ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಕೋಟೆಯಲ್ಲಿ ಬಿರುಕು: ನಿಮ್ಮ ಲಗೇಜ್ ನಿಜಕ್ಕೂ ಸುರಕ್ಷಿತವೇ?…
Taluknewsmedia.comಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಕೋಟೆಯಲ್ಲಿ ಬಿರುಕು: ನಿಮ್ಮ ಲಗೇಜ್ ನಿಜಕ್ಕೂ ಸುರಕ್ಷಿತವೇ?… ಅಂತರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ನಾವು ಬೆಲೆಬಾಳುವ ವಸ್ತುಗಳನ್ನು ಒಳಗೊಂಡ ಲಗೇಜ್‌ಗಳನ್ನು ‘ಚೆಕ್-ಇನ್’ ಮಾಡಿದಾಗ, ವಿಮಾನ ನಿಲ್ದಾಣದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಅತಿಯಾದ ನಂಬಿಕೆ ಇಟ್ಟಿರುತ್ತೇವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇತ್ತೀಚೆಗೆ ನಡೆದ ಘಟನೆ ಈ ನಂಬಿಕೆಯನ್ನು ಅಕ್ಷರಶಃ ನುಚ್ಚುನೂರು ಮಾಡಿದೆ. ಅತಿ ಸುರಕ್ಷಿತ ವಲಯವೆಂದು ಪರಿಗಣಿಸಲಾಗುವ ಏರ್ ಪೋರ್ಟ್ ಒಳಗೆ ಪ್ರಯಾಣಿಕರ ಲಗೇಜ್‌ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಮಾಯವಾಗಿರುವುದು, ನಮ್ಮ ಭದ್ರತಾ ವ್ಯವಸ್ಥೆಯ ಕಣ್ಗಾವಲಿನಲ್ಲಿರುವ ಗಂಭೀರ ಬಿರುಕುಗಳನ್ನು ಎತ್ತಿ ತೋರಿಸುತ್ತಿದೆ. ಭದ್ರತಾ ತಪಾಸಣೆಯ ಕಣ್ಣು ತಪ್ಪಿಸಿ ನಡೆದ ಕೈಚಳಕ.. ಮಹಿಳೆಯೊಬ್ಬರು ಬೆಂಗಳೂರಿನಿಂದ ಅಬುಧಾಬಿ ಮಾರ್ಗವಾಗಿ ಅಮೆರಿಕಾಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದ ಕಟ್ಟುನಿಟ್ಟಾದ ನಿಯಮಗಳಂತೆ…
ಮುಂದೆ ಓದಿ..
