ಕಾನೂನು ರಕ್ಷಕನೇ ಭಕ್ಷಕನಾದಾಗ: ಕೆಂಭಾವಿ ಪೊಲೀಸ್ ದೌರ್ಜನ್ಯದ ಸತ್ಯಾಸತ್ಯತೆಗಳು…
Taluknewsmedia.comಕಾನೂನು ರಕ್ಷಕನೇ ಭಕ್ಷಕನಾದಾಗ: ಕೆಂಭಾವಿ ಪೊಲೀಸ್ ದೌರ್ಜನ್ಯದ ಸತ್ಯಾಸತ್ಯತೆಗಳು… ಸಮಾಜ ಮತ್ತು ಸರ್ಕಾರದ ನಡುವಿನ ಸಾಮಾಜಿಕ ಒಪ್ಪಂದದ ಬುನಾದಿಯೇ ‘ನಂಬಿಕೆ’. ಸಾಮಾನ್ಯ ಮನುಷ್ಯ ತನಗೊಂದು ಕಷ್ಟ ಬಂದಾಗ ಮೊದಲು ಓಡುವುದು ಪೊಲೀಸ್ ಠಾಣೆಗೆ. ಆದರೆ, ರಕ್ಷಣೆ ನೀಡಬೇಕಾದ ಖಾಕಿ ವಸ್ತ್ರವೇ ರಕ್ತದಾಹಿಯಾದಾಗ, ಸಂವಿಧಾನದ ಆಶಯಗಳು ಬುಡಮೇಲಾಗುತ್ತವೆ. ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನಡೆದ ಘಟನೆಯು ಕೇವಲ ಒಂದು ವೈಯಕ್ತಿಕ ದೌರ್ಜನ್ಯವಲ್ಲ; ಅದು ವ್ಯವಸ್ಥೆಯ ನೈತಿಕ ಪತನದ ಕರಾಳ ಅಧ್ಯಾಯ. ಒಬ್ಬ ಅಮಾಯಕನ ಮೇಲೆ ಕಾನೂನಿನ ಹೆಸರಿನಲ್ಲಿ ನಡೆದ ಈ ಮೃಗೀಯ ಹಲ್ಲೆಯು ಇಡೀ ಪೊಲೀಸ್ ಇಲಾಖೆಯ ಘನತೆಗೆ ಮೆತ್ತಿದ ಕಪ್ಪು ಚುಕ್ಕೆಯಾಗಿದೆ. ಅಪಘಾತವೋ ಅಥವಾ ವ್ಯವಸ್ಥಿತ ಕೊಲೆಯೋ? ತನಿಖೆಯ ಹಾದಿ ತಪ್ಪಿದ ಪರಿ. ಐದು ತಿಂಗಳ ಹಿಂದೆ ಸುರಪುರದ ಕರಡ್ಕಲ್ ಬಳಿ ಸಂಭವಿಸಿದ ಒಂದು ಆಟೋ ಅಪಘಾತ ಈ ಎಲ್ಲಾ ಸಂಘರ್ಷಗಳ ಮೂಲ. ಈ…
ಮುಂದೆ ಓದಿ..
