ಅಂಕಣ 

ಸಮಾಜ ಸೇವೆ ಎಂದರೇನು ?

Taluknewsmedia.com

Taluknewsmedia.comಸಮಾಜ ಸೇವೆ ಎಂದರೇನು ? ನಿಸ್ವಾರ್ಥವೇ ?ತ್ಯಾಗವೇ ?ಸ್ವಾರ್ಥದ ಮುಖವಾಡವೇ ?ವೃತ್ತಿಯೇ ?ಹವ್ಯಾಸವೇ ?ಕರ್ತವ್ಯವೇ ?ವ್ಯಾಪಾರ ವ್ಯವಹಾರವೇ ?ಅಧಿಕಾರ ಹಣ ಪ್ರಚಾರದ ಮೋಹವೇ ?ಪಲಾಯನ ಮಾರ್ಗವೇ ?ನಾಯಕತ್ವದ ಪ್ರದರ್ಶನವೇ ?ಕೆಲಸವಿಲ್ಲದವರ ಅನಾವಶ್ಯಕ ಓಡಾಟವೇ ?ಹೊಟ್ಟೆ ಪಾಡಿನ ದಾರಿಯೇ ?ಬುದ್ದಿಯ ತೋರ್ಪಡಿಕೆಯೇ ?ಮನಸ್ಸಿನ ಅಹಂನ ತಣಿಸುವಿಕೆಯೇ ?ಜೀವನದ ಸಾಧನೆಯೇ ?ಅನುಭವದ ವಿಸ್ತರಣೆಯೇ ?ಜ್ಞಾನದ ಹಂಚಿಕೆಯೇ ?ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ?ಬದುಕಿನ ಸಾರ್ಥಕತೆಯೇ ?ನಿರ್ಭಾವುಕ ಮನಸ್ಥಿತಿಯೇ ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸಮಾಜ ಸಂಕೀರ್ಣವಾದಷ್ಟು ಸಮಾಜ ಸೇವೆ ವಿವಿಧ ಅರ್ಥಗಳನ್ನು ಪಡೆಯುತ್ತಿದೆ. ಮದರ್ ತೆರೇಸಾ ಅವರನ್ನು ಸಮಾಜ ಸೇವೆಯ ಬಹುದೊಡ್ಡ ಆದರ್ಶ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ಕೆಲವು ಧರ್ಮಾಧಾರಿತ ವ್ಯಕ್ತಿಗಳ ಮತಾಂತರ ಆರೋಪಗಳ ನಡುವೆಯೂ ಸಮಾಜ ಸೇವೆಗೆ ಇವರು ಒಂದು ಮಾದರಿ. ಕೊಲ್ಕತ್ತಾದ ಬೀದಿಗಳಲ್ಲಿ ಮಲಗಿದ್ದ ಅನಾಥ ಕುಷ್ಠರೋಗಿಗಳ ಸೇವೆಗೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಸೇವೆ ಸಲ್ಲಿಸುತ್ತಾ…

ಮುಂದೆ ಓದಿ..
ಅಂಕಣ 

ಕಳ್ಳ ಬೆಕ್ಕುಗಳು ಸಿಕ್ಕಿವೆ,ಗಂಟೆ ಕಟ್ಟೋಣ………

Taluknewsmedia.com

Taluknewsmedia.comಕಳ್ಳ ಬೆಕ್ಕುಗಳು ಸಿಕ್ಕಿವೆ,ಗಂಟೆ ಕಟ್ಟೋಣ……… 83 ವರ್ಷಗಳ ಹಿಂದೆ…… 1942 – ಆಗಸ್ಟ್ 9,ಬ್ರಿಟೀಷರೇ ಭಾರತ ಬಿಟ್ಟು ತೊಲಗಿ…..ಕ್ವಿಟ್ ಇಂಡಿಯಾ…… 2024 – ಆಗಸ್ಟ್ 9, ( ಇಂದು ಆಗಸ್ಟ್ 22 ಸ್ವಲ್ಪ ತಡವಾಗಿ)ಭ್ರಷ್ಟಾಚಾರಿಗಳೇ – ಜಾತಿವಾದಿಗಳೇ, ಧರ್ಮಾಂಧರೇ,ಮತಾಂಧರೇ,ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ – ಐಕ್ಯವಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ.ದಯವಿಟ್ಟು ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡಬೇಡಿ. ನಾವು ಸಾಮಾನ್ಯ ಜನ. ನೀವು ಬದುಕಿ ನಮ್ಮನ್ನು ಬದುಕಲು ಬಿಡಿ…… ಹಾಗಾದರೆ ಯಾರು ಬದಲಾಗಬೇಕು ಮತ್ತು ಹೇಗೆ ಬದಲಾಗಬೇಕು…… 1) ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ಮೊದಲು ಬದಲಾಗಬೇಕಿದೆ…. ಅದರಲ್ಲೂ ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯಗಳ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ಉನ್ನತ ಅಧಿಕಾರದಲ್ಲಿರುವವರು, ಎಲ್ಲಾ ಗೆಜೆಟೆಡ್ ಶ್ರೇಣಿಯ ಅಧಿಕಾರಿಗಳು ಭ್ರಷ್ಟ ಮುಕ್ತರಾಗಿ ಸಂವಿಧಾನಾತ್ಮಕ ಅಧಿಕಾರ ಬಳಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದು ಕ್ರಾಂತಿಯೇ…

ಮುಂದೆ ಓದಿ..
ಅಂಕಣ 

ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆಯವರಿಗೊಂದು ಬಹಿರಂಗ ಪತ್ರ…….

Taluknewsmedia.com

Taluknewsmedia.comಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆಯವರಿಗೊಂದು ಬಹಿರಂಗ ಪತ್ರ……. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ ಪದ್ಮ ವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀಯುತ ಡಿ. ವೀರೇಂದ್ರ ಹೆಗಡೆಯವರೇ ಮತ್ತು ಆ ರೀತಿಯ ಕರ್ನಾಟಕದ ಮಹತ್ವದ ವ್ಯಕ್ತಿಗಳೇ……… ಕಳೆದ 75 ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಮತ್ತು ಅದರ ಮುಖ್ಯಸ್ಥರಾದ ವೀರೇಂದ್ರ ಹೆಗಡೆಯವರ ಪಾತ್ರವೂ ಇದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಕೇಂದ್ರವಾಗಿ ಕರ್ನಾಟಕದಲ್ಲಿ ಧರ್ಮಸ್ಥಳ ಮುಂಚೂಣಿಯಲ್ಲಿದೆ. ದಿನಕ್ಕೆ ಕನಿಷ್ಠವೆಂದರು 20 ರಿಂದ 30,000 ಭಕ್ತಾದಿಗಳು, ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಲ್ಲಿ ಸೇರುತ್ತಾರೆ. ನಿಮ್ಮ ಸಂಸ್ಥೆ ಉಚಿತ ಊಟದ ವ್ಯವಸ್ಥೆಯ ಜೊತೆಗೆ, ಕಡಿಮೆ ಬೆಲೆಯ ವಸತಿ ಸೌಕರ್ಯವನ್ನು ಒದಗಿಸುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿಯೂ ತಾವು…

ಮುಂದೆ ಓದಿ..
ಅಂಕಣ 

ಬೆಳಗಿನ ವಾಯುವಿಹಾರದಲ್ಲಿ ಕಂಡದ್ದು……..

Taluknewsmedia.com

Taluknewsmedia.comಬೆಳಗಿನ ವಾಯುವಿಹಾರದಲ್ಲಿ ಕಂಡದ್ದು…….. ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5/30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ….. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತಾವರಣ ಗಿಡಮರಗಳ ನಡುವಿನಿಂದ ತೂರಿಬಂದ ಪಕ್ಷಿಗಳ ಕಲರವ – ಮಂದಿರದಿಂದ ಭಕ್ತಿಗೀತೆ ಮಸೀದಿಯಿಂದ ನಮಾಜು, ಚರ್ಚಿನಿಂದ ಪ್ರಾರ್ಥನೆ ಮೂಡಿ ಬರುತ್ತಿದ್ದು ಸಂಗೀತದ ರಸಾನುಭವ ಮುದನೀಡಿತು……… ಬೆಳಗ್ಗೆ ಸೇವಿಸಿದ್ದ ಅಸ್ಸಾಂನ ರುಚಿ ರುಚಿಯಾದ ಮಸಾಲಾ ಟೀ ಸ್ವಾದ ಗಂಟಲಿನಿಂದ ಕೆಳಗಿಳಿದು ದೇಹ ಬೆಚ್ಚಗಾಗಿಸಿ ಸಂಭ್ರಮಿಸಿತು… ಹಾಗೇ ಸ್ವಲ್ಪ ದೂರ ನಡೆಯುತ್ತಿದ್ದಂತೆ ಒಂದು ರಸ್ತೆಯ ಬದಿಯಲ್ಲಿ ಸುಮಾರು 10/12 ವರ್ಷದ ಆಸುಪಾಸಿನ ಒಂದಷ್ಟು ಮಕ್ಕಳು ನಡುಗುವ ಚಳಿಯಲ್ಲೂ ಆ ದಿನದ ಪತ್ರಿಕೆಗಳನ್ನು ವಿಂಗಡಿಸಿ ಸೈಕಲ್ ಗೆ ಕಟ್ಟಿ ಗಡಿಬಿಡಿಯಲ್ಲಿ ಹೊರಡುವ ಆತುರದಲ್ಲಿದ್ದರು. ಅವರಿಗೆ ಸಿಗುವ ಸಂಬಳ ತಿಂಗಳಿಗೆ 500/1000 ಇರಬಹುದಷ್ಟೇ.ಎಷ್ಟೋ…

ಮುಂದೆ ಓದಿ..
ಅಂಕಣ 

ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು.

Taluknewsmedia.com

Taluknewsmedia.comಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು. ” Looking ugly and madness is the ultimate status (Freedom ) of mind “ ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ “ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು….. ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ…. ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ….. ಬಗೆಹರಿಸಲಾಗದ,…

ಮುಂದೆ ಓದಿ..
ಅಂಕಣ 

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ……..

Taluknewsmedia.com

Taluknewsmedia.comಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ…….. ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ? ಅವರು ಅಷ್ಟೊಂದು ಆಳವಾಗಿ ಬೀದಿ ನಾಯಿಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆಯೇ ಅಥವಾ ಕಾನೂನಿನ ಪ್ರಕಾರ ಏನಾದರೂ ಪರಿಹಾರ ಸಿಗಬಹುದು ಎಂದು ಅರ್ಜಿದಾರರು ಭಾವಿಸಿರಬಹುದೇ ? ಇದು ತುಂಬಾ ಸಣ್ಣ ವಿಷಯ ಎನಿಸುವುದಿಲ್ಲವೇ ? ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಬೀದಿ ನಾಯಿಗಳ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು ಎನ್ನುವ ಅರಿವಿರುವುದಿಲ್ಲವೇ ? ದೇಶದ ಅತ್ಯಂತ ಪುಟ್ಟ ಹಳ್ಳಿಯಿಂದ ರಾಷ್ಟ್ರದ ರಾಜಧಾನಿಯವರೆಗೂ ಈ ಬೀದಿ ನಾಯಿಗಳ ಬಗ್ಗೆ ಚರ್ಚಿಸುವಂತಹುದೇನಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ, ಪಿಡಿಒ ಇಂದ ಹಿಡಿದು…

ಮುಂದೆ ಓದಿ..
ಅಂಕಣ 

ಸುಪ್ರಭಾತ……….

Taluknewsmedia.com

Taluknewsmedia.comಸುಪ್ರಭಾತ………. ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ ಹೆಚ್ಚಾಗಬಹುದು, ಕೆಲವೊಮ್ಮೆ ಬಡತನವೂ ಹೆಚ್ಚಾಗಬಹುದು. ಮತ್ತೆ ಕೆಲವೊಮ್ಮೆ ಸಾಲಗಾರರು ಆಗಬಹುದು. ಆದರೆ ಅವರ ಮನಸ್ಥಿತಿಗಳಲ್ಲಿ ಮಾತ್ರ ಬಹುತೇಕ ಸಾಮ್ಯತೆ ಇರುತ್ತದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಯೋಚಿಸುತ್ತಾರೆ. ಅತ್ಯಂತ ಶ್ರೀಮಂತರು, ತೀರಾ ಕಡು ಬಡವರು ಮಾತ್ರ ತಮ್ಮ ಆಲೋಚನೆಯಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ವಠಾರ ಸಂಸ್ಕೃತಿಯೇ ಇರಲಿ ಅಥವಾ ಅಪಾರ್ಟ್ಮೆಂಟ್ ಸಂಸ್ಕೃತಿಯೇ ಇರಲಿ ಮನಸ್ಥಿತಿ ಮಾತ್ರ ಅದೇ ಸಂಸ್ಕೃತಿಯಾಗಿರುತ್ತದೆ. ವಿದ್ಯಾಭ್ಯಾಸ ಅಥವಾ ಅಕ್ಷರಸ್ಥರ ಸಂಖ್ಯೆ ಹೆಣ್ಣು ಗಂಡು ಇಬ್ಬರಲ್ಲಿಯು ಹೆಚ್ಚಾದರೂ ಸಹ ಮನೋಭಾವ ಮಾತ್ರ ಅದೇ ಇರುತ್ತದೆ. ಆ ರೀತಿಯ ಒಂದು ವಠಾರದ ಸುಪ್ರಭಾತ……. ಭಕ್ತಿಯ ಸುಪ್ರಭಾತವಲ್ಲ,ಬದುಕಿನ ಸುಪ್ರಭಾತ ಕೇಳಿ……. ಬಹುತೇಕ ನಗರದ ವಠಾರಗಳಲ್ಲಿ…

ಮುಂದೆ ಓದಿ..
ಅಂಕಣ 

ಅವರ ಮೇಲೆ ಇವರು,ಇವರ ಮೇಲೆ ಅವರು……

Taluknewsmedia.com

Taluknewsmedia.comಅವರ ಮೇಲೆ ಇವರು, ಇವರ ಮೇಲೆ ಅವರು…… ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ………. ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ. ಬಸ್ಸು ಹತ್ತಲು ಓಡಿದ ಪ್ರಯಾಣಿಕಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮುಂದೆ ಚಲಿಸುತ್ತದೆ. ಈತ ಬಸ್ಸಿನ ಬಾಗಿಲ ಕಂಬಿ ಹಿಡಿದವನು ಕೈ ಜಾರಿ ದೊಪ್ಪನೆ ಕೆಳಗೆ ಬೀಳುತ್ತಾನೆ. ಕಾಲಿಗೆ ಬಲವಾದ ಪೆಟ್ಟಾಗುತ್ತದೆ. ಡ್ರೈವರ್ ಅನ್ನು ಶಪಿಸುತ್ತಾಮತ್ತೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾನೆ.ಅದೇ ಬಸ್ಸಿನ ಡ್ರೈವರ್ ತನ್ನ ಮಗನನ್ನು ಸೇರಿಸಲು ಒಂದು ಖಾಸಗಿ ಶಾಲೆಗೆ ಹೋಗುತ್ತಾನೆ. ಅಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿ ಹಿಂಸಿಸಿದ ಪ್ರಿನ್ಸಿಪಾಲರು ಕೊನೆಗೆ ಹೆಚ್ಚಿನ ಡೊನೇಷನ್ ಕಟ್ಟಿಸಿಕೊಂಡು ಶಾಲೆಗೆ ಸೇರಿಸಿಕೊಳ್ಳುತ್ತಾರೆ. ಪ್ರವೇಶ ಮುಗಿಸಿ ಹೊರಬಂದ ಡ್ರೈವರ್ ಸುಲಿಗೆ ಮಾಡಿದ್ದಕ್ಕಾಗಿ ಶಾಲೆಯನ್ನು ಬಯ್ಯುತ್ತಾ ಮನೆ ಕಡೆ ಹೊರಡುತ್ತಾನೆ.ಅದೇ ಶಾಲೆಯ ಪ್ರಿನ್ಸಿಪಾಲರು ಜ್ವರದ ಕಾರಣಕ್ಕಾಗಿ ಒಂದು…

ಮುಂದೆ ಓದಿ..
ಅಂಕಣ 

ಬದಲಾವಣೆ………ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು…….

Taluknewsmedia.com

Taluknewsmedia.comಬದಲಾವಣೆ……… ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು……. ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು…… ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು….. ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು…….. ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು……. ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು….. ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು…… ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು……. ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು……… ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು…… ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು….. ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು…… ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು…… ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು……. ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು……. ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ…

ಮುಂದೆ ಓದಿ..
ಅಂಕಣ 

” ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು…..”

Taluknewsmedia.com

Taluknewsmedia.comಜಾರ್ಜ್ ಬರ್ನಾರ್ಡ್ ಶಾನೊಬೆಲ್ ಪ್ರಶಸ್ತಿ ಪುರಸ್ಕೃತ.ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ……. ಇದು ಸಹಜ ಸ್ವಾಭಾವಿಕ ಮತ್ತು ಒಳ್ಳೆಯ ವಿಷಯಗಳಿಗೆ ಮಾತ್ರ ಅನ್ವಯ. ದುಷ್ಟ, ವಿನಾಶಕಾರಿ ಮತ್ತು ಜೀವ ವಿರೋಧಿ ಕೆಲಸಗಳಿಗೆ ಇದು ಅನ್ವಯವಾಗುವುದಿಲ್ಲ.ನಾವು ಏನನ್ನಾದರೂ ವಿಭಿನ್ನ, ವಿಶಿಷ್ಟ, ಸಾಮಾನ್ಯರಿಗೆ ಅಸಾಮಾನ್ಯವಾಗಿ ಕಾಣುವಂತ ಪ್ರಯೋಗಾತ್ಮಕ ಕೆಲಸಕ್ಕೆ ಕೈಹಾಕಿದಾಗ ನಮ್ಮ ಸಮಾಜದ ಪ್ರತಿಕ್ರಿಯೆ ಹೆಚ್ಚು ನಕಾರಾತ್ಮಕವಾಗಿರುತ್ತದೆ. ಅದು ಒಳ್ಳೆಯ ಪ್ರತಿಕ್ರಿಯೆಯಲ್ಲ ಎಂದು ಖ್ಯಾತ ಸಾಹಿತಿ ನಾಟಕಕಾರ ಚಿಂತಕ ವಾಗ್ಮಿ ಬರ್ನಾರ್ಡ್ ಶಾ ಸುಮಾರು ನೂರು ವರ್ಷಗಳ ಹಿಂದೆಯೇ ಹೇಳಿದ್ದಾರೆ.ಇಲ್ಲಿ ಸಲಹೆಗಳು, ಹಿತ ನುಡಿಗಳು, ಮನವಿಗಳು, ಕಾಳಜಿ ಪೂರ್ವಕ ಒತ್ತಾಯಗಳು, ಪ್ರೀತಿ – ಆತಂಕ – ಮಮಕಾರದ ಮಾತುಗಳು ಖಂಡಿತ ಸ್ವೀಕಾರಾರ್ಹ. ಇದನ್ನು ಹೊರತುಪಡಿಸಿ ಲೇವಡಿ, ಹಾಸ್ಯ, ವ್ಯಂಗ್ಯ, ಅಜ್ಞಾನ, ಅಸೂಯೆ, ಕೀಟಲೆ, ಬೇಜವಾಬ್ದಾರಿ, ಉಡಾಫೆ ಮಾತುಗಳು ಮಾತ್ರ ಖಂಡನೀಯ ಮತ್ತು ಮೇಲಿನ…

ಮುಂದೆ ಓದಿ..