ಜೀವಂತವಿರುವಾಗ ಜಾಗ ಸಿಗಲಿಲ್ಲ, ಸತ್ತ ಮೇಲೂ ಸಮಾಧಿಗೆ ನೆಮ್ಮದಿಯಿಲ್ಲ: ರಾಂಪುರದ ಈ ತಾಯಿಯ ಕಣ್ಣೀರಿಗೆ ಸಾಕ್ಷಿ ಯಾರು?
Taluknewsmedia.comಜೀವಂತವಿರುವಾಗ ಜಾಗ ಸಿಗಲಿಲ್ಲ, ಸತ್ತ ಮೇಲೂ ಸಮಾಧಿಗೆ ನೆಮ್ಮದಿಯಿಲ್ಲ: ರಾಂಪುರದ ಈ ತಾಯಿಯ ಕಣ್ಣೀರಿಗೆ ಸಾಕ್ಷಿ ಯಾರು? ಸಾವಿನ ನಂತರದ ಗೌರವಕ್ಕೂ ಒದಗಿದ ನೈತಿಕ ಅಧಃಪತನ.. ಮನುಷ್ಯನ ಇಡೀ ಬದುಕಿನ ಜಂಜಾಟಗಳು, ಆಸೆ-ಆಕಾಂಕ್ಷೆಗಳು ಮತ್ತು ಸಂಘರ್ಷಗಳು ಅಂತಿಮವಾಗಿ ವಿರಮಿಸುವುದು ಆರಡಿ ಮಣ್ಣಿನಲ್ಲಿ. “ಸತ್ತ ಮೇಲಾದರೂ ಆ ಜೀವ ಶಾಂತಿಯಿಂದಿರಲಿ” ಎಂಬುದು ನಮ್ಮ ಸಂಸ್ಕೃತಿ ಮತ್ತು ಮನುಷ್ಯತ್ವ ನಮಗೆ ಕಲಿಸಿಕೊಟ್ಟಿರುವ ಕನಿಷ್ಠ ಸಂಸ್ಕಾರ. ಆದರೆ, ಇಂದಿನ ಸ್ವಾರ್ಥಪರ ಸಮಾಜದಲ್ಲಿ ಮನುಷ್ಯ ಸತ್ತು ಮಣ್ಣಾದ ಮೇಲೂ ಆತನಿಗೆ ಶಾಂತಿ ಸಿಗುತ್ತಿಲ್ಲ ಎನ್ನುವುದು ಜೀರ್ಣಿಸಿಕೊಳ್ಳಲಾಗದ ಸತ್ಯ. ಚಿಕ್ಕಬಳ್ಳಾಪುರದಲ್ಲಿ ನಡೆದ ಈ ಅಮಾನವೀಯ ಘಟನೆಯು ಕೇವಲ ಒಂದು ಅಪರಾಧವಲ್ಲ; ಇದು ನಮ್ಮ ಸಮಾಜದ ‘ನೈತಿಕ ಅಧಃಪತನ’ದ ಪರಮಾವಧಿ. ಸತ್ತು ಮಣ್ಣಾದವನಿಗೂ ಇಲ್ಲಿ ನೆಮ್ಮದಿಯಿಲ್ಲದಂತಾಗಿರುವುದು ಮನುಕುಲವೇ ತಲೆತಗ್ಗಿಸುವಂತಹ ಸಂಗತಿ. ಭರವಸೆಯಾಗಿದ್ದ ಮಗನ ಸ್ಮಾರಕಕ್ಕೆ ತಗುಲಿದ ಗ್ರಹಣ… ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ರಾಂಪುರ ಗ್ರಾಮವದು.…
ಮುಂದೆ ಓದಿ..
