ಖರ್ಚಿಗೆ ಏನಾದ್ರೂ ಕೊಟ್ರೆ ಜಾಸ್ತಿ ಬರೀತೀನಿ!’: ರೈತರ ನೋವಿನಲ್ಲಿ ಲಾಭ ಹುಡುಕುವ ಭ್ರಷ್ಟ ವ್ಯವಸ್ಥೆಯ ಕರಾಳ ಮುಖ..
Taluknewsmedia.com‘ಖರ್ಚಿಗೆ ಏನಾದ್ರೂ ಕೊಟ್ರೆ ಜಾಸ್ತಿ ಬರೀತೀನಿ!’: ರೈತರ ನೋವಿನಲ್ಲಿ ಲಾಭ ಹುಡುಕುವ ಭ್ರಷ್ಟ ವ್ಯವಸ್ಥೆಯ ಕರಾಳ ಮುಖ.. ಚಿಕ್ಕಮಗಳೂರು ಜಿಲ್ಲೆಯ ಕಣತಿ ಗ್ರಾಮದ ಆ ರೈತನ ಕಣ್ಣೀರಿಗೆ ಬೆಲೆ ಕಟ್ಟುವವರು ಯಾರು? ವರ್ಷಗಟ್ಟಲೆ ಮಗುವಿನಂತೆ ಸಾಕಿ ಸಲಹಿದ್ದ 65 ಅಡಿಕೆ ಮರಗಳು ಒಂದೇ ರಾತ್ರಿಯಲ್ಲಿ ಕಾಡಾನೆಗಳ ಪಾಲಾಗಿವೆ. ಕಣ್ಣೆದುರೇ ಸರ್ವಸ್ವವನ್ನೂ ಕಳೆದುಕೊಂಡು ಕಂಗಾಲಾದ ರೈತ ಸರ್ಕಾರಿ ವ್ಯವಸ್ಥೆಯ ಮೆಟ್ಟಿಲೇರಿದರೆ, ಅಲ್ಲಿ ಸಾಂತ್ವನದ ಬದಲು ಎದುರಾಗಿದ್ದು ಭ್ರಷ್ಟಾಚಾರದ ಅಸಹ್ಯಕರ ನರಹಂತಕ ಮುಖ. ಇದು ಕೇವಲ ಒಂದು ಲಂಚದ ಪ್ರಕರಣವಲ್ಲ; ಇದು ವ್ಯವಸ್ಥೆಯು ಜನಸಾಮಾನ್ಯರಿಗೆ ಮಾಡುತ್ತಿರುವ ಘೋರ ವಿಶ್ವಾಸಘಾತ. ಬೆಳೆ ಕಳೆದುಕೊಂಡ ರೈತನ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಳ್ಳಲು ಹವಣಿಸುವ ಇಂತಹ ಅಧಿಕಾರಿಗಳು ಕಾಡಾನೆಗಳಿಗಿಂತಲೂ ಭೀಕರವಾಗಿ ನಮಗೆ ಕಾಣಿಸುತ್ತಿದ್ದಾರೆ. ಚಿಕ್ಕಮಗಳೂರು ಅರಣ್ಯ ವಿಭಾಗದ ಕಣತಿ ಬೀಟ್‌ನ ಡಿ.ಆರ್.ಎಫ್.ಓ (DRFO) ವೀರಭದ್ರ ನಾಯಕ್ ಅವರು ರೈತನ ಮುಂದೆ ಇಟ್ಟ ಬೇಡಿಕೆ ಕೇಳಿದರೆ ಅಸಹ್ಯವಾಗುತ್ತದೆ.…
ಮುಂದೆ ಓದಿ..
