ಗೌಡಗೇರಿ ವಿದ್ಯುತ್ ದುರಂತ: ರೈತನ ಬಲಿ ಪಡೆದ ಹೆಸ್ಕಾಂ ನಿರ್ಲಕ್ಷ್ಯ – ನಮ್ಮ ಜಮೀನುಗಳು ಸಾವಿನ ಕೂಪಗಳಾಗುತ್ತಿವೆಯೇ?..
Taluknewsmedia.comಗೌಡಗೇರಿ ವಿದ್ಯುತ್ ದುರಂತ: ರೈತನ ಬಲಿ ಪಡೆದ ಹೆಸ್ಕಾಂ ನಿರ್ಲಕ್ಷ್ಯ – ನಮ್ಮ ಜಮೀನುಗಳು ಸಾವಿನ ಕೂಪಗಳಾಗುತ್ತಿವೆಯೇ?.. ರೈತನ ಪಾಲಿಗೆ ಭೂಮಿ ಎನ್ನುವುದು ಬೇವರಿಳಿಸಿ ಬದುಕು ಕಟ್ಟಿಕೊಳ್ಳುವ ಪವಿತ್ರ ತಾಣ. ಆದರೆ ಇಂದು ಅದೇ ಜಮೀನುಗಳು ಜೀವ ನೀಡುವ ಬದಲು ಜೀವ ಹಿಂಡುವ ಮೃತ್ಯುಪಾಶಗಳಾಗಿ ಬದಲಾಗುತ್ತಿವೆ. ಅನ್ನ ನೀಡುವ ಕೈಗಳು ಸಮಾಜಕ್ಕೆ ಶಕ್ತಿ ನೀಡಬೇಕಾದ ವಿದ್ಯುತ್ ಮೂಲಸೌಕರ್ಯದ ನಿರ್ಲಕ್ಷ್ಯದಿಂದಾಗಿ ಬೂದಿಯಾಗುತ್ತಿರುವುದು ವ್ಯವಸ್ಥೆಯ ಅತಿದೊಡ್ಡ ವೈಫಲ್ಯ. ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ಸಂಭವಿಸಿದ ಇತ್ತೀಚಿನ ದುರಂತವು ಕೇವಲ ಒಂದು ಆಕಸ್ಮಿಕವಲ್ಲ; ಇದು ಹೆಸ್ಕಾಂನ ವ್ಯವಸ್ಥಿತ ನಿರ್ಲಕ್ಷ್ಯಕ್ಕೆ ಹಾಗೂ ಗ್ರಾಮೀಣ ಜನರ ಜೀವದ ಬಗೆಗಿನ ಅಸಡ್ಡೆಗೆ ಸಂದ ಜ್ವಲಂತ ಸಾಕ್ಷಿಯಾಗಿದೆ. ಹುಲ್ಲು ತೆಗೆಯಲು ಹೋದವ ಹೆಣವಾಗಿ ಬಂದ ಗೌಡಗೇರಿ ಗ್ರಾಮದ ನಿವಾಸಿಯಾದ 52 ವರ್ಷದ ಸುರೇಶ ಮಣ್ಣೂರ ಅವರು ಕೃಷಿಯನ್ನೇ ನಂಬಿ ಬದುಕುತ್ತಿದ್ದ ಸಜ್ಜನ ರೈತ. ಎಂದಿನಂತೆ ತಮ್ಮ ಜಮೀನಿನಲ್ಲಿ…
ಮುಂದೆ ಓದಿ..
