ಭಾನುವಾರದ ನಮ್ಮ ಕುಟುಂಬದ ದಿನಚರಿ…….
Taluknewsmedia.comತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ. ಮಧ್ಯದಲ್ಲಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದ ನಮ್ಮ ಪುಟ್ಟ ಕಂದ ಈ ಕದಲುವಿಕೆಯಿಂದ ಕಣ್ಣು ಬಿಟ್ಟಿತು. ತನ್ನ ಕತ್ತನ್ನು ಪಕ್ಕಕ್ಕೆ ಹೊರಳಿಸಿ ಅವರ ಅಮ್ಮನನ್ನು ತದೇಕಚ್ಚಿತ್ತದಿಂದ ನೋಡಿತು. ಅಮ್ಮ ಆ ಮಗುವಿಗೂ ಒಂದು ಮುತ್ತು ನೀಡಿ ಎದ್ದು ಹೊರ ನಡೆಯಿತು. ಪುಟ್ಟ ಕಂದ ಮತ್ತೆ ನನ್ನನ್ನು ಬಾಚಿ ತಬ್ಬಿಕೊಂಡು ನಿದ್ದೆಗೆ ಜಾರಿತು. ಇಂದು ಭಾನುವಾರ. ಹಾಗೇ ಆ ಮಗುವನ್ನೂ, ಕಿಟಕಿಯಾಚೆಯ ತುಂತುರು ಸೋನೆ ಮಳೆಯನ್ನು ದಿಟ್ಟಿಸುತ್ತಾ…
ಮುಂದೆ ಓದಿ..
