ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚನೆ – 1.37 ಲಕ್ಷ ರೂ. ಸುಲಿಗೆ
Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು, ಜುಲೈ 21: ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಸೈಬರ್ ವಂಚಕರು ಮತ್ತೊಮ್ಮೆ ತಮ್ಮ ಬಲೆ ಬೀಸಿರುವ ಘಟನೆ ಬೆಳಕಿಗೆ ಬಂದಿದೆ. ತಿಲಕ್ ರೆಡ್ಡಿ ಅವರಿಗೆ ಕಂಪನಿಯಲ್ಲಿ ವರ್ಷಕ್ಕೆ 14 ಲಕ್ಷ ರೂ. ಪ್ಯಾಕೇಜ್ ಇರುವ ಹುದ್ದೆ ಕೊಡುತ್ತೇವೆ ಎಂದು ಭರವಸೆ ನೀಡಿದ ವಂಚಕರು, ಮೊದಲು ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ₹1,37,000/- ಮೊತ್ತವನ್ನು PhonePe ಮತ್ತು ಬ್ಯಾಂಕ್ ಖಾತೆಗಳ ಮೂಲಕ ಕಳುಹಿಸಿದ್ದಾರೆ. ಆದರೆ ಉದ್ಯೋಗ ನೀಡುವುದಾಗಿ ಹೇಳಿ ವಂಚಕರು ದಿನಾಂಕವನ್ನು ಮುಂದೂಡುತ್ತಾ ಬಂದಿದ್ದಾರೆ. ಬಳಿಕ ಅವರ ಹಿನ್ನಲೆ ಪರಿಶೀಲಿಸಿದಾಗ, ಇವರು ಇದೇ ರೀತಿಯಲ್ಲಿ ಅನೇಕ ಮಂದಿಗೆ ಮೋಸ ಮಾಡಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ದೂರುದಾರರು “ಉದ್ಯೋಗ ಕೊಡಿಸುವ ಹೆಸರಿನಲ್ಲಿ ನನ್ನಿಂದ ಹಣ ಪಡೆದು ಸೈಬರ್ ವಂಚನೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ…
ಮುಂದೆ ಓದಿ..
