ವ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ… ಅರಿವು ಕೇವಲ ಸಕಾರಾತ್ಮಕ…

ಮುಂದೆ ಓದಿ..
ಅಂಕಣ 

ದೇವರು ಮತ್ತು ಮನುಷ್ಯ….. ಇದ್ದರೆ ಇರಲಿ ಬಿಡಿ ದೇವರು ನಮಗೇನು……

Taluknewsmedia.com

Taluknewsmedia.comದೇವರು ಮತ್ತು ಮನುಷ್ಯ….. ಇದ್ದರೆ ಇರಲಿ ಬಿಡಿ ದೇವರು ನಮಗೇನು…… ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ……. ದೇವರಿದ್ದರೆ ನಮಗೇ ಒಳ್ಳೆಯದು….. ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ,….. ದೇವರು ಸರ್ವ ಶಕ್ತನಾಗಿದ್ದರೆ ತನಿಖೆ ಮಾಡಿಕೊಳ್ಳಲಿ ಬಿಡಿ…. ನಾವು ಪೂಜೆ ಮಾಡುವುದಿಲ್ಲ, ನಮಾಜು ಮಾಡುವುದಿಲ್ಲ, ಪ್ರಾರ್ಥನೆ ಮಾಡುವುದಿಲ್ಲ…. ಹಸಿದವರಿಗೆ ಅನ್ನ ನೀಡುತ್ತೇವೆ,ಅಗತ್ಯವಿದ್ದವರಿಗೆ ಬಟ್ಟೆ ನೀಡುತ್ತೇವೆ,ಅವಶ್ಯಕತೆ ಇದ್ದವರಿಗೆ ರಕ್ತವನ್ನೂ ನೀಡುತ್ತೇವೆ….. ನಾವು ಮಸೀದಿಗೆ ಹೋಗುವುದಿಲ್ಲ,ನಾವು ದೇವಸ್ಥಾನಕ್ಕೆ ಹೋಗುವುದಿಲ್ಲ,ನಾವು ಚರ್ಚಿಗೂ ಹೋಗುವುದಿಲ್ಲ….. ವೃದ್ದಾಶ್ರಮಕ್ಕೆ ಹೋಗುತ್ತೇವೆ‌ ಸಾಂತ್ವನ ಹೇಳಲು,ಅನಾಥಾಶ್ರಮಕ್ಕೆ ಹೋಗುತ್ತೇವೆ ಸಹಾಯ ಮಾಡಲು,ಆಸ್ಪತ್ರೆಗಳಿಗೆ ಹೋಗುತ್ತೇವೆ ಸೇವೆ ಮಾಡಲು…. ದೇವರಿಗೆ ಏನನ್ನೂ ಕೊಡುವುದಿಲ್ಲ,ದೇವರಲ್ಲಿ ಏನನ್ನೂ ಬೇಡುವುದಿಲ್ಲ,ದೇವರಿಗಾಗಿ ಕೊಲ್ಲುವುದೂ ಇಲ್ಲ….. ಮನುಷ್ಯರಿಗಾಗಿ ಬದುಕುತ್ತೇವೆ,ಮನುಷ್ಯರಿಗಾಗಿ ಕೊಡುತ್ತೇವೆ,ಮನುಷ್ಯರಿಗಾಗಿಯೇ ಜೀವಿಸುತ್ತೇವೆ….. ದೇವರನ್ನು ಪ್ರೀತಿಸುವುದಿಲ್ಲ, ದೇವರನ್ನು ದ್ವೇಷಿಸುವುದಿಲ್ಲ,ದೇವರನ್ನು ಹುಡುಕಾಡುವುದಿಲ್ಲ….. ಮನುಷ್ಯರನ್ನು ಪ್ರೀತಿಸುತ್ತೇವೆ,ಮನುಷ್ಯರನ್ನು ಗೌರವಿಸುತ್ತೇವೆ,ಮನುಷ್ಯತ್ವವನ್ನೇ ಹುಡುಕುತ್ತೇವೆ….. ಮನುಷ್ಯ ಮತ್ತು ದೇವರಲ್ಲಿ ನಮ್ಮ ಆಯ್ಕೆ ಮನುಷ್ಯ…

ಮುಂದೆ ಓದಿ..
ಅಂಕಣ 

ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ……….

Taluknewsmedia.com

Taluknewsmedia.comಐವಿಎಫ್ ( I V F ) ಎಂಬ ವೈದ್ಯಕೀಯ ಸಂಶೋಧನಾ ವಿಧಾನದ ಮೂಲಕ ಮದುವೆಯಾಗದೆ, ಅಧಿಕೃತವಾಗಿ ಗಂಡ ಎನ್ನುವ ಗಂಡಿನ ಸಂಬಂಧವಿಲ್ಲದೆ, ಪರಿಚಿತ ಅಥವಾ ಅಪರಿಚಿತ ಪುರುಷನ ಸಂಗ್ರಹಿತ ವೀರ್ಯಾಣುವಿನ ಸಹಾಯದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಜನ್ಮ ನೀಡುವುದು ವೈದ್ಯಕೀಯ ಕ್ಷೇತ್ರದ ಒಂದು ಸಾಧನೆಯಾಗಿದೆ. ನಾನಾ ಕಾರಣಗಳಿಂದ ಮಕ್ಕಳನ್ನು ಪಡೆಯಲಾಗದ ಕೆಲವು ದಂಪತಿಗಳಿಗೆ ಈ ವಿಧಾನ ಒಂದು ವರವಾಗಿದೆ. ಆದರೆ ಕೆಲವರು ಮದುವೆಯಾಗದೆ, ಗಂಡನಿಲ್ಲದೆ ಒಂಟಿಯಾಗಿ ಮಕ್ಕಳನ್ನು ಹೆತ್ತು ಸಾಕಿ ಸಲಹುವುದು ಈ ಸಮಾಜದಲ್ಲಿ, ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಎಷ್ಟು ಸರಿ ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತಿರಬಹುದು. ಒಂದು ಹಂತದ ಇತಿಹಾಸ ಪ್ರಜ್ಞೆಯ ಮೂಲಕ ಈ ವಿಷಯವನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ವಿಶ್ವದ ನಾಗರಿಕ ಮಾನವ ಇತಿಹಾಸ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಇಡೀ ಸಮಾಜದ ಅತ್ಯಂತ ಮಹತ್ವದ ಘಟಕ ಮತ್ತು ಆಧಾರ ಸ್ತಂಭ ಕುಟುಂಬವೇ ಆಗಿದೆ. ಅಂದರೆ ಗಂಡ…

ಮುಂದೆ ಓದಿ..
ಅಂಕಣ 

ಜ್ಯೋತಿ ಯಾವ ಜಾತಿ……. ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ

Taluknewsmedia.com

Taluknewsmedia.comಜ್ಯೋತಿ ಯಾವ ಜಾತಿ……. ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇದ್ದ ತಳ್ಳುಗಾಡಿಯ ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್ ಮಾಡುವುದನ್ನು ಹಾಗೇ ನೋಡುತ್ತಾ ನಿಂತ ನನಗೆ ಸಿನಿಮಾ ಶೈಲಿಯ ರೀತಿ ಸುರುಳಿ ಸುರುಳಿಯಾಗಿ ನೆನಪುಗಳ ಬುತ್ತಿ ಬಿಚ್ಚಿಕೊಳ್ಳತೊಡಗಿ ನನ್ನನ್ನು 40 ವರ್ಷಗಳ ಹಿಂದಕ್ಕೆ ಕರೆದೊಯ್ಯಿತು……………..‌‌‌‌‌‌‌……… ನನ್ನಪ್ಪ ಕೂಡ ಬಟ್ಟೆಗಳನ್ನು ಒಗೆಯುವ ಮತ್ತು ಇಸ್ತ್ರಿ ಮಾಡುವ ಕೆಲಸ ಮಾಡುತ್ತಿದ್ದರು. ಊರ ಬೀದಿಯ ಆಲದ ಮರದ ಕೆಳಗೆ ಒಂದು ಮರದ ಉದ್ದದ ಹಲಗೆಯ ಮೇಲೆ ತುಂಬಾ ತೂಕದ ಕಬ್ಬಿಣದ ಒಂದು ಇಸ್ತ್ರಿ ಪೆಟ್ಟಿಗೆ ಇಟ್ಟುಕೊಂಡಿದ್ದರು. ಪಕ್ಕದಲ್ಲೇ ಇದ್ದಿಲು ಹಾಕುವ ಒಂದು ಒಲೆ. ತಲೆಗೆ ಟವಲು ಸುತ್ತಿದ ಪಟಾಪಟಿ ಚೆಡ್ಡಿಯ ಹರಕಲು ಬನಿಯನ್ನಿನ, ಕೆದರಿದ ತಲೆಯ, ಕುರುಚಲು ಗಡ್ಡದ, ಕಪ್ಪುಬಣ್ಣದ…

ಮುಂದೆ ಓದಿ..
ಅಂಕಣ 

ದೇವನಹಳ್ಳಿ ರೈತರ ಹೋರಾಟ……. ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ರೈತ ಹೋರಾಟ ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ ನೆನಪಾಗುತ್ತಿರುವ ರೈತರ ಆ ದಿನಗಳು…….

Taluknewsmedia.com

Taluknewsmedia.comತುಂಬಾ ಹಿಂದೆ ಏನು ಅಲ್ಲ, ಕೇವಲ 25/30 ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆಗೆ ಭಾರತ ಸಹಿ ಹಾಕಿದ ನಂತರ ಅಭಿವೃದ್ಧಿ ಎಂಬ ಮಾನದಂಡವೇ ಬದಲಾಯಿತು. ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಸ್ವಲ್ಪಮಟ್ಟಿಗೆ ರಾಜಾಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅದೇ ಹಾದಿಯಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಬಂಡವಾಳ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದರು. ಬಹುತೇಕ ಅವರು ಕೇಳಿದ ಎಲ್ಲಾ ಸೌಕರ್ಯಗಳನ್ನು ಸರ್ಕಾರವೇ ಅವರಿಗೆ ಶರಣಾದಂತೆ ಒದಗಿಸಿದರು. ಮುಖ್ಯವಾಗಿ ಯಥೇಚ್ಛವಾಗಿ ಭೂಮಿಯನ್ನು ಧಾರೆಯೆರೆದು ಕೊಡಲಾಯಿತು. ಜೊತೆಗೆ ವಿಶೇಷ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳನ್ನು ಸ್ಥಾಪಿಸಲಾಯಿತು. ಅದಕ್ಕಾಗಿ ಕೃಷಿ, ಅರಣ್ಯ, ಖಾಸಗಿ ಮುಂತಾದ ಅನೇಕ ಉಪಯುಕ್ತ ಜಮೀನುಗಳನ್ನು ಹಿಂದೆ ಮುಂದೆ ನೋಡದೆ ನೀಡಲಾಯಿತು. ಉದ್ಯೋಗ ಸೃಷ್ಟಿಯಾಗುತ್ತದೆ, ಜಿಡಿಪಿಗೆ ಬಹುದೊಡ್ಡ ಕೊಡುಗೆಯಾಗುತ್ತದೆ, ಸರ್ಕಾರಿ…

ಮುಂದೆ ಓದಿ..
ಅಂಕಣ 

ಯಾವುದು ಮುಖ್ಯ – ಯಾವುದು ತಪ್ಪು ದಾರಿ……..ಆಗಬೇಕಾದ ಕೆಲಸಗಳು – ನಾವು ಸದಾ ಚರ್ಚಿಸುತ್ತಿರುವ ವಿಷಯಗಳು…..

Taluknewsmedia.com

Taluknewsmedia.comಯಾವುದು ಮುಖ್ಯ – ಯಾವುದು ತಪ್ಪು ದಾರಿ……..ಆಗಬೇಕಾದ ಕೆಲಸಗಳು – ನಾವು ಸದಾ ಚರ್ಚಿಸುತ್ತಿರುವ ವಿಷಯಗಳು…….ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು……. 1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ……. 2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸರ ರಕ್ಷಣೆ…. 3) ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಕಾರಣ ಅಭಿವೃದ್ಧಿಯ ಅಸಮರ್ಪಕ ನಿರ್ವಹಣೆ…. 4) ಚುನಾವಣಾ ರಾಜಕೀಯದ ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆ ದ್ವೇಷ ಅಸೂಯೆಗಳ ಗೂಡಾಗಿ ಮನಸ್ಸುಗಳು ಒಡೆಯುತ್ತಿವೆ. ಅದನ್ನು ಒಂದುಗೂಡಿಸುವ ಪ್ರಯತ್ನ ಆಗಬೇಕಿದೆ…. 5) ಜಾತಿ ಪದ್ದತಿಯ ನಿರ್ಮೂಲನೆಗೆ ಸಣ್ಣ ಪ್ರಮಾಣದ ಪ್ರಯತ್ನಗಳಾದರು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ….. 6) ಭಾರತೀಯ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಹಿಂಸಾತ್ಮಕ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕಿದೆ…. 7) ಅರ್ಹತೆಗೆ ತಕ್ಕಂತ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿ ಹೊಟ್ಟೆಪಾಡಿನ ಉದ್ಯೋಗಗಳೇ ಹೆಚ್ಚಾಗುತ್ತಿರುವುದು ನಿರುದ್ಯೋಗ ಹೆಚ್ಚಾಗಲು ಕಾರಣವಾಗಿ ಭವಿಷ್ಯದಲ್ಲಿ ಆಗುವ…

ಮುಂದೆ ಓದಿ..